#Karnataka | ಅಧಿವೇಶನದಲ್ಲಿ ಪ್ರತಿಧ್ವನಿಸಿದ ದೈವಾರಾಧನೆ ವಿಚಾರ | ದೈವಾರಾಧನೆ ಪ್ರದರ್ಶನದ ವಸ್ತು ಅಲ್ಲ- ಗುಡುಗಿದ ಸುನೀಲ್‌ ಕುಮಾರ್‌ |

July 6, 2023
2:17 PM
ಶಿಕ್ಷಣ ಇಲಾಖೆಯು ಪ್ರತಿಭಾ ಕಾರಂಜಿಯಲ್ಲಿ ದೈವಾರಾಧನೆ, ಕೋಲ ಪ್ರದರ್ಶನ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿದೆ. ಜನಪದ ನೃತ್ಯಗಳ ಜೊತೆಗೆ ದೈವಾರಾಧನೆ ಕೂಡ ಸೇರಿಸಲಾಗಿದೆ. ದೈವಾರಾಧನೆ ಪ್ರದರ್ಶನದ ವಸ್ತು ಅಲ್ಲ ಎಂದು ಶಾಸಕ ಸುನಿಲ್‌ ಕುಮಾರ್‌ ಸದನದಲ್ಲಿ ಹೇಳಿದರು.

ಶಾಲೆಗಳ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ದೈವಾರಾಧನೆ, ಕೋಲ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದ್ದ ಕುರಿತು ಇಂದು ವಿಧಾನಸಭೆಯ ಅಧಿವೇಶನದಲ್ಲೂ ದೈವಾರಾಧನೆ ವಿಚಾರ ಸದ್ದು ಮಾಡಿದೆ.  ಶಿಕ್ಷಣ ಇಲಾಖೆ ವಿರುದ್ಧ ಶಾಸಕ ಸುನೀಲ್‌ ಕುಮಾರ್‌  ಈ ಸಂಬಂಧ ಗರಂ ಆದರು.

Advertisement
Advertisement
ಅಧಿವೇಶನದ ಶೂನ್ಯ ವೇಳೆಯಲ್ಲಿ ದೈವಾರಾಧನೆ ಬಗ್ಗೆ ಪ್ರಸ್ತಾಪಿಸಿದ ಸುನೀಲ್‌ ಕುಮಾರ್‌, ದಕ್ಷಿಣ ಕನ್ನಡ ಸೇರಿದಂತೆ ಮೂರ್ನಾಲ್ಕು ಜಿಲ್ಲೆಗಳಲ್ಲಿ ದೈವಾರಾಧನೆ ಪದ್ಧತಿ ಇದೆ. ಶಿಕ್ಷಣ ಇಲಾಖೆಯು ಪ್ರತಿಭಾ ಕಾರಂಜಿಯಲ್ಲಿ ದೈವಾರಾಧನೆ, ಕೋಲ ಪ್ರದರ್ಶನ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿದೆ. ಜನಪದ ನೃತ್ಯಗಳ ಜೊತೆಗೆ ದೈವಾರಾಧನೆ ಕೂಡ ಸೇರಿಸಲಾಗಿದೆ. ದೈವಾರಾಧನೆ ಪ್ರದರ್ಶನದ ವಸ್ತು ಅಲ್ಲ ಎಂದು ಗುಡುಗಿದರು.

ಶಿಕ್ಷಣ ಇಲಾಖೆ ಕೂಡಲೇ ಈ ಆದೇಶದಲ್ಲಿ ದೈವಾರಾಧನೆ, ಕೋಲ ಕೈಬಿಡಬೇಕು ಎಂದು ಒತ್ತಾಯ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಆದೇಶದಲ್ಲಿ ಬದಲಾವಣೆ ಮಾಡುವುದಾಗಿ ಭರವಸೆ ನೀಡಿದರು.

Advertisement
ದೈವಾರಾಧನೆಯು ತುಳುನಾಡಿನ ಆರಾಧನೆಯಲ್ಲಿ ಪ್ರಮುಖವಾದದ್ದು. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ದೈವಾರಾಧನೆ ಸಂಪ್ರದಾಯ ಆಚರಣೆಯಲ್ಲಿದೆ. ರಿಷಬ್‌ ಶೆಟ್ಟಿಯ ‘ಕಾಂತಾರ’ ಸಿನಿಮಾ ಬಂದ ನಂತರ ದೈವಾರಾಧನೆ ಸಂಸ್ಕೃತಿ ದೇಶ-ವಿದೇಶಗಳಲ್ಲಿ ಹೆಚ್ಚು ಚಿರಪರಿಚಿತವಾಯಿತು.

ಸಿನಿಮಾದಿಂದ ಪ್ರೇರೇಪಿತರಾದ ಅನೇಕರು ದೈವಾರಾಧನೆಯನ್ನು ಅನುಕರಿಸಲು ಶುರು ಮಾಡಿದ್ದರು. ಕೆಲವರು ಇದನ್ನೇ ಧಂದೆ ಮಾಡಿಕೊಂಡಿದ್ದರು. ದೈವಾರಾಧನೆ ಮಹತ್ವದ ಬಗ್ಗೆ ತಿಳಿಸಿದ ಬಳಿಕ ಅನುಕರಣೆ, ಧಂದೆ ನಿಯಂತ್ರಣಕ್ಕೆ ಬಂತು. ಆದರೂ ಒಂದಲ್ಲಾ ಒಂದು ವಿಚಾರವಾಗಿ ದೈವಾರಾಧನೆ ಸುದ್ದಿಯಾಗುತ್ತಲೇ ಇದೆ.

Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

Karnataka Weather | 27-04-2024 | ಮೋಡ- ಬಿಸಿಗಾಳಿ | ಮಳೆ ಸಾಧ್ಯತೆ ಕಡಿಮೆ |
April 27, 2024
3:21 PM
by: ಸಾಯಿಶೇಖರ್ ಕರಿಕಳ
ಕೋವಿ ಠೇವಣಾತಿ ಪ್ರಕರಣ | ಬೆಳ್ಳಾರೆ ಜಯಪ್ರಸಾದ್ ಜೋಶಿ ಹಾಗೂ ಇತರ 4 ರಿಟ್ ಅರ್ಜಿದಾರರ ಪರ ಹೈಕೋರ್ಟ್ ಆದೇಶ‌ |
April 27, 2024
2:15 PM
by: ದ ರೂರಲ್ ಮಿರರ್.ಕಾಂ
ಮಲೆನಾಡಗಿಡ್ಡ ಉಳಿಸುವ ಆಂದೋಲನಕ್ಕೆ ತೊಡಗುವ ಅನಿವಾರ್ಯತೆ ಇದೆ | ಯಾಕೆ ಗೊತ್ತಾ…?
April 25, 2024
11:48 PM
by: The Rural Mirror ಸುದ್ದಿಜಾಲ
ಏರಿದ ತಾಪಮಾನ | ರಾಜ್ಯದಲ್ಲಿ ಮುಂದಿನ 5 ದಿನ ಬೀಸಲಿದೆ ಬಿಸಿಗಾಳಿ ಎಚ್ಚರಿಕೆ..!
April 25, 2024
11:01 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror