ಕಳೆದ ಹತ್ತು ವರ್ಷ ಮೋದಿ ಆಡಳಿತದಿಂದ(Modi Govt) ಕಂಗೆಟ್ಟಿದ್ದ ಮೈತ್ರಿ ಪಕ್ಷಗಳು(alliance ) ಈ ಬಾರಿ ಎಲ್ಲರೂ ಒಂದಾಗಿ ಮೋದಿಯನ್ನು ಎದುರಿಸಲು ಸನ್ನದ್ಧರಾದರು. ಅವರ ನಿರೀಕ್ಷೆಯಂತೆ ಅವರ ಒಗ್ಗಟ್ಟು ತಕ್ಕ ಮಟ್ಟಿನ ಫಲವನ್ನು ನೀಡಿದತು. ಆದರೆ ಸರ್ಕಾರ(Govt) ರಚಿಸುವಷ್ಟು ಬಹುಮತ(Majority) ಪಡೆಯುವಲ್ಲಿ ಮೈತ್ರಿ ಕೂಟ ಇಂಡಿಯಾ ವಿಫಲವಾಯ್ತು. ಈ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ(Lok sabha Election-2024) ಸರಳ ಬಹುಮತ ಕೊರತೆ ಕಾರಣದಿಂದಾಗಿ ಸರ್ಕಾರ ರಚನೆ ಮಾಡುವ ಚಿಂತನೆಯನ್ನು ‘ಇಂಡಿಯಾ’ ಮೈತ್ರಿಕೂಟ (INDIA Bloc) ಕೈಬಿಟ್ಟಿದೆ. ಫಲಿತಾಂಶ ಕುರಿತು ಚರ್ಚೆಗೆ ಇಂಡಿಯಾ ಒಕ್ಕೂಟದ ನಾಯಕರು ಸಭೆ ನಡೆಸಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ನಿವಾಸದಲ್ಲಿ ನಾಯಕರ ಸಭೆ ನಡೆಯಿತು.
ಬೇರೆಯವರನ್ನು ಸೆಳೆದು, ಅವರ ಆಣತಿಯಂತೆ ಕುಣಿಯುವುದು ಬೇಡ. ಇಂಡಿಯಾ ಮೈತ್ರಿಕೂಟ ಒಗ್ಗಟ್ಟಾಗಿಯೇ ಇರಲಿ, ಬೇರೆಯವರ ಹಸ್ತಕ್ಷೇಪ ಬೇಡ. ಸರ್ಕಾರ ಮಾಡಲು ಸಾಕಷ್ಟು ಸವಾಲುಗಳಿವೆ. ಬಲಿಷ್ಠ ವಿಪಕ್ಷವಾಗಿ ಕಾರ್ಯನಿರ್ವಹಿಸಲು ಇಂಡಿಯಾ ಒಕ್ಕೂಟ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ. ಮೋದಿ ಹಾಗೂ ಬಿಜೆಪಿ ವಿರುದ್ಧ ಗಟ್ಟಿ ಧ್ವನಿಯಾಗಿ 2014 ರಿಂದ ಮಾಡಿರುವ ತಪ್ಪುಗಳನ್ನ ಒತ್ತಿ ಹೇಳೋಣ. ಮೋದಿಯ ದುರಾಡಳಿತದ ಬಗ್ಗೆ ಜನರಿಗೆ ತಿಳಿಸುವತ್ತ ಕಾರ್ಯಾನಿರ್ವಹಿಸುವುದು.
ಸದನದಲ್ಲಿ ಬಿಜೆಪಿಯ ಧ್ವನಿ ಅಡಗಿಸುವ ಕೆಲಸ ಮಾಡಬೇಕು ಮೈತ್ರಿಕೂಟದ ನಾಯಕರು ಪ್ರತಿಜ್ಞೆ ಮಾಡಿದ್ದಾರೆ. ಸಭೆ ಬಳಿಕ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ನಾವೆಲ್ಲರೂ ಸೇರಿ ಒಂದೇ ಧ್ವನಿಯಲ್ಲಿ ಹೇಳುತ್ತಿದ್ದೇವೆ. ನಾವು ಸಂವಿಧಾನ ಅಡಿ ಬರುವ ಎಲ್ಲ ಮತದಾರ ಬಂಧುಗಳಿಗೆ ಧನ್ಯವಾದ ತಿಳಿಸುತ್ತೇವೆ. ಪ್ರಜಾಪ್ರಭುತ್ವ ರಕ್ಷಣೆ ಮಾಡಿದ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ಉತ್ತರಾಖಂಡದ ಸ್ಥಳೀಯ ಬದ್ರಿ ಹಸು ಇಂದು ರೈತರ ಪಾಲಿಗೆ ಹೊಸ ಆದಾಯದ ಮೂಲವಾಗಿ…
ಪೇಪರ್ ಅವಲಕ್ಕಿ ಚೂಡಾಕ್ಕೆ ಬೇಕಾಗುವ ಸಾಮಗ್ರಿಗಳು : ಪೇಪರ್ ಅವಲಕ್ಕಿ – ಅಗತ್ಯ…
ಮಿಜೋರಾಂ ಮುಖ್ಯಮಂತ್ರಿ ಲಾಲ್ದುಹೋಮಾ ಅವರು ಶುಕ್ರವಾರ ಅಸ್ಸಾಂ ಗಡಿಯ ಬಳಿಯ ಮಿಜೋರಾಂನ ಕೊಲಾಸಿಬ್…
ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಹಳ್ಳಿಗಳ ಜನರು ಸ್ವಾವಲಂಬಿಗಳಾಗಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ…
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಯುಷ್ಮಾನ್ ಭಾರತ್ ಯೋಜನೆಯಡಿ ನೋಂದಣಿಯಾದ ಯಾವುದೇ ಆಸ್ಪತ್ರೆಗಳು ರೋಗಿಗಳಿಗೆ…
ಇದೇ ಭಾನುವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಕೇಂದ್ರ…