ಹಿಂದೆ ಯುಪಿಎ ಸರ್ಕಾರವೂ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ 2005 ಎಂದು ಕರೆಯಲಾಗುತ್ತಿರುವ NREGA ಅನ್ನು ಜಾರಿಗೊಳಿಸಿತ್ತು. ಇದು ಗ್ರಾಮೀಣ ಭಾಗದ ಅದೇಷ್ಟು ಬಡವರಿಗೆ ಉಪಯೋಗವಾಗಿದೆ ಎಂದರೆ ತಪ್ಪಗಾಲಾರದು. ಈ ಯೋಜನೆ ಅಕ್ಟೋಬರ್ 2, 2009 ರಂದು MGNREGA ಅಂದರೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ ಎಂದು ಮರುನಾಮಕರಣ ಮಾಡಲಾಯಿತು. ಇದೀಗ ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರವು MGNREGA ಕಾಯ್ದೆಯನ್ನು ರದ್ದುಗೊಳಿಸಿ VB G Ram G ಉ ಅಂದರೆ ವಿಕಸಿತ್ ಭಾರತ್ ರೋಜ್ಗಾರ್ ಮತ್ತು ಅಜೀವಿಕಾ ಮಿಷನ್ ಮಸೂದೆ 2025 ಅನ್ನು ಪರಿಚಯಿಸುವ ನಿರೀಕ್ಷೆಯಿದೆ.
MGNREGA ಗ್ರಾಮೀಣ ಕುಟುಂಬಗಳಿಗೆ ಪ್ರತಿ ವರ್ಷ 100 ದಿನಗಳ ಕೂಲಿ ಉದ್ಯೋಗ ಕಾನೂನುಬದ್ಧ ಖಾತರಿಯನ್ನು ಒದಗಿಸುತ್ತದೆ. ಹೊಸ ಕಾನೂನು ರಾಜ್ಯ ಸರ್ಕಾರಗಳಿಂದ ಹೆಚ್ಚಿದ ವೆಚ್ಚವನ್ನು ಒಳಗೊಂಡಿರುತ್ತದೆ ಮತ್ತು ಪ್ರಸ್ತುತ ಕೆಲಸದ ದಿನಗಳ ಸಂಖ್ಯೆಯನ್ನು 100 ರಿಂದ 125 ಕ್ಕೆ ಹೆಚ್ಚಿಸುತ್ತದೆ.
VB G Ram G ಮಸೂದೆಯು ಸಮೃದ್ಧ ಮತ್ತು ಸ್ಥಿತಿಸ್ಥಾಪಕ ಗ್ರಾಮೀಣ ಭಾರತಕ್ಕಾಗಿ ಸಬಲೀಕರಣ, ಅಭಿವೃದ್ಧಿ ಮತ್ತು ಪ್ರಗತಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಈ ಹೊಸ ಕಾನೂನನ್ನು ಅಭಿವೃದ್ಧಿ ಹೊಂದಿದ ಭಾರತ 2047 ರಾಷ್ಟ್ರೀಯ ದೃಷ್ಟಿಕೋನದೊಂದಿಗೆ ಗ್ರಾಮೀಣ ಅಭಿವೃದ್ಧಿ ಚೌಕಟ್ಟಿನ್ನು ಜೋಡಿಸುವ ಪ್ರಮುಖ ಹೆಜ್ಜೆ ಎಂದು ಪರಿಗಣಿಸಲಾಗಿದೆ.
ಈ ಮಸೂದೆಯಲ್ಲಿ ಮಹಿಳೆಯರು, ವೃದ್ಧರು, ಅಂಗವಿಕಲರು ಮತ್ತು ದುರ್ಬಲಗೊಳಿಸುವ ಕಾಯಿಲೆಗಳಿಂದ ಬಳಲುತ್ತಿರುವವರು ಸೇರಿದಂತೆ ದುರ್ಬಲ ಗುಂಪುಗಳಿಗೆ ಸೂಕ್ತವಾದ ವರ್ಗಗಳ ಕೆಲಸದಲ್ಲಿ ಭಾಗವಿಸಲು ಅನುವು ಮಾಡಿಕೊಡಲು ಮಸೂದೆಯು ವಿಶೇಷ ದರಗಳ ವೇಳಾಪಟ್ಟಿಯನ್ನು ಪ್ರಸ್ತಾಸಿಸುತ್ತದೆ.
ಉತ್ತರಾಖಂಡದ ಸ್ಥಳೀಯ ಬದ್ರಿ ಹಸು ಇಂದು ರೈತರ ಪಾಲಿಗೆ ಹೊಸ ಆದಾಯದ ಮೂಲವಾಗಿ…
ಪೇಪರ್ ಅವಲಕ್ಕಿ ಚೂಡಾಕ್ಕೆ ಬೇಕಾಗುವ ಸಾಮಗ್ರಿಗಳು : ಪೇಪರ್ ಅವಲಕ್ಕಿ – ಅಗತ್ಯ…
ಮಿಜೋರಾಂ ಮುಖ್ಯಮಂತ್ರಿ ಲಾಲ್ದುಹೋಮಾ ಅವರು ಶುಕ್ರವಾರ ಅಸ್ಸಾಂ ಗಡಿಯ ಬಳಿಯ ಮಿಜೋರಾಂನ ಕೊಲಾಸಿಬ್…
ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಹಳ್ಳಿಗಳ ಜನರು ಸ್ವಾವಲಂಬಿಗಳಾಗಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ…
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಯುಷ್ಮಾನ್ ಭಾರತ್ ಯೋಜನೆಯಡಿ ನೋಂದಣಿಯಾದ ಯಾವುದೇ ಆಸ್ಪತ್ರೆಗಳು ರೋಗಿಗಳಿಗೆ…
ಇದೇ ಭಾನುವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಕೇಂದ್ರ…