ಸರ್ಕಾರ ರಚನೆ ಮಾಡುವ ಚಿಂತನೆ ಕೈಬಿಟ್ಟ ‘ಇಂಡಿಯಾ’ ಮೈತ್ರಿಕೂಟ | ಬಲಿಷ್ಠ ವಿಪಕ್ಷವಾಗಿ ಕಾರ್ಯನಿರ್ವಹಿಸಲು INDIA ಕೂಟ ನಾಯಕರ ತೀರ್ಮಾನ |

June 6, 2024
10:12 AM
ಲೋಕಸಭಾ ಚುನಾವಣೆಯಲ್ಲಿ ಸರಳ ಬಹುಮತ ಕೊರತೆ ಕಾರಣದಿಂದಾಗಿ ಸರ್ಕಾರ ರಚನೆ ಮಾಡುವ ಚಿಂತನೆಯನ್ನು ‘ಇಂಡಿಯಾ’ ಮೈತ್ರಿಕೂಟ ಕೈಬಿಟ್ಟಿದೆ.

ಕಳೆದ ಹತ್ತು ವರ್ಷ ಮೋದಿ ಆಡಳಿತದಿಂದ(Modi Govt) ಕಂಗೆಟ್ಟಿದ್ದ ಮೈತ್ರಿ ಪಕ್ಷಗಳು(alliance ) ಈ ಬಾರಿ ಎಲ್ಲರೂ ಒಂದಾಗಿ ಮೋದಿಯನ್ನು ಎದುರಿಸಲು ಸನ್ನದ್ಧರಾದರು. ಅವರ ನಿರೀಕ್ಷೆಯಂತೆ ಅವರ ಒಗ್ಗಟ್ಟು ತಕ್ಕ ಮಟ್ಟಿನ ಫಲವನ್ನು ನೀಡಿದತು. ಆದರೆ ಸರ್ಕಾರ(Govt) ರಚಿಸುವಷ್ಟು ಬಹುಮತ(Majority) ಪಡೆಯುವಲ್ಲಿ ಮೈತ್ರಿ ಕೂಟ ಇಂಡಿಯಾ ವಿಫಲವಾಯ್ತು. ಈ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ(Lok sabha Election-2024) ಸರಳ ಬಹುಮತ ಕೊರತೆ ಕಾರಣದಿಂದಾಗಿ ಸರ್ಕಾರ ರಚನೆ ಮಾಡುವ ಚಿಂತನೆಯನ್ನು ‘ಇಂಡಿಯಾ’ ಮೈತ್ರಿಕೂಟ (INDIA Bloc) ಕೈಬಿಟ್ಟಿದೆ. ಫಲಿತಾಂಶ ಕುರಿತು ಚರ್ಚೆಗೆ ಇಂಡಿಯಾ ಒಕ್ಕೂಟದ ನಾಯಕರು ಸಭೆ ನಡೆಸಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ನಿವಾಸದಲ್ಲಿ ನಾಯಕರ ಸಭೆ ನಡೆಯಿತು.

Advertisement
Advertisement

ಬೇರೆಯವರನ್ನು ಸೆಳೆದು, ಅವರ ಆಣತಿಯಂತೆ ಕುಣಿಯುವುದು ಬೇಡ. ಇಂಡಿಯಾ ಮೈತ್ರಿಕೂಟ ಒಗ್ಗಟ್ಟಾಗಿಯೇ ಇರಲಿ, ಬೇರೆಯವರ ಹಸ್ತಕ್ಷೇಪ ಬೇಡ. ಸರ್ಕಾರ ಮಾಡಲು ಸಾಕಷ್ಟು ಸವಾಲುಗಳಿವೆ. ಬಲಿಷ್ಠ ವಿಪಕ್ಷವಾಗಿ ಕಾರ್ಯನಿರ್ವಹಿಸಲು ಇಂಡಿಯಾ ಒಕ್ಕೂಟ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ. ಮೋದಿ ಹಾಗೂ ಬಿಜೆಪಿ ವಿರುದ್ಧ ಗಟ್ಟಿ ಧ್ವನಿಯಾಗಿ 2014 ರಿಂದ ಮಾಡಿರುವ ತಪ್ಪುಗಳನ್ನ ಒತ್ತಿ ಹೇಳೋಣ. ಮೋದಿಯ ದುರಾಡಳಿತದ ಬಗ್ಗೆ ಜನರಿಗೆ ತಿಳಿಸುವತ್ತ ಕಾರ್ಯಾನಿರ್ವಹಿಸುವುದು.

ಸದನದಲ್ಲಿ ಬಿಜೆಪಿಯ ಧ್ವನಿ ಅಡಗಿಸುವ ಕೆಲಸ ಮಾಡಬೇಕು ಮೈತ್ರಿಕೂಟದ ನಾಯಕರು ಪ್ರತಿಜ್ಞೆ ಮಾಡಿದ್ದಾರೆ. ಸಭೆ ಬಳಿಕ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ನಾವೆಲ್ಲರೂ ಸೇರಿ ಒಂದೇ ಧ್ವನಿಯಲ್ಲಿ ಹೇಳುತ್ತಿದ್ದೇವೆ. ನಾವು ಸಂವಿಧಾನ ಅಡಿ ಬರುವ ಎಲ್ಲ ಮತದಾರ ಬಂಧುಗಳಿಗೆ ಧನ್ಯವಾದ ತಿಳಿಸುತ್ತೇವೆ. ಪ್ರಜಾಪ್ರಭುತ್ವ ರಕ್ಷಣೆ ಮಾಡಿದ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದ್ದಾರೆ.

  • ಅಂತರ್ಜಾಲ ಮಾಹಿತಿ
Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಸಣ್ಣ ರೈತರಿಗೆ ಇಲ್ಲಿ ‘ಎಟಿಎಂ’ ಈ ಹಸು ! ಹಾಲಿನಲ್ಲಿ 8.4% ಕೊಬ್ಬು , ತುಪ್ಪದ ರೇಟು ಭರ್ಜರಿ..!
January 31, 2026
10:56 PM
by: ದ ರೂರಲ್ ಮಿರರ್.ಕಾಂ
ಅಸ್ಸಾಂ ಗಡಿಯಲ್ಲೇ ಅಡಿಕೆ ಹಬ್…! 30,000 ಹೆಕ್ಟೇರ್ ಅಡಿಕೆ ಕೃಷಿಗೆ ಬಲ – ಮಿಜೋರಾಂ ಸಿಎಂ ಉದ್ಘಾಟಿಸಿದ ಹೊಸ ಘಟಕ
January 31, 2026
10:13 PM
by: ಮಿರರ್‌ ಡೆಸ್ಕ್
ಗ್ರಾಮೀಣ ಜನರು ಸ್ವಾವಲಂಬಿಗಳಾಗಬೇಕು: ಸಿದ್ದರಾಮಯ್ಯ ಕರೆ
January 31, 2026
2:55 PM
by: ಮಿರರ್‌ ಡೆಸ್ಕ್
ಆಯುಷ್ಮಾನ್ ಚಿಕಿತ್ಸೆ ನಿರಾಕರಿಸುವಂತಿಲ್ಲ‌ | ದಕ್ಷಿಣ ಕನ್ನಡ ಜಿಲ್ಲೆಯ ಆಸ್ಪತ್ರೆಗಳಿಗೆ ಡಿಹೆಚ್ಒ ಖಡಕ್ ಸೂಚನೆ
January 31, 2026
6:43 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror