ಹೀಗೊಂದು ವಾಸ್ತವವಾಗಲಿ ಎಂಬ ಆಶಯದ ಕನಸು | ಸಾಮೂಹಿಕ ಸಹಕಾರಿ ಪದ್ದತಿಯ ಕಾರಣದಿಂದ ಉಳಿಯಿತು ಊರು…! |

November 16, 2023
11:53 AM

ಅದು ಕಾನೂರು(Kanoor) ಎಂಬುದೊಂದು ಮಲೆನಾಡಿನ(Malenadu) ಮೂಲೆ ಊರು(Village). ಮುಖ್ಯ ಪಟ್ಟಣದಿಂದ(City) ಕಿಲೋಮೀಟರ್ ಗಟ್ಟಲೆ ದೂರ. ಒಂಥರ ದ್ವೀಪ… ಕಾನೂರು ಹೆಸರಿಗೆ ತಕ್ಕಂತೆ ಕಾನೇ ಹೆಚ್ಚು ಇರುವ ಊರು. ಆ ಕಾನೂರಿನಲ್ಲಿ ಲಗಾಯ್ತಿನಿಂದ ತಲೆಮಾರಿನಿಂದ ಎಲ್ಲಾ ಜಾತಿಯವರೂ ಜಮೀನು ಮನೆ ಮಾಡಿಕೊಂಡ ಒಂದು ಇಪ್ಪತ್ತೈದು ಮನೆಗಳ ಊರು… ಎಲ್ಲಾ ಇಪ್ಪತ್ತೈದು ಮನೆಗಳ ರೈತಾಪಿಗಳು(Farmer) ತಮ್ಮ ಮಕ್ಕಳನ್ನು ತಮ್ಮೂರಿನಿಂದ ಶಾಲೆ(School) ದೂರ ಎಂಬ ಕಾರಣಕ್ಕೆ ಪೇಟೆಯಲ್ಲಿ ತಮ್ಮ ಮಕ್ಕಳನ್ನು ಬಿಟ್ಟು ಓದಿಸಿದರು. ಉತ್ತಮ ಶಿಕ್ಷಣ(Education) ಸಿಕ್ಕ ಕಾರಣಕ್ಕೆ ಮಕ್ಕಳು(Children) ಸ್ವಾಭಾವಿಕವಾಗಿ ಉತ್ತಮ ಕೆಲಸಕ್ಕೆ ಸೇರಿದರು‌.

Advertisement
Advertisement

ತದನಂತರ ಊರಿನ ಎಲ್ಲಾ ಮನೆಗಳಲ್ಲೂ ಹಿರಿಯರೇ(Old age) ಉಳಿದರು. ಹೊಸ ತಲೆಮಾರಿನವರು ಹಿಮ್ಮುಖ ಚಲನೆ ಮಾಡಲಿಲ್ಲ. ಹಳ್ಳಿಯ ಒಂಟಿ ಮನೆಗಳು ಸ್ವತಂತ್ರ “ವೃದ್ದಾಶ್ರಮ”(Old age home) ಗಳಾಗಿ ಪರಿವರ್ತನೆಯಾಗುತ್ತಾ ಹೋಯಿತು. ನಮ್ಮ ನೆಡೆ ಹಳ್ಳಿ ಕಡೆ…. ಎಂಬ ದ್ಯೇಯವಾಕ್ಯ ಜಾರಿಗೆ ಬರಲಿಲ್ಲ. ಒಂದಿನ…. ಕಾನೂರಿನ ಇಪ್ಪತ್ತೈದು ಮನೆಗಳ ಎಲ್ಲಾ ರೈತ ಬಾಂಧವರು “ಒಟ್ಟಿಗೆ ಸೇರಿ” ಒಂದು ಮೀಟಿಂಗ್ ಮಾಡಿ “ತಮ್ಮ ” ಎಲ್ಲರ ಸಮಸ್ಯೆ ಯೂ “ಒಂದೇ ” ಆಗಿರುವುದನ್ನ ಮನದಟ್ಟು ಮಾಡಿಕೊಂಡರು. ಎಲ್ಲರೂ ವೃದ್ದರೇ.‌. ಯಾರಿಗೂ ತೋಟಕ್ಕೆ ಒಂದು ಸುತ್ತು ಹಾಕಿ ಕೊಂಡು ಬರುವಷ್ಟು ಚೈತನ್ಯ ಇಲ್ಲ…!! ಕೊಟ್ಟಿಗೆಯ ದನ ಕರುಗಳ ಸಂಬಾಳನೆ ಮಾಡಲು ಆಗುತ್ತಿಲ್ಲ. ದನಕರು ಇಲ್ಲವಾದರೆ ಆ ಮೂಲೆ ಊರಿಗೆ “ಹಾಲಿನ ಸರಬರಾಜು” ಇಲ್ಲ…!! ಹಾಗಾಗಿ ದನಕರುಗಳು ಕಾನೂರಿಗೆ ಬೇಕೇ ಬೇಕು.. ಲಗಾಯ್ತಿನಿಂದ ಮಾಡಿಕೊಂಡು ಬಂದ ಜಮೀನು “ಮಾರಲು” ಯಾರಿಗೂ ಇಷ್ಟ ಇರಲಿಲ್ಲ…

Advertisement

ಆದರೆ ಜಮೀನು ಮಾಡಲು “ಆಗುತ್ತಿಲ್ಲ.”ಮಕ್ಕಳು ಊರಿಗೆ ” ಬರುತ್ತಿಲ್ಲ…!!'”ಇದೆಲ್ಲದರ ಜೊತೆಗೆ ತಮ್ಮ ತಮ್ಮ ಜಮೀನಿನೊಳಗಿದ್ದ “ನಾಗ ಇತ್ಯಾದಿ ದೈವ ದೇವರುಗಳು” ಬೇರೆ. ಜಮೀನು ಯಾರಿಗೋ ನಾವು ಮಾರಿ… , ಅವರು ಈ ನಮ್ಮ ನಂಬಿಕೆಯ ಭಕ್ತಿಯ ದೈವ ದೇವರುಗಳಿಗೆ “ಅಪಚಾರ” ಎಸಗಿದರೇ… ಎಂಬ ಭಯ, ಅದು ಮುಂದೆ ನಮ್ಮ ಪೀಳಿಗೆಗೆ ತೊಂದರೆ ಆಗಬಹುದು ಅಂತ. ಹೊರಗೆ ನೌಕರಿ ಯಲ್ಲಿರುವ ಮಕ್ಕಳಿಗೂ ಈ ಕಾನೂರ ಜಮೀನಿನ ಬಗ್ಗೆ ವಿಶೇಷ ಪ್ರೀತ್ಯಾದರ…ಜೊತೆಗೆ ಸೆಂಟಿಮೆಂಟೂ….. ಈ ಸಮಸ್ಯೆ ಗೆ ಪರಿಹಾರವೇನು…???!

ಒಂದು ದೀಪಾವಳಿಯ ಹಬ್ಬದ ದಿನ ಕಾನೂರಿನ ಹಿರಿಯರು ಮತ್ತು ಕಾನೂರು ಅನಿವಾಸಿ ಪಟ್ಟಣಿಗ ಪೀಳಿಗೆಯವರು ಸಭೆ ಸೇರಿ … ಎಲ್ಲರೂ ಒಂದೇ ಕಡೆ ಇರುವಂತಹ ಎಲ್ಲಾ ಅನುಕೂಲ ಇರುವಂತಹ ಒಂದು ಅಪಾರ್ಟ್ಮೆಂಟ್ ಮಾದರಿಯ ಮನೆ ಕಟ್ಟಿ‌ ಅಲ್ಲಿ ಊರಿನ ಎಲ್ಲರೂ ಬಂದು ನೆಲೆಸುವುದೆಂದೂ … ಎಲ್ಲರ ಜಮೀನನ್ನು ಸಾಮೂಹಿಕ ನಿರ್ವಹಣೆ ಮಾಡುವುದೆಂದೂ ಮತ್ತು
ಆ ಮನೆಗೆ ಸಮೀಪದಲ್ಲೇ ಒಂದು ದೊಡ್ಡ ಸಾಮೂಹಿಕ ಕೊಟ್ಟಿಗೆ ನಿರ್ಮಾಣ ಮಾಡಿ, ಆ ಕೊಟ್ಟಿಗೆಯಲ್ಲಿ ಊರಿನ ಎಲ್ಲಾ ಇಪ್ಪತ್ತೈದು ಕುಟುಂಬದ ಸದಸ್ಯರಿಗೆ ಹಾಲು, ಹೈನು ಮತ್ತು ಎಲ್ಲರ ಜಮೀನಿಗೆ ಬೇಕಾದಷ್ಟು ಗೊಬ್ಬರ ಉತ್ಪಾದನೆಯಾಗುವಷ್ಟು ಗೋವುಗಳನ್ನ ಸಾಕುವುದು. ಈ ಕೊಟ್ಟಿಗೆ ನಿರ್ವಹಣೆಯನ್ನು ಎಲ್ಲಾ ಇಪ್ಪತ್ತೈದು ಮನೆಯ ಜಮೀನ್ದಾರರೂ ಅವರ ಅಗತ್ಯದ ಹಾಲು ಮತ್ತು ಗೊಬ್ಬರದ ಅನುಗುಣುದ ಮೊತ್ತದ ಷೇರನ್ನ ನೀಡಿ ನೌಕರರ ಮೂಲಕ ಈ ಜಾನುವಾರುಗಳ ನೋಡಿಕೊಳ್ಳುವ ವ್ಯವಸ್ಥೆ ಮಾಡುವುದೆಂದು ತೀರ್ಮಾನಕ್ಕೆ ಬರಲಾಯಿತು.

Advertisement

ಈ ತೀರ್ಮಾನದಿಂದ ಆ ಕಾನೂರಿನ ಹಿರಿಯರ ಒಂಟಿ ಮನೆಯ ಅಭದ್ರತೆ ಇಲ್ಲವಾಯಿತು. ಸಾಮೂಹಿಕ ಜಮೀನಿನ ನಿರ್ವಹಣೆ ಯಿಂದ ಕಾನೂರಿನ ಅನಿವಾಸಿ ಪಟ್ಟಣಿಗ ಮಕ್ಕಳಿಗೆ ಜಮೀನಿನ ಬಗ್ಗೆ ಇರುವ ಭಾವನಾತ್ಮಕತೆ ಉಳಿಯಿತು, ಊರಿನಲ್ಲಿ ಒಂಟಿ ಮನೆಯಲ್ಲಿ ಇದ್ದ ತಮ್ಮ ಹಿರಿಯರ ಬಗ್ಗೆ ಆತಂಕ ಕಡಿಮೆಯಾಯಿತು. ಈ ಜಮೀನು ನಿರ್ವಹಣೆ ಮಾಡಲಾಗದ ಕಷ್ಟಕ್ಕೆ ತಲತಲಾಂತರಗಳ ಭಾವನಾತ್ಮಕ ನಂಟಿನ ಜಮೀನು ಮಾರಾಟ ಮಾಡುವ, ನಂತರದ ಹಣ ಹಂಚಿಕೊಳ್ಳುವ, ದಾಯಾದಿ ಕಲಹಗಳು ಇಲ್ಲದಾಯಿತು, ಪ್ರತಿ ಕುಟುಂಬದ ಜಮೀನಿನಲ್ಲಿ ಬಂದ ಉತ್ಪತ್ತಿಯನ್ನ ಆ ಕುಟುಂಬದ ಯಾರಿಗೂ ಜಗಳವಿಲ್ಲದೆ ಸಮಾನವಾಗಿ ಹಂಚಿಕೆಯಾಯಿತು, ಎಲ್ಲ ಬಂಧು ಬಾಂಧವರ ಸಂಬಂಧಗಳು ಗಟ್ಟಿಯಾಯಿತು. ಊರ ಎಲ್ಲರೂ ಒಂದೇ ಕಡೆ ನೆಲಸಿದ್ದರಿಂದ ಆ ಅಪಾರ್ಟ್ಮೆಂಟ್ ಗೆ ಪಟ್ಟಣದಿಂದ ಯಾರೇ ಬಂದರೂ ಊರ ಎಲ್ಲಾ ಹಿರಿಯರ ಜೊತೆಗೂ ಸಂವಹನವಾಗಿ ಊರು ಹಿಂದಿನ ಕಾಲದ “ಒಗ್ಗಟ್ಟಿನ ಕಾಲಕ್ಕೆ” ಮರಳತೊಡಗಿತು.

ಮೂರು ಮತ್ತು ನಾಲ್ಕನೇ ತಲೆಮಾರಿನ ಮಕ್ಕಳು ಮೊಮ್ಮಕ್ಕಳಿಗೆ ಈ ವ್ಯವಸ್ಥೆಯಿಂದ ಊರ ಮಣ್ಣಿನ ನೆಲೆಯ ನೆಲಕ್ಕೆ ಬೇರೂರಲು ಅವಕಾಶ ನೀಡಿ ಕಾನೂರು ಮೂಲ ಶಾಶ್ವತವಾಗಿ ಉಳಿಯಿತು… ಒಂಟಿ ಮನೆ ಬಿಟ್ಟು ಪಟ್ಟಣದ ಮಕ್ಕಳ ಮನೆಗೆ ಹೋಗುವ ಸಮಸ್ಯೆ ಇಲ್ಲದ್ದರಿಂದ ಹಿರಿಯರು ಬೇಕಾದಾಗ ಪಟ್ಟಣಕ್ಕೆ ಬಂದು ಹೋಗಿ ಮಾಡತೊಡಗಿದರು. ಮುಖ್ಯವಾಗಿ ಸಾಮೂಹಿಕ ಕೊಟ್ಟಿಗೆಯ ಕಾರಣದಿಂದ ಎಲ್ಲರ ಮನೆಯ ಗಂಗೆ ಗೌರಿ ಬಚ್ಚ ಗಿಡ್ಡ ದಾಸ ಮುಂತಾದ ಮಲೆನಾಡು ಗಿಡ್ಡಗಳಿಗೂ ಸರಿಯಾದ ಆಸರೆ, ಮೇವು ಮತ್ತು ನಿರ್ವಹಣೆ ಸಿಕ್ಕಿತು.‌ ಸಾಮೂಹಿಕ ಕೊಟ್ಟಿಗೆ ಯಾದ್ದರಿಂದ ಎಲ್ಲ ಇಪ್ಪತ್ತೈದು ಕುಟುಂಬಕ್ಕೂ ಸದಾ ಸಮೃದ್ಧ ಹಾಲು ಮತ್ತು ಎಲ್ಲಾ ಇಪ್ಪತ್ತೈದು ಕುಟುಂಬದವರ ಜಮೀನಿಗೆ ಸಮೃದ್ಧ ಶ್ರೇಷ್ಠ ಕೊಟ್ಟಿಗೆ ಗೊಬ್ಬರ ಲಭ್ಯವಾಯಿತು. ಗೋ ಸಂತತಿ ಉಳಿಯಿತು.. ಊರ ದೈವ ದೇವರು ಊರ ಜನರಿಗೆ ಒಳ್ಳೆಯ ಬುದ್ದಿ ಕೊಟ್ಟು ಊರಲ್ಲಿ ಊರ ಮೂಲದವರನ್ನ ಊರಿನಲ್ಲೇ ಉಳಿಸಿ ಕೊಂಡು ತಮ್ಮ ಪೂಜೆ ಸೇವೆಯನ್ನು ಮುಂದುವರೆಸಿಕೊಂಡವು.. ಕಾಲ ಬದಲಾದರೂ ಈ ಸಾಮೂಹಿಕ ಸಹಕಾರಿ ಪದ್ದತಿಯ ಕಾರಣಕ್ಕೆ ಛಿದ್ರ ಛಿದ್ರವಾಗಿ ಹೋಗುತ್ತಿದ್ದ ಕಾನೂರು ಸುಭದ್ರವಾಗಿ ಉಳಿಯುವಂತಾಯಿತು… ಒಂದು ಸಮಸ್ಯೆ ಸುಖಾಂತವಾಯಿತು.

Advertisement

It is a hill town called Kanur. Kilometers away from the main town. Onthara Island… As per the name of Kannur, there is a lot of Kanay. In Kanur, a village of twenty-five houses where all the castes from generation to generation have built land… The farmers of all twenty-five houses left their children to study in the town because the school was far from Tamur. Children naturally got into good jobs because they got good education.

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

ಇದನ್ನೂ ಓದಿ

ಬಾಳೆದಿಂಡಿನ ರಸ ಕಿಡ್ನಿಯಲ್ಲಿರುವ ಕಲ್ಲನ್ನು ಕರಗಿಸಬಲ್ಲುದು..!
April 30, 2024
9:03 PM
by: ಕುಮಾರ್ ಪೆರ್ನಾಜೆ
ಆರೋಗ್ಯ ಕವಚ ಸಿಬಂದಿಗಳಿಗೆ ವೇತನವಾಗಿಲ್ಲ..! | ಗ್ರಾಮೀಣ ಭಾಗದ ಜೀವ ರಕ್ಷಕರು ಅತಂತ್ರದಲ್ಲಿ..!
April 30, 2024
7:15 PM
by: ದ ರೂರಲ್ ಮಿರರ್.ಕಾಂ
ಮಲೆನಾಡ ಗಿಡ್ಡ ತಳಿಯ ಗೋರಕ್ಷಣೆ ಅನಿವಾರ್ಯತೆ ಏಕೆ..? | ಅವುಗಳ ಮಹತ್ವ ಏನು ? ಜೀವಾಮೃತದಿಂದ ಅಡಿಕೆ ತೋಟ ಏನಾಯ್ತ..?
April 30, 2024
2:28 PM
by: ಮುರಳಿಕೃಷ್ಣ ಕೆ ಜಿ
Karnataka Weather | 30-04-2024 | ರಾಜ್ಯದಲ್ಲಿ ಮೋಡದ ವಾತಾವರಣ | ಕೆಲವು ಕಡೆ ತುಂತುರು ಮಳೆ ಸಾಧ್ಯತೆ |
April 30, 2024
11:19 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror