ನೇಪಾಳದಲ್ಲಿ ಎಡೆಬಿಡದೆ ಸುರಿದ ಮಳೆ | ಭಾರೀ ಪ್ರವಾಹಕ್ಕೆ 217 ಮಂದಿ ಬಲಿ |

October 1, 2024
10:16 PM

ನೇಪಾಳದಲ್ಲಿ ಇತ್ತೀಚಿಗೆ ಎಡೆಬಿಡದೆ ಸುರಿದ ಮಳೆಯಿಂದ ಉಂಟಾದ ಭೂಕುಸಿತ ಮತ್ತು ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 217 ಕ್ಕೆ ಏರಿಕೆಯಾಗಿದೆ. 28 ಜನರು ಇನ್ನೂ ಕಾಣೆಯಾಗಿದ್ದಾರೆ ಮತ್ತು 143 ಜನರು ಗಾಯಗೊಂಡಿದ್ದಾರೆ.

ನೆರೆಪೀಡಿತ ಪ್ರದೇಶಗಳಾದ್ಯಂತ ಹುಡುಕಾಟ ಹಾಗೂ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಹೆಚ್ಚಿಸಲಾಗಿದೆ. ಗಾಯಾಳುಗಳು ವಿವಿಧ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ.

ಭೂಕುಸಿತದಿಂದ ಮುಚ್ಚಿಹೋಗಿರುವ ಪ್ರಮುಖ ರಸ್ತೆಗಳನ್ನು ಮತ್ತೆ ತೆರೆಯುವ ಪ್ರಯತ್ನಗಳು ನಡೆಯುತ್ತಿವೆ.  ಕಠ್ಮಂಡುವಿನಿಂದ ಹೊರಡುವ ಹೆಚ್ಚಿನ ಹೆದ್ದಾರಿಗಳು ಮಣ್ಣು ಹಾಗೂ ಮರಗಳಿಂದ ಮುಚ್ಚಿದೆ. ತೆರವು ಕಾರ್ಯ ನಡೆಯುತ್ತಿದೆ. ಸೆಪ್ಟೆಂಬರ್ 27 ಮತ್ತು 28 ರಂದು ಸಂಭವಿಸಿದ ಪ್ರವಾಹ ಮತ್ತು ಭೂಕುಸಿತದಲ್ಲಿ ಮೃತಪಟ್ಟವರಿಗಾಗಿ  ಸರ್ಕಾರವು ಮೂರು ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದೆ.

ನೇಪಾಳದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ವಿವಿಧ ಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಭಾರತೀಯ ನಾಗರಿಕರ ಬಗ್ಗೆ ಮಾಹಿತಿ ಪಡೆದಿದೆ ಎಂದು ವರದಿ ಮಾಡಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಬರಪೀಡಿತ 101 ತಾಲೂಕುಗಳ ರೈತರಿಗೆ ಸಾಲ ಮರುಪಾವತಿಗೆ 12 ತಿಂಗಳ ವಿಸ್ತರಣೆ
September 17, 2026
7:20 AM
by: ದ ರೂರಲ್ ಮಿರರ್.ಕಾಂ
25 ಸಾವಿರ ವರ್ಷಗಳ ಹಿಂದೆಯೇ ಅಡಿಕೆ ಬಳಕೆ ? ಪುರಾತನ ಹಲ್ಲುಗಳಲ್ಲಿ ಸಿಕ್ಕಿದ ಸುಳಿವು
September 16, 2026
11:09 PM
by: ದ ರೂರಲ್ ಮಿರರ್.ಕಾಂ
“ಹನುಮಾನ್ ಅಂಶ್‌” ಬಾಕ್ಸ್ ಆಫೀಸ್ ದಾಖಲೆ – 40ನೇ ದಿನವೂ ₹8.25 ಕೋಟಿ – ಪಠಾಣ್‌, ಛಾವಾ, ಉರಿ ದಾಖಲೆ ಮೀರಿಸಿದ ಸಿನಿಮಾ
September 16, 2026
9:14 PM
by: ದ ರೂರಲ್ ಮಿರರ್.ಕಾಂ
ಮುಂಗಾರು ಹಿಂದೆ ಸರಿಯಲು ಸಜ್ಜು – ಸೆ.17ರಿಂದ ಪಶ್ಚಿಮ ರಾಜಸ್ಥಾನದಲ್ಲಿ ಆರಂಭವಾಗುವ ಸಾಧ್ಯತೆ
September 16, 2026
3:41 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror