ಶೃಂಗಸಭೆಯಲ್ಲಿ ಮತ್ತೆ ಮುನ್ನೆಲೆಗೆ ಬಂದ ಭಾರತ್‌ ಮರುನಾಮಕರಣ ವಿಷಯ | ಮೋದಿ ಮುಂದೆ ‘ಭಾರತ್’ ನಾಮಫಲಕ, ಚರ್ಚೆ ಶುರು.!

September 9, 2023
8:26 PM
ದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಗೆ ಇಡೀ ವಿಶ್ವದ ನಾಯಕರು ಭಾಗವಹಿಸುತ್ತಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಕೂರುವ ಆಸನದಲ್ಲಿ ‘ಪ್ರೈಂ ಮಿನಿಸ್ಟರ್ ಆಫ್ ಇಂಡಿಯಾ’ ಎಂದು ಬರೆಯುವ ಬದಲಾಗಿ ‘ಭಾರತ್’ ಎಂದು ಬರೆಯಲಾಗಿದೆ. ಇದು ದೇಶದ ಹೆಸರನ್ನು ಭಾರತ ಎಂದು ಮರುನಾಮಕರಣ ಮಾಡುತ್ತಾರೆ ಎಂಬ ಚರ್ಚೆ ಆರಂಭವಾಗಿದೆ

ಭಾರತ ನೇತೃತ್ವ ವಹಿಸಿರುವ, ಹಾಗೂ ಭಾರೀ ಕುತೂಹಲ ಮೂಡಿಸಿರುವ ಜಿ20 ಶೃಂಗಸಭೆಯ #G20Summit2023 ಮೇಲೆ ಇಡೀ ವಿಶ್ವದ ಕಣ್ಣು ನೆಟ್ಟಿದೆ. ಭಾರತದಲ್ಲಿ ಈ ಬಾರಿ ಶೃಂಗಸಭೆ ನಡೆಯುತ್ತಿರುವುದರಿಂದ ಭಾರತೀಯರಿಗೂ ಕೂಡ ಈ ಬಗ್ಗೆ ಕುತೂಹಲವಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜಿ20 ಶೃಂಗಸಭೆಯನ್ನು ಶನಿವಾರ ಬೆಳಗ್ಗೆ ಉದ್ಘಾಟಿಸಿದರು. ಜಿ20 ಸಮ್ಮೇಳನಕ್ಕೆ ಜಗತ್ತಿನ ಹಲವು ರಾಷ್ಟ್ರಗಳ ಮುಖ್ಯಸ್ಥರು ಹಾಜರಾಗಿದ್ದಾರೆ.

Advertisement
Advertisement

ದೇಶದಲ್ಲಿ ಕಳೆದ ಕೆಲ ದಿನದಿಂದ ಇಂಡಿಯಾ ಹೆಸರನ್ನು ಬದಲಾಯಿಸಿ ಭಾರತ ಎಂದು ಮರುನಾಮಕರಣ ಮಾಡಲಾಗುತ್ತಿದೆ ಎಂಬ ಚರ್ಚೆ ನಡೆಯುತ್ತಿತ್ತು. ಈ ವಿಚಾರ ಆಡಳಿತ ಪಕ್ಷದ ವಿರುದ್ಧ ವಿಪಕ್ಷಗಳು ಮುಗಿಬೀಳುವಂತೆಯೂ ಮಾಡಿತ್ತು. ಆ ಬಳಿಕ ಕೇಂದ್ರ ಸಚಿವರೇ ಸ್ಪಷ್ಟನೆ ನೀಡಿ ದೇಶದ ಹೆಸರನ್ನು ಭಾರತ ಎಂದು ಮರುನಾಮಕರಣ ಮಾಡುವ ಬಗ್ಗೆ ಯಾವುದೇ ಪ್ರಸ್ತಾಪ ಕೇಂದ್ರ ಸರ್ಕಾರದ ಮುಂದೆ ಇಲ್ಲ ಎಂದು ಹೇಳಿದ್ದರು. ಆ ನಂತರ ಈ ವಿಷಯ ತಣ್ಣಗಾಗಿತ್ತು. ಇದೀಗ ಮತ್ತೆ ಶೃಂಗ ಸಭೆಯಲ್ಲಿ ಮೋದಿ ಅವರು ಇಂಡಿಯಾ ಬದಲು ಭಾರತ್‌ ಅಂತ ಉಪಯೋಗಿಸಿ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.

ದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಗೆ ಇಡೀ ವಿಶ್ವದ ನಾಯಕರು ಭಾಗವಹಿಸುತ್ತಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಕೂರುವ ಆಸನದಲ್ಲಿ ‘ಪ್ರೈಂ ಮಿನಿಸ್ಟರ್ ಆಫ್ ಇಂಡಿಯಾ’ ಎಂದು ಬರೆಯುವ ಬದಲಾಗಿ ‘ಭಾರತ್’ ಎಂದು ಬರೆಯಲಾಗಿದೆ. ಇದು ಇದೀಗ ಸಾಕಷ್ಟು ಚರ್ಚೆಗೆ ಈಡಾಗಿದ್ದು, ದೇಶದ ಹೆಸರನ್ನು ಭಾರತ ಎಂದು ಮರುನಾಮಕರಣ ಮಾಡುತ್ತಾರೆ ಎಂಬ ಚರ್ಚೆ ಶುರುವಾಗಿರುವಾಗಲೇ ಜಾಗತಿಕ ಸಭೆಯಲ್ಲಿ ದೇಶದ ಪ್ರಧಾನಿ ಕೂರುವ ಆಸನದ ಮುಂದೆ ದೇಶವನ್ನು ಪ್ರತಿನಿಧಿಸುವ ನೇಮ್‌ ಪ್ಲೇಟ್‌ನಲ್ಲಿ ‘ಭಾರತ್’ ಎಂದು ಬರೆದಿರುವುದು ಕುತೂಹಲ ಮೂಡಿಸಿದೆ.

ಈ ಹಿನ್ನೆಲೆ ಇಂಡಿಯಾ ಹೆಸರನ್ನು ಭಾರತ್ ಎಂದು ಬದಲಾಯಿಸುವ ಚರ್ಚೆ ಮತ್ತೊಮ್ಮೆ ಭುಗಿಲೆದ್ದಿದ್ದು, ಸಾಮಾಜಿಕ ಜಾಲತಾಣದಲ್ಲಿ ಈಗಲೇ ಜನರು ಪರವಿರೋಧ ಚರ್ಚೆ ಶುರು ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಕೇಂದ್ರ ಸರ್ಕಾರ ಸಂಸತ್ತಿನ ವಿಶೇಷ ಅಧಿವೇಶನ ಕರೆಯುವುದಾಗಿ ಘೋಷಿಸಿತ್ತು. ಇದರ ನಂತರ, ಜಿ20 ಗೆ ರಾಷ್ಟ್ರಪತಿಗಳು ಕಳುಹಿಸಿರುವ ಆಹ್ವಾನ ಪತ್ರಿಕೆಯಲ್ಲಿ ಇಂಡಿಯಾದ ರಾಷ್ಟ್ರಪತಿ ಬದಲಿಗೆ ಭಾರತದ ಅಧ್ಯಕ್ಷ ಎಂದು ಬರೆಯಲಾಗಿದೆ ಎಂದು ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದವು.

ಅಂತರಾಷ್ಟ್ರೀಯ ಮಟ್ಟದಲ್ಲಿ ಇಂಡಿಯಾ ಎಂಬ ಹೆಸರನ್ನು ಕೇಂದ್ರ ಸರ್ಕಾರ ಬಳಸುವುದಕ್ಕೆ ಬದಲಾಗಿ ‘ಭಾರತ್’ ಎಂಬ ಹೆಸರನ್ನು ಇಡಲು ಹೊರಟಿದೆ ಎಂಬ ಚರ್ಚೆಗಳು ಆರಂಭವಾಗಿದ್ದು ಮಾತ್ರವಲ್ಲದೆ, ಸಂಸತ್ತಿನಲ್ಲಿ ಇಂಡಿಯಾ ಎಂಬ ಹೆಸರನ್ನು ಬದಲಿಸಿ ಭಾರತ್ ಎಂಬ ಹೆಸರನ್ನು ಶಾಶ್ವತವಾಗಿ ಮರುನಾಮಕರಣ ಮಾಡಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹವಣಿಸುತ್ತಿದೆ ಎಂದು ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.

Advertisement

G20 ಶೃಂಗಸಭೆಯ ಆರಂಭದ ಮೊದಲು, ಭಾರತದ ಮುಂದಾಳತ್ವದಲ್ಲಿ ನಡೆಯುತ್ತಿರುವ ಈ ಶೃಂಗಭೆಯಲ್ಲಿ ಆಫ್ರಿಕನ್ ಯೂನಿಯನ್‌ಗೆ G20 ನ ಶಾಶ್ವತ ಸದಸ್ಯತ್ವವನ್ನು ನೀಡಲಾಯಿತು.  ಹಾಗಾಗಿ ಆಫ್ರಿಕನ್ ಒಕ್ಕೂಟದ ಅಧ್ಯಕ್ಷರು G20 ನ ಖಾಯಂ ಸದಸ್ಯರಾಗಿ ಗುರುತಿಸಲ್ಪಟ್ಟರು. G20 ನ ಭಾರತದ ಅಧ್ಯಕ್ಷತೆಯು ದೇಶ ಮತ್ತು ವಿದೇಶಗಳಲ್ಲಿ ಒಗ್ಗಟ್ಟಿನ ಸಂಕೇತವಾಗಿದೆ. ಕೋಟ್ಯಂತರ ಭಾರತೀಯರು ಇದರೊಂದಿಗೆ ಸಂಪರ್ಕ ಹೊಂದಿದ್ದಾರೆ ಮತ್ತು ದೇಶದ 60 ಕ್ಕೂ ಹೆಚ್ಚು ನಗರಗಳಲ್ಲಿ 200 ಕ್ಕೂ ಹೆಚ್ಚು ಸಭೆಗಳನ್ನು ನಡೆಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

  • ಅಂತರ್ಜಾಲ ಮಾಹಿತಿ

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಬಾಗಲಕೋಟೆ ಜಿಲ್ಲೆಯ  ಶೂರ್ಪಾಲಿಯ ಶ್ರೀಲಕ್ಷ್ಮೀ ನರಸಿಂಹ ದೇವಾಲಯ
May 16, 2025
9:59 PM
by: The Rural Mirror ಸುದ್ದಿಜಾಲ
ಕಾಯಕ ಗ್ರಾಮ  ಯೋಜನೆ | ಹಿಂದುಳಿದ ಗ್ರಾಮಗಳನ್ನು ದತ್ತು ಸ್ವೀಕರಿಸುವಂತೆ ಸಲಹೆ
May 16, 2025
9:51 PM
by: The Rural Mirror ಸುದ್ದಿಜಾಲ
ಡೆಂಘೀ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳಲು ಸರ್ಕಾರದ ಸೂಚನೆ
May 16, 2025
9:43 PM
by: The Rural Mirror ಸುದ್ದಿಜಾಲ
ಕನಿಷ್ಠ ಬೆಂಬಲ ಬೆಲೆಯಲ್ಲಿ ಸೂರ್ಯಕಾಂತಿ ಖರೀದಿ ಪ್ರಕ್ರಿಯೆ ಶೀಘ್ರ ಆರಂಭ
May 16, 2025
9:38 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group