ದೇಶಕ್ಕೆ ಒಂದೇ “ಗ್ಯಾರಂಟಿ” ಅದು “ಮೋದಿ ಗ್ಯಾರಂಟಿ” | #ModiKiGuarantee ಫುಲ್‌ ಟ್ರೆಂಡ್‌ | ಡಿ.6 ರಂದು INDIA ಮೈತ್ರಿಕೂಟದ ಸಭೆಗೆ ಕಾಂಗ್ರೆಸ್ ಕರೆ |

December 3, 2023
1:16 PM
ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಮತ್ತೆ ತನ್ನ ವಿಜಯ ಪತಾಕೆ ಹಾರಿಸಿದೆ.

ಲೋಕಸಭೆ ಚುನಾವಣೆಯ(Loksabha Election) ದಿಕ್ಸೂಚಿ ಎಂದೇ ಹೇಳಲಾಗುತ್ತಿದ್ದ ಪಂಚರಾಜ್ಯಗಳ ಚುನಾವಣೆ ಮುಗಿದು ಇಂದು ಫಲಿತಾಶ ಹೊರಬಿದ್ದಿದೆ. ತೆಲಂಗಾಣದಲ್ಲಿ(Telangana) ಕಾಂಗ್ರೆಸ್‌(Congress) ಭರ್ಜರಿ ಗೆಲುವು ಸಾಧಿಸಿದೆ. ಇನ್ನು ಮಿಜೋರಾಂ(Mizorum) ರಾಜ್ಯದ ಚುನಾವಣಾ ಫಲಿತಾಂಶವು ಸೋಮವಾರ ಪ್ರಕಟವಾಗಲಿದೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಚುನಾವಣೆಯಲ್ಲಿ ಜಯಗಳಿಸುತ್ತಿದ್ದಂತೆ ಬಿಜೆಪಿಯಲ್ಲಿ (BJP) ಸಂಭ್ರಮ ಮುಗಿಲುಮುಟ್ಟಿದ್ದು, ಬಿಜೆಪಿ ನಾಯಕರು ದೇಶಕ್ಕೆ ಮೋದಿಯೇ ಗ್ಯಾರಂಟಿ (ModiKiGuarantee) ಎಂದು ಪೋಸ್ಟರ್‌ ಹಂಚಿಕೊಳ್ಳುತ್ತಿದ್ದಾರೆ.

ಇತ್ತ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಇಂದು ಹೊರಬೀಳಲಿದ್ದು, ಈ ನಡುವೆ ಡಿಸೆಂಬರ್ 6 ರಂದು INDIA ಮೈತ್ರಿಕೂಟದ ನಾಯಕರ ಸಭೆ ಕರೆಯಲಾಗಿದೆ. ಡಿಸೆಂಬರ್ 6 ರಂದು ಮುಂದಿನ ಭಾರತ ಮೈತ್ರಿ ಸಭೆಗೆ ಕಾಂಗ್ರೆಸ್ (Congress) ಪಕ್ಷ ಕರೆ ನೀಡಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೆಹಲಿಯಲ್ಲಿ ಸಭೆ ನಡೆಸಲಾಗುವುದು ಎಂದು ಮೈತ್ರಿ ಸದಸ್ಯರಿಗೆ ತಿಳಿಸಿದ್ದಾರೆ.

ಕರ್ನಾಟಕ (Karnataka) ಚುನಾವಣೆಯಲ್ಲಿ ಯಶಸ್ವಿ ಆಗುತ್ತಿದ್ದಂತೆ ಕಾಂಗ್ರೆಸ್‌ (Congress) ಈಗ ನಡೆಯುತ್ತಿರುವ ಚುನಾವಣಾ ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಆರಂಭಿಸಿತ್ತು. ದೇಶಾದ್ಯಂತ ನಮ್ಮ ಗ್ಯಾರಂಟಿ (Congress Guarantee) ಕೆಲಸ ಮಾಡುತ್ತದೆ ಎಂದು ವಿಶ್ವಾಸ ಇಟ್ಟುಕೊಂಡಿದ್ದರು.  ಕಾಂಗ್ರೆಸ್‌ ಪ್ರಚಾರಕ್ಕೆ ಪರ್ಯಾಯವಾಗಿ ಬಿಜೆಪಿ ನರೇಂದ್ರ ಮೋದಿ (Narendra Modi) ಅವರನ್ನೇ ಹೆಚ್ಚು ಬಿಂಬಿಸಿತ್ತು. ಅಷ್ಟೇ ಅಲ್ಲದೇ ಮೋದಿ ಗ್ಯಾರಂಟಿಗಳ ಮುಂದೆ ಕಾಂಗ್ರೆಸ್‌ನ ಹುಸಿ ಭರವಸೆಗಳು ಕೆಲಸ ಮಾಡುವುದಿಲ್ಲ ಎಂದು ಪ್ರಧಾನಿಗಳು ತಮ್ಮ ಚುನಾವಣಾ ಪ್ರಚಾರ ಭಾಷಣದಲ್ಲಿ ಹೇಳುತ್ತಿದ್ದರು. ನನ್ನ ಮೂರನೇ ಅವಧಿಯಲ್ಲಿ ವಿಶ್ವದ ಅತೀ ದೊಡ್ಡ ಮೂರು ಆರ್ಥಿಕತೆಯಲ್ಲಿ (Economy) ಭಾರತದ (India) ಹೆಸರು ಇರಲಿದೆ. ಇದು ಮೋದಿ ನೀಡುವ ಗ್ಯಾರಂಟಿ ಎಂದು ಭಾಷಣ ಮಾಡಿದ್ದರು.

ಲೋಕಸಭಾ ಚುನಾವಣೆ ನಡೆಯುವ ಮುನ್ನ ಸೆಮಿಫೈನಲ್‌ ಎಂದೇ ಬಿಂಬಿತವಾಗಿದ್ದ ಮೂರು ರಾಜ್ಯಗಳಲ್ಲಿ ಬಿಜೆಪಿ ಜಯಗಳಿಸುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ #ModiKiGuarantee ಟ್ರೆಂಡ್‌ ಆಗಿದೆ. ದೇಶಕ್ಕೆ “ನಮೋ‌” ಗ್ಯಾರಂಟಿ. ಪ್ರಧಾನಿ  ನರೇಂದ್ರ ಮೋದಿ ಇದ್ದರೆ ಇದ್ದರೆ ಎಲ್ಲವೂ ಸಾಧ್ಯ ಎಂದು ಕರ್ನಾಟಕ ಬಿಜೆಪಿ ಪೋಸ್ಟ್‌ ಮಾಡಿದೆ.

  • ಅಂತರ್ಜಾಲ ಮಾಹಿತಿ

The election of the five states, which was said to be the compass of the Lok Sabha Election, is over and today the results are out. Congress has won a landslide victory in Telangana. Mizoram state election results will be announced on Monday. As the BJP won the Madhya Pradesh, Rajasthan and Chhattisgarh elections, BJP leaders are sharing posters saying ModiKiGuarantee for the country.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 11-01-2026| ಇಂದು ಕೆಲವೆಡೆ ಮಳೆ ನಿರೀಕ್ಷೆ | ಎಲ್ಲೆಲ್ಲಿ ಮಳೆ ಇರಬಹುದು..?
January 11, 2026
2:11 PM
by: ಸಾಯಿಶೇಖರ್ ಕರಿಕಳ
ಬರ ಪ್ರದೇಶ ಕೃಷಿಗೆ ಕಡಿಮೆ ವೆಚ್ಚದ ಪರಿಹಾರ | ಬೀಜ ಸಂಸ್ಕರಣೆಯಲ್ಲಿ ಒಂಟೆ ಮೂತ್ರ ಬಳಕೆ ಪರಿಣಾಮಕಾರಿ – ICAR ಅಧ್ಯಯನ
January 11, 2026
9:58 AM
by: ದ ರೂರಲ್ ಮಿರರ್.ಕಾಂ
ಗ್ರಾಮೀಣ ಉದ್ಯಮಿಗಳಿಂದ ಆರ್ಗ್ಯಾನಿಕ್ ಮಾದರಿ | ‘ಗ್ರೀನ್ ವಿಷನ್’ ವರ್ಮಿ ಕಾಂಪೋಸ್ಟ್ ಯಶೋಗಾಥೆ
January 11, 2026
8:30 AM
by: ದ ರೂರಲ್ ಮಿರರ್.ಕಾಂ
ಬಾಯಿಯ ಕ್ಯಾನ್ಸರ್ ಭೀತಿ ಕಡಿಮೆ ಮಾಡಲಿದೆಯೇ ‘ಇ-ಬೀಮ್’ ತಂತ್ರಜ್ಞಾನ? ಅಡಿಕೆ ಸಂಸ್ಕರಣೆಯಲ್ಲಿ ಹೊಸ ಮನ್ವಂತರ!
January 11, 2026
7:36 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror