ಔತಣಕೂಟಗಳ ಮಾಯಾಲೋಕ | ಗುಡಿಸಲಿನಿಂದ ಅರಮನೆಯವರೆಗೆ…. | ಕೂಲಿಯವರಿಂದ ಚಕ್ರವರ್ತಿಯವರೆಗೆ…… |

February 27, 2024
1:04 PM

ಮನುಷ್ಯನ ಬಹುದೊಡ್ಡ ದಿನನಿತ್ಯದ ಆಸೆ ಆತ ಸೇವಿಸುವ ಆಹಾರ(Food). ಹುಟ್ಟಿದ ಮಗುವಿನಿಂದ ಸಾಯುವ ಕ್ಷಣದವರೆಗೂ ಆಹಾರ ಬೇಕೆ ಬೇಕು. ಭಿಕ್ಷುಕನಿಂದ(beggar) ಮಹಾರಾಜನವರೆಗೆ(King) ಎಂತಹ ವ್ಯಕ್ತಿಯಾದರೂ ಊಟ(Meal) ಮಾಡಲೇಬೇಕು. ಊಟದ ಆಸೆ ಇರಲೇಬೇಕು ಮತ್ತು ಇದ್ದೇ ಇರುತ್ತದೆ.. ನೀರು(Water), ಗಾಳಿ(Air) ಪರೋಕ್ಷ ಮೂಲಭೂತ ಅವಶ್ಯಕತೆಗಳು. ಅದರ ಬಗ್ಗೆ ಹೆಚ್ಚಿನ ಗಮನ ಇರುವುದಿಲ್ಲ. ಅದು ಸಹಜವಾಗಿ ಮತ್ತು ಯಥೇಚ್ಛವಾಗಿ ಸಿಗುವುದರಿಂದ ಅದಕ್ಕೆ ಬಣ್ಣ ರುಚಿ ವಾಸನೆ ಇಲ್ಲದಿರುವುದರಿಂದ ಅದು ಹೆಚ್ಚಿನ ಆಸಕ್ತಿ ಕೆರಳಿಸುವುದಿಲ್ಲ.. ಆದರೆ ತಿನ್ನುವ ಆಹಾರ ಮನುಷ್ಯನ ಅವಶ್ಯಕತೆಯಷ್ಟೇ ಅಲ್ಲ ಆಯ್ಕೆಯೂ ಆಗಿದೆ. ಆಸೆಯೂ ಆಗಿದೆ…..

ಪ್ರಾರಂಭದ ದಿನಗಳಲ್ಲಿ ಬಹುಶಃ ಸಿಕ್ಕಿದ ಗೆಡ್ಡೆ ಗೆಣಸು, ಹಣ್ಣು ತರಕಾರಿಗಳು, ಪ್ರಾಣಿ ಪಕ್ಷಿಗಳನ್ನು ತಿನ್ನುತ್ತಾ ಬೆಳೆದಿರಬಹುದು. ಕಾಲ ಕ್ರಮೇಣ ಅವುಗಳಲ್ಲಿಯೂ ರುಚಿಕರ ಮತ್ತು ಆರೋಗ್ಯಕಾರಿ ಪದಾರ್ಥಗಳನ್ನು ‌ಆಯ್ಕೆ ಮಾಡಿಕೊಂಡಿರಬಹುದು. ಬೆಂಕಿಯ ಸಂಶೋಧನೆಯೊಂದಿಗೆ ಸುಡುವ – ಬೇಯಿಸುವ ಪದ್ದತಿಯೂ ಜಾರಿಗೆ ಬಂದಿತು. ವಿವಿಧ ಪದಾರ್ಥಗಳ ಮಿಶ್ರಣ ಮಾಡಿ ಏನೇನೂ ಅಡುಗೆ ವಿಧಾನಗಳು ಸೃಷ್ಟಿಯಾದವು. ಊಟದ ಜೊತೆ ವಿವಿಧ ಗಿಡ ಮರ ಬಳ್ಳಿಗಳ ಪಾನೀಯಗಳ ಸೇವನೆಯೂ ಅಭ್ಯಾಸವಾಗಿ ಅದು ಸಾಕಷ್ಟು ಮುಂದುವರೆದು ಅನೇಕ ರೂಪ ಪಡೆದು ಮದ್ಯಪಾನವೂ ಸೇರಿಸಿ ಈಗ ಊಟದ – ಸುಖದ – ಬದುಕಿನ ಭಾಗವಾಗಿದೆ…..

ನಾಗರಿಕತೆಯ ಪ್ರಾರಂಭ ಕಾಲದಿಂದಲೂ ಔತಣಕೂಟಗಳ ಮೋಜು ಮಸ್ತಿಯ ಬಗ್ಗೆ ಸಾಕಷ್ಟು ಮಾಹಿತಿಗಳು ಸಿಗುತ್ತವೆ. ಆಗ ಸಾಮಾನ್ಯವಾಗಿ ಔತಣಕೂಟಗಳು ಎಂಬುದು ರಾಜ ಮಹಾರಾಜರ ಮೋಜಿನ ಮತ್ತು ಪ್ರತಿಷ್ಟೆಯ ವಿಷಯವಾಗಿತ್ತು. ಎಲ್ಲಾ ವರ್ಗದ ಜನರಲ್ಲಿ ಇದು ಇದ್ದರೂ ರಾಜಮನೆತನಕ್ಕೆ ಮಾತ್ರ ಈ ಪದ ಹೆಚ್ಚು ಸೂಕ್ತವಾಗಿತ್ತು…

ಆದರೆ ಈಗ… 2024ರ ಈ ಸಂದರ್ಭದಲ್ಲಿ ‌ಆಹಾರ ಅನೇಕ ರೂಪಗಳೊಂದಿಗೆ ವೈವಿಧ್ಯಮ ಪ್ರಪಂಚವನ್ನೇ ಸೃಷ್ಟಿಸಿದೆ. ದಿನನಿತ್ಯದ ಆಹಾರ, ಹಬ್ಬಗಳು, ಸಮಾರಂಭಗಳು ಹೊರತುಪಡಿಸಿ ಔತಣಕೂಟಗಳು ವಿಶೇಷ ಅರ್ಥ ಮತ್ತು ವ್ಯಾಪ್ತಿಯನ್ನು ಹೊಂದಿದೆ.. ಇವು ಪ್ರತಿಷ್ಠೆಯ, ಮೋಜಿನ, ದೌಲತ್ತು ಪ್ರದರ್ಶನದ, ಅತಿಥಿ ಸತ್ಕಾರದ, ಅನೇಕ ಒಳ ಕಾರ್ಯಯೋಜನೆಗಳ ಸಾಕಷ್ಟು ಪ್ರತ್ಯಕ್ಷ ಮತ್ತು ಪರೋಕ್ಷ ಲಾಭಗಳ ಆಯಾಮಗಳನ್ನು ಹೊಂದಿದೆ….

ಬಡವರು, ಮಧ್ಯಮವರ್ಗದವರು, ಸಾಧಾರಣ ಶ್ರೀಮಂತರು ನಡೆಸುವ ಈ ರೀತಿಯ ಕಾರ್ಯಕ್ರಮಗಳನ್ನು ಸಾಮಾನ್ಯವಾಗಿ ಪಾರ್ಟಿ ಅಥವಾ ಸಂತೋಷಕೂಟಗಳೆಂದು ಕರೆಯಲಾಗುತ್ತದೆ. ತಮ್ಮ ಆರ್ಥಿಕ ಅನುಕೂಲಕ್ಕೆ ತಕ್ಕಂತೆ ಸ್ಥಳ, ಊಟದ ಮೆನು, ಅತಿಥಿಗಳು ಇರುತ್ತಾರೆ. ಕುಡಿತ ಮೋಜು ಮಸ್ತಿ ಕೆಲವು ವ್ಯಾವಹಾರಿಕ ಮಾತುಕತೆಗಳು ಇಲ್ಲಿ ನಡೆಯುತ್ತವೆ. ವಿಶೇಷ ಊಟ ಮತ್ತು ಮದ್ಯಪಾನ ಇಲ್ಲಿ ಸಾಮಾನ್ಯ.

Advertisement

ಆದರೆ ಈ ರಾಜ ವೈಭೋಗದ, ಅತ್ಯಂತ ಶ್ರೀಮಂತರು, ಪ್ರಖ್ಯಾತರು, ಅಧಿಕಾರದ ಅತಿ ಮುಖ್ಯಸ್ಥರು, ವಿದೇಶಿ ಗಣ್ಯರು ಏರ್ಪಡಿಸುವ ಔತಣಕೂಟಗಳ ಖದರ್ರೇ ಬೇರೆ. ಇದನ್ನು ಅತ್ಯಂತ ವೈಭವೋಪೇತ ಬಂಗಲೆಯಲ್ಲಿ ಏರ್ಪಡಿಸಲಾಗುತ್ತದೆ. ವಿವಿಧ ಕ್ಷೇತ್ರಗಳ ಸಾಧಕರು, ಜನಪ್ರಿಯರು ಮುಂತಾದ ಕೆಲವೇ ಮಂದಿಗೆ ಇಲ್ಲಿ ಆಹ್ವಾನ. ಇಲ್ಲಿಗೆ ಆಮಂತ್ರಿಸಲ್ಪಡುವುದೇ ಒಂದು ಪ್ರತಿಷ್ಠಿತ ವಿಷಯ ಎಂದು ಪರಿಗಣಿಸಲಾಗುತ್ತದೆ..

ರಾಜರ ಕಾಲದಲ್ಲಿ ಆ ರಾಜ್ಯದ ಮತ್ತು ಈಗ ದೇಶಗಳಲ್ಲಿ ಅತ್ಯಂತ ಪ್ರಖ್ಯಾತ ಬಾಣಸಿಗರನ್ನು ಅಡುಗೆ ತಯಾರಿಸಲು ಕರೆಸಲಾಗುತ್ತದೆ. Continental food ಸೇರಿ ಸ್ಥಳೀಯ ಪ್ರಖ್ಯಾತ ಎಲ್ಲಾ ರೀತಿಯ ಐಟಂಗಳನ್ನು ಮಾಡಲಾಗುತ್ತದೆ. ಮುಖ್ಯ ಅತಿಥಿಗಳು ಯಾರು ಎಂಬುದರ ಮೇಲೆ ಇದು ಬಹುತೇಕ ನಿರ್ಧರಿಸಲ್ಪಡುತ್ತದೆ. Welcome drinkನಿಂದ ಪ್ರಾರಂಭವಾಗುವ ಇಲ್ಲಿನ ಔತಣಕೂಟ ಔಪಚಾರಿಕ ಕಾರ್ಯಕ್ರಮದ ನಂತರ ಊಟ ಶುರುವಾಗುತ್ತದೆ. ಸಣ್ಣ ಹಿನ್ನೆಲೆ ಸಂಗೀತ, ಕೆಲವೆಡೆ ನೃತ್ಯವೂ ಜೊತೆಯಾಗಬಹುದು…..

ಸಣ್ಣ ಪದಾರ್ಥಗಳನ್ನು ಸೇರಿಸಿದರೆ ಕನಿಷ್ಠ ನೂರರಿಂದ ಇನ್ನೂರು ಅಥವಾ ಅದಕ್ಕಿಂತ ಹೆಚ್ಚು ಪದಾರ್ಥಗಳನ್ನು ಸಿದ್ದಪಡಿಸಲಾಗಿರುತ್ತದೆ. ಮದ್ಯಪಾನ ಮಾಡುವವರಿಗೆ ಅತ್ಯಂತ ಬೆಲೆಬಾಳುವ ಡ್ರಿಂಕ್ಸ್ ಇರುತ್ತದೆ. ಒಂದು ಬಾಟಲ್ ಮದ್ಯಪಾನದ ಬೆಲೆ 50 ಲಕ್ಷದವರೆಗೂ ಇದೆ ಎಂದು ಕೇಳಿದ್ದೇನೆ. ಅದು ಔತಣಕೂಟಗಳ ಏರ್ಪಡಿಸಿದವರ ಆರ್ಥಿಕ ಯೋಗ್ಯತೆಯನ್ನು ಅವಲಂಬಿಸಿರುತ್ತದೆ. ಸಸ್ಯಹಾರ, ಮಾಂಸಹಾರ, ಸಮುದ್ರ ಜನ್ಯ ಆಹಾರ ಎಲ್ಲವೂ ಇರುತ್ತದೆ. ಪ್ರಾರಂಭದಲ್ಲಿ ಬಗೆ ಬಗೆಯ ಸೂಪ್ ಗಳನ್ನು ನೀಡಲಾಗುತ್ತದೆ. ಕೆಲವು ದುಬಾರಿ ಮತ್ತು ವಿಶೇಷ ಅಣಬೆ ಉಪಯೋಗಿಸಿ ಮಾಡುವ ಸೂಪುಗಳು ಅತ್ಯಂತ ಪ್ರಸಿದ್ಧ ಪಡೆದಿವೆ. ವಿವಿಧ ಸಸ್ಯ ಮತ್ತು ಮಾಂಸಹಾರದ ಸೂಪುಗಳು ಲಭ್ಯ….

ಇದರ ಜೊತೆ Starter’s ಎಂದು ಕರೆಯುವ ಅನೇಕ ತಿಂಡಿಗಳನ್ನು ಮಾಡಲಾಗಿರುತ್ತದೆ. A to Z ವರಗೆ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಎಲ್ಲಾ ರೀತಿಯ ಪದಾರ್ಥಗಳು ಇಲ್ಲಿರುತ್ತವೆ. ಹುರಿದ, ಕರಿದ, ಬೇಯಿಸಿದ, ಸುಟ್ಟ, ಹಬೆಯಲ್ಲಿ ಬೇಯಿಸಿದ, ಹಸಿ ಹಸಿಯಾದ ಹಣ್ಣು, ತರಕಾರಿ, ಬೇಳೆಗಳು, ಸಮುದ್ರ ಪ್ರಾಣಿಗಳ ಮಾಂಸಗಳನ್ನು ಉಪಯೋಗಿಸಿದ ಎಲ್ಲವೂ ಇಲ್ಲಿ ಸಿದ್ದವಾಗಿರುತ್ತದೆ. ಡ್ರಿಂಕ್ಸ್ ಮತ್ತು ಸೂಪ್ ಜೊತೆಗೆ ಇದನ್ನು ಸರಬರಾಜು ಮಾಡಲಾಗುತ್ತದೆ. …

ಇದರ ನಂತರ ನಿಜವಾದ ಊಟ ಪ್ರಾರಂಭ. ಭಾರತೀಯ ಶೈಲಿ, ಚೀನೀ ಶೈಲಿ, ಯುರೋಪಿಯನ್ ಶೈಲಿ ಸೇರಿ ಅಂತರ ಖಂಡದ ಎಲ್ಲಾ ಜನಪ್ರಿಯ ಖಾದ್ಯಗಳು, ಭಕ್ಷ್ಯ ಭೋಜನಗಳು ಇರುತ್ತದೆ. ಕೆಲವೊಮ್ಮೆ ಮುಖ್ಯ ಅತಿಥಿಗಳನ್ನು ಕೇಳಿಯೇ ಇದನ್ನು ಸಿದ್ದಪಡಿಸಲಾಗಿರುತ್ತದೆ. ಮೀನು ಸೀಗಡಿ ಬೇರೆ ಬೇರೆ ಪ್ರಾಣಿಗಳ ಮಾಂಸ, ಸೊಪ್ಪು ತರಕಾರಿಗಳು ಎಲ್ಲದರಲ್ಲೂ ಬೇರೆ ಬೇರೆ ಹಲವಾರು ರುಚಿಯ ಐಟಂಗಳನ್ನು ಮಾಡಲಾಗಿರುತ್ತದೆ. ಸಿಹಿಯಲ್ಲಂತೂ ಹೆಸರೇ ಕೇಳಿರದ ವಿಚಿತ್ರ ವಿಚಿತ್ರ ಪದಾರ್ಥಗಳನ್ನು ತಯಾರಿಸಲಾಗಿರುತ್ತದೆ. ಗಟ್ಟಿಯಾದ, ಮೃದುವಾದ, ಬೆಣ್ಣೆಯಂತ, ದ್ರವರೂಪದ ಎಲ್ಲವೂ ಇರುತ್ತದೆ. ಚಾಟ್ ಐಟಂಗಳು ಸಹ ಸೇರಿರುತ್ತದೆ….

Advertisement

ಕೇಕ್ ಗಳಲ್ಲಂತೂ ವಿಶ್ವರೂಪ ಪ್ರದರ್ಶನವಾಗುತ್ತದೆ. ಒಂದೊಂದು ಹೆಸರು, ಬಣ್ಣ, ಆಕಾರ ಅಬ್ಬಾ ಊಹೆಗೂ ನಿಲುಕುವುದಿಲ್ಲ. ಆಮೇಲೆ ಐಸ್ ಕ್ರೀಂ ಗಳ ಹಬ್ಬ. ಇಲ್ಲೂ ವಿವಿಧ ಬಗೆಯ ಹಣ್ಣು ತರಕಾರಿಗಳಿಂದ ಮಾಡಿರುವ ಆಕರ್ಷಕ ಮಿಶ್ರಣಗಳ ಐಸ್ ಕ್ರೀಮ್ ಲಭ್ಯವಿರುತ್ತದೆ. ಇದರ ಜೊತೆಗೆ ವಿಶೇಷ ರೀತಿಯ ಪ್ರೂಟ್ ಸಲಾಡ್ ಸಹ ಇಡಲಾಗಿರುತ್ತದೆ. ಇಷ್ಟಕ್ಕೆ ಮುಗಿಯುವುದಿಲ್ಲ. ಕೊನೆಗೆ ಮೆಲುಕು ಹಾಕಲು ವಿವಿಧ ಪ್ರಖ್ಯಾತ ಪಾನ್ ಬೀಡಾಗಳನ್ನು ಒದಗಿಸಲಾಗುತ್ತದೆ. ಇದು ಜೀರ್ಣಕ್ರಿಯೆಗೆ ಉತ್ತಮ ಎಂದು ಪರಿಗಣಿಸಲಾಗಿದೆ…

ಎಲ್ಲಾ ಮುಗಿದ ಮೇಲೆ ಕೆಲವೊಮ್ಮೆ ಕೆಲವರಿಗೆ ಮಾತ್ರ ದುಬಾರಿ ಬೆಲೆಯ ಉಡುಗೊರೆಗಳನ್ನು ಸಹ ಕೊಡಲಾಗುತ್ತದೆ. ಇನ್ನೂ ಏನೇನೋ ಅರಿವಿಗೆ ಬರದ ಗುಪ್ತ ಚಟುವಟಿಕೆಗಳು ಇರಬಹುದೇನೋ.. ಹೆಚ್ಚು ಕಡಿಮೆ ಹೀಗಿರುತ್ತದೆ ನೋಡಿ ಔತಣಕೂಟಗಳ ಮೇಲ್ನೋಟದ ಮರ್ಮ. ಸಾಮಾನ್ಯ ವ್ಯಕ್ತಿಗಳಿಗೆ ಇದೊಂದು ಕನಸು. ಊಟಕ್ಕೇ ಪರದಾಡುವ, ಅಪೌಷ್ಟಿಕತೆಯಿಂದಲೇ ಸಾಯುತ್ತಿರುವ, ಕೋಟ್ಯಂತರ ಜನರ ನಡುವೆ ಈ ಔತಣಕೂಟಗಳು ಸಹ ನಡೆಯುತ್ತಲೇ ಇರುತ್ತದೆ. ಇದೆಲ್ಲಾ ಹುಟ್ಟಿನ ಅದೃಷ್ಟವನ್ನು ಅವಲಂಬಿಸಿರುತ್ತದೆಯೇ, ಅರ್ಥವಾಗುತ್ತಿಲ್ಲ, ಸ್ಪಷ್ಟತೆ ದೊರೆಯುತ್ತಿಲ್ಲ….

ಬರಹ
 ವಿವೇಕಾನಂದ. ಎಚ್.ಕೆ.
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ವಿವೇಕಾನಂದ ಎಚ್‌ ಕೆ

ಸಾಮಾಜಿಕ ಕಾರ್ಯಕರ್ತ ( ಪ್ರಬುದ್ಧ ಮನಸ್ಸು, ಪ್ರಬುದ್ಧ ಸಮಾಜ,ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ ಮನಸ್ಸುಗಳ ಅಂತರಂಗದ ಚಳವಳಿಯನ್ನು  ಜ್ಞಾನ ಭಿಕ್ಷಾ ಪಾದಯಾತ್ರೆಯ ಮೂಲಕ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ)

ಇದನ್ನೂ ಓದಿ

ಅಡಿಕೆ ತೋಟಗಳಿಗೆ ಸವಾಲಾಗಿರುವ ಎಲೆಚುಕ್ಕಿ ರೋಗ – ವಿಜ್ಞಾನ ಏನು ಹೇಳುತ್ತದೆ?
January 9, 2026
7:43 AM
by: ಮಹೇಶ್ ಪುಚ್ಚಪ್ಪಾಡಿ
ಕಿಸಾನ್ ಪಾಠಶಾಲೆ ಮೂಲಕ 20 ಲಕ್ಷ ರೈತರಿಗೆ ಆಧುನಿಕ ಕೃಷಿ ತರಬೇತಿ
January 8, 2026
10:40 PM
by: ದ ರೂರಲ್ ಮಿರರ್.ಕಾಂ
ಕೀಟನಾಶಕ ಕಾಯ್ದೆಯಲ್ಲಿ ಮಹತ್ವದ ಬದಲಾವಣೆ | ಕೇಂದ್ರ ಸರ್ಕಾರದಿಂದ ಹೊಸ ಕರಡು ಮಸೂದೆ
January 8, 2026
10:34 PM
by: ದ ರೂರಲ್ ಮಿರರ್.ಕಾಂ
ಕುರಿ ಸಾಕಾಣಿಕ ಘಟಕ ಸ್ಥಾಪನೆಗೆ ಸಹಾಯಧನ
January 8, 2026
9:25 PM
by: ರೂರಲ್‌ ಮಿರರ್ ಸುದ್ದಿಜಾಲ

You cannot copy content of this page - Copyright -The Rural Mirror