ಮಳೆಗಾಲ(Rain season) ಆರಂಭವಾಗುತ್ತಿದ್ದಂತೆ ಹಲಸಿನ ಹಣ್ಣಿನದ್ದೇ(Jack fruit) ಕಾರುಬಾರು. ವರ್ಷಕ್ಕೆ ಒಮ್ಮೆ ಸಿಗುವ ಈ ಹಣ್ಣನ್ನು ಸವಿಯದೆ ಬಿಡುವವರು ಕಮ್ಮಿಯೇ. ಇತ್ತೀಚೆಗೆಂತು ಹಲಸಿನ ಮೇಳಗಳು(Jack fruit festival) ಹಲಸಿನ ಹಣ್ಣಿನ ಪ್ರಿಯರಿಗೆ ನಗರಗಳಲ್ಲೂ ವಿವಿಧ ಬಗೆಯ ಹಲಸಿನ ಹಣ್ಣು ಸವಿಯುವ ಭಾಗ್ಯ ಒದಗಿಸಿದೆ. ಇಂತಹ ಹಲಸಿನ ಹಬ್ಬ (Mysuru Jackfruit Festival) ಮೈಸೂರಿನ ಸಹಜ ಸಮೃದ್ದ ಮತ್ತು ರೋಟರಿ ಕ್ಲಬ್(Rotary Club) ಮೈಸೂರು(Mysore) ಜೊತೆಗೂಡಿ ಮೈಸೂರಿನ ನಂಜರಾಜ ಬಹದ್ದೂರು ಛತ್ರದಲ್ಲಿ 2 ದಿನಗಳ ಕಾಲ ಏರ್ಪಡಿಸಲಾಯಿತು.
ಹಲಸಿನ ವೆರೈಟಿಗಳು! : ಹಲಸಿನ ಮಹತ್ವ ಸಾರುವ ಮೇಳದಲ್ಲಿ ಕೆಂಪು, ಹಳದಿ ಮತ್ತು ಬಿಳಿ ಹಲಸಿನ ತಳಿ ಹಣ್ಣುಗಳು ತಿನ್ನಲು ಸಿಗಲಿವೆ. ಹಲಸಿನ ಐಸ್ ಕ್ರೀಂ, ಚಿಪ್ಸ, ಚಾಕಲೇಟ್, ಹಪ್ಪಳ, ಹಲ್ವ, ಕಬಾಬ್, ಹೋಳಿಗೆ, ವಡೆ, ದೋಸೆ , ಪಲ್ಯ , ಬಿರಿಯಾನಿಯ ಮಳಿಗೆಗಳು ಸಹ ಇದ್ದವು. ಚಿಕ್ಕನಾಯಕನಹಳ್ಳಿ, ನಾಗರಹೊಳೆ ಕಾಡು, ಕೊಳ್ಳೇಗಾಲ, ತಮಿಳುನಾಡಿನ ಪನ್ನರ್ತಿಯ ಗುಣಮಟ್ಟದ ಹಲಸಿನ ಹಣ್ಣುಗಳು ಮಾರಾಟಕ್ಕೆ ಇಲ್ಲಿಗೆ ಬಂದಿದ್ದವು. ತುಮಕೂರಿನ ಕೆಂಪು ಹಲಸು ಸಹ ಬಂದಿದ್ದವು. ತುಮಕೂರಿನ ಹಿರೇಹಳ್ಳಿಯ ತೋಟಗಾರಿಕಾ ಸಂಶೋಧನಾ ಕೇಂದ್ರದವರು ವಿವಿಧ ರೀತಿಯ ಕೆಂಪು ಹಲಸಿನ ತಳಿಗಳನ್ನು ಪ್ರದರ್ಶನಕ್ಕೆ ತಂದಿದ್ದರು. ಹಲಸಿನ ಸಾಗುವಳಿ ಮತ್ತು ಮೌಲ್ಯವರ್ಧನೆ ಕುರಿತು ಮಾಹಿತಿ ನೀಡಲಾಯಿತು.
ವಿವಿಧ ತಳಿ :ಶಂಕರ ಹಲಸು, ರುದ್ರಾಕ್ಷಿ ಬಕ್ಕೆ, ತೂಬಗೆರೆ, ಬೈರಸಂದ್ರ,ಸರ್ವ ಋತು,ಲಾಲ್ ಬಾಗ್ ಮಧುರ, ಥಾಯ್ ರೆಡ್, ವಿಯಟ್ನಾಂ ಸೂಪರ್ ಹರ್ಲಿ, ಗಮ್ ಲೆಸ್, ನಾಗಚಂದ್ರ, ರಾಮಚಂದ್ರ ಮೊದಲಾದ ಕರ್ನಾಟಕದ ಹೆಸರಾಂತ ಹಲಸಿನ ತಳಿ ಗಿಡಗಳು ಮಾರಾಟಕ್ಕೆ ಲಭ್ಯವಿದ್ದವು. ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕು ಪ್ರಾಧಿಕಾರದಲ್ಲಿ ನೊಂದಣಿಯಾಗಿರುವ ಕರ್ನಾಟಕ ರಾಜ್ಯದ ಮೊದಲ ಕೆಂಪು ಹಲಸಿನ ತಳಿ ಸಿದ್ದು ಹಲಸು ಗಿಡಗಳು ಮಾರಾಟಕ್ಕೆ ಇದ್ದವು.
- ಅಂತರ್ಜಾಲ ಮಾಹಿತಿ