ನೋಡನೋಡುತ್ತಿದ್ದಂತೆಯೇ ‘ದಿ ಕೇರಳ ಸ್ಟೋರಿ’ ಸಿನಿಮಾ ಜಯಭೇರಿ ಬಾರಿಸಿದೆ. ದೇಶದ ಅನೇಕ ಕಡೆಗಳಲ್ಲಿ ಈ ಚಿತ್ರ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಟೀಸರ್ ಬಿಡುಗಡೆ ಆದಾಗಲೇ ಈ ಸಿನಿಮಾ ವಿವಾದ ಎಬ್ಬಿಸಿತ್ತು. ಈಗ ‘ದಿ ಕೇರಳ ಸ್ಟೋರಿ’ ಸಿನಿಮಾದ ಕಲೆಕ್ಷನ್ 156 ಕೋಟಿ ರೂಪಾಯಿ ಆಗಿದೆ. ಇದರಿಂದ ಚಿತ್ರತಂಡಕ್ಕೆ ಭರ್ಜರಿ ಗೆಲುವು ಸಿಕ್ಕಿದೆ.
ಸಿನಿಮಾ ಬಿಡುಗಡೆ ಆಗಿ 13 ದಿನ ಕಳೆದಿದ್ದರೂ ಕೂಡ ‘ದಿ ಕೇರಳ ಸ್ಟೋರಿ’ ಸಿನಿಮಾದ ಅಬ್ಬರ ನಿಂತಿಲ್ಲ. ಪ್ರತಿ ದಿನವೂ ಈ ಚಿತ್ರ ಉತ್ತಮವಾಗಿ ಕಲೆಕ್ಷನ್ ಮಾಡುತ್ತಿದೆ. ಸದ್ಯ 156 ಕೋಟಿ ರೂಪಾಯಿ ಮಾಡಿರುವ ಈ ಚಿತ್ರದ ಮುಂದಿರುವ ಟಾರ್ಗೆಟ್ 200 ಕೋಟಿ ರೂಪಾಯಿ! ಇದೇ ರೀತಿ ಪ್ರದರ್ಶನ ಮುಂದುವರಿದರೆ ಶೀಘ್ರದಲ್ಲೇ ಈ ಚಿತ್ರ ದ್ವಿಶತಕ ಬಾರಿಸಲಿದೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel