ನಮ್ಮ ನಾಡು ನುಡಿ ಬಗ್ಗೆ ಮಹಾರಾಷ್ಟ್ರಕ್ಕೆ ಏಕೆ ಹೊಟ್ಟೆ ಉರಿ ? | ಕರ್ನಾಟಕದಲ್ಲಿ ಕನ್ನಡ ಕಡ್ಡಾಯಕ್ಕೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸಜ್ಜಾದ ಮಹಾರಾಷ್ಟ್ರ ಸರ್ಕಾರ |

February 23, 2024
12:41 PM

ಕನ್ನಡಿಗರಾದ(Kannadigas) ನಾವು ವಿಶಾಲ ಹೃದಯದವರು. ಒಂದು ವೇಳೆ ನಮ್ಮದನ್ನು ನಮ್ಮದು ಎಂದು ಹೇಳುವ ಹಕ್ಕು ಇಲ್ಲ. ನಮ್ಮ ಭಾಷೆಗಾಗಿ(Language) ನಾವು ಏನು ಮಾಡುವಂತಿಲ್ಲ. ನಮ್ಮ ನೆಲೆ ಜಲದ ಉಪಯೋಗ ಮಾಡಿದ್ರು ಅದಕ್ಕೆ ಹೊರ ರಾಜ್ಯಗಳ ಖ್ಯಾತೆ. ಈಗ ನೋಡಿ ಕನ್ನಡ ನಾಮಫಲಕ (Kannada Nameplate) ವಿಚಾರವಾಗಿ ಕರ್ನಾಟಕದೊಂದಿಗೆ(Karnataka) ಮಹಾರಾಷ್ಟ್ರ ಸರ್ಕಾರ(Maharashtra Govt) ಮತ್ತೊಮ್ಮೆ ಕ್ಯಾತೆಗೆ ಮುಂದಾಗಿದೆ.

ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಮಾಡಿದ ರಾಜ್ಯ ಸರ್ಕಾರದ ತೀರ್ಮಾನವನ್ನು ಸುಪ್ರೀಂ ಕೋರ್ಟ್‌ನಲ್ಲಿ (Supreme Court) ಪ್ರಶ್ನಿಸಲು ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಸರ್ಕಾರ ಸಜ್ಜಾಗ್ತಿದೆ. ವಿಧಾನ ಪರಿಷತ್‌ನಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ಮಸೂದೆ ಅಂಗೀಕರಿಸಿದ ಮರುದಿನವೇ ಅಂದ್ರೆ ಮುಂಬೈನಲ್ಲಿ ಸಭೆ ನಡೆಸಿದ ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ, ಸುಪ್ರೀಂ ಕೋರ್ಟ್ ಮೊರೆ ಹೋಗಲು ತೀರ್ಮಾನಿಸಿದ್ದಾರೆ.

ಇದಕ್ಕೆ ಕನ್ನಡ ಸಂಸ್ಕೃತಿ ಸಚಿವರು ಪ್ರತಿಕ್ರಿಯಿಸಿ, ನಾವೇನು ಮಹಾರಾಷ್ಟ್ರದಲ್ಲಿ (Maharashtra) ಕನ್ನಡ ಬೋರ್ಡ್ ಹಾಕಿ ಅಂತಾ ಹೇಳಿಲ್ವಲ್ಲ ಎಂದಿದ್ದಾರೆ. ಮಹಾರಾಷ್ಟ್ರದವರು ಏನೇ ಕ್ಯಾತೆ ತೆಗೆದರೂ, ನಾಡು ನುಡಿ ಜಲದ ವಿಚಾರದಲ್ಲಿ ರಾಜೀ ಇಲ್ಲ, ನಮ್ಮ ರಾಜ್ಯದ ತಂಟೆಗೆ ಬಂದ್ರೆ ಹುಷಾರ್ ಎಂದು ಎಚ್ಚರಿಕೆ ನೀಡಿದ್ದಾರೆ. ಇನ್ನೂ, ವಿಧೇಯಕಕ್ಕೆ ರಾಜ್ಯಪಾಲರು ಸಹಿ ಹಾಕಿದ ತಕ್ಷಣವೇ ನಾಮಫಲಕದಲ್ಲಿ ಕನ್ನಡ ಕಡ್ಡಾಯ ನಿಯಮವನ್ನು ಬೆಂಗಳೂರಲ್ಲಿ ಜಾರಿ ಮಾಡುವಂತೆ ಬಿಬಿಎಂಪಿಗೆ ಶಿವರಾಜ್ ತಂಗಡಗಿ ಸೂಚಿಸಿದ್ದಾರೆ.

  • ಅಂತರ್ಜಾಲ ಮಾಹಿತಿ
Why Maharashtra is upset about our nadu nudi: Maharashtra government is ready to approach the Supreme Court to make Kannada mandatory in Karnataka.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮಳೆಯ ನಡುವೆಯೂ ಉರಿಯುವ ಬಿಸಿಲು..! ಏಪ್ರಿಲ್–ಜೂನ್‌ನಲ್ಲಿ ಹವಾಮಾನ ಸವಾಲು..!
April 1, 2026
6:29 AM
by: ದ ರೂರಲ್ ಮಿರರ್.ಕಾಂ
ಗ್ಯಾಸ್ ಸಿಲಿಂಡರ್ ಕೊರತೆ ಪರಿಣಾಮ : ರಾಜ್ಯದಲ್ಲಿ ವಿದ್ಯುತ್ ಬಳಕೆ 10% ಏರಿಕೆ
April 1, 2026
6:13 AM
by: ಮಿರರ್‌ ಡೆಸ್ಕ್
ಹಸಿರು ಅಮೋನಿಯಾ ಒಪ್ಪಂದಗಳು | ಭಾರತದ ಇಂಧನ ಭದ್ರತೆಗೆ ಹೊಸ ಬಲ..! 2030 ಗುರಿಗೆ ವೇಗ
April 1, 2026
6:07 AM
by: ಮಿರರ್‌ ಡೆಸ್ಕ್
ಕರಾವಳಿಯಲ್ಲಿ ಮಳೆಯ ರಭಸ | ಸುಬ್ರಹ್ಮಣ್ಯ ಆಸುಪಾಸಿನಲ್ಲಿ 50 ಮಿಮೀಗೂ ಹೆಚ್ಚು! ರಾಜ್ಯದ ಹಲವೆಡೆ ಇನ್ನೂ 2 ದಿನ ಮಳೆ ಅಲರ್ಟ್
April 1, 2026
5:56 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror