#Paddy | ಆಧುನಿಕ ಯುಗದಲ್ಲೂ ಸಂಪ್ರದಾಯ ಬಿಡದ ಊರ ಜನ | ಒಂದೇ ಗದ್ದೆಯಲ್ಲಿ ಸಾವಿರಾರು ಮಂದಿಯಿಂದ ಭತ್ತ ನಾಟಿ |

August 1, 2023
9:52 AM
ಹಸಿ ಹಸಿಯಾದ ಕೆಸರು ಗದ್ದೆ. ಕೈಯಲ್ಲಿ ಭತ್ತದ ಸಸಿ ಹಿಡಿದು ಒಂದೇ ಗದ್ದೆಯಲ್ಲಿ ಕೆಸರು ಕಾಲಲ್ಲಿ ಸಾಲಾಗಿ ಸಾವಿರಾರು ಮಹಿಳೆಯರಿಂದ ಭತ್ತದ ಸಸಿ ನಾಟಿ ಕಾರ್ಯ

ಇತ್ತೀಚಿನ ದಿನಗಳಲ್ಲಿ ಬಹುಕಷ್ಟದ ಕೆಲಸ ಅಂದ್ರೆ  ಕೃಷಿಗೆ ಸಹಾಯಕರು ಸಿಗೋದು. ಜಮೀನು ಕೆಲಸಕ್ಕೆ ಸಹಾಯಕರು ಸಿಗದೆ ರೈತರು ಕಂಗಾಲಾಗಿದ್ದಾರೆ. ಜನ ಬಂದ್ರೆ ಬಂದ್ರು.. ಇಲ್ಲಾಂದ್ರೆ ಇಲ್ಲ. ಅದ್ರಲ್ಲೂ ಭತ್ತದ ನಾಟಿಗೆ ಜನ ಸಿಗೋದೆ ಅಪರೂಪವಾಗಿದೆ. ಆದರೆ ಇಲ್ಲಿ ಒಂದೇ ಗದ್ದೆಯಲ್ಲಿ ಸಾವಿರಾರು ಮಂದಿ ಸಾಂಪ್ರದಾಯಿಕ ಶೈಲಿಯಲ್ಲಿ ನಾಟಿಗೆ ಇಳಿದಿದ್ದಾರೆ. ಈ ಅಪರೂಪದ ಸನ್ನಿವೇಶ ಇಲ್ಲಿದೆ..

Advertisement
Advertisement
Advertisement

 

Advertisement

ಗದ್ದೆ ನಾಟಿ ವಿಡಿಯೋ :

Advertisement

ಈ ಬಾರಿ ತಡವಾಗಿಯಾದರು ಮುಂಗಾರು ಮಲೆನಾಡು, ಕರಾವಳಿಯಲ್ಲಿ ಭರ್ಜರಿಯಾಗಿ ಆಗಿದೆ. ಇದೇ ಸಂಭ್ರಮದಲ್ಲಿ ಭತ್ತ ನಾಟಿಗೆ ರೈತರು ಮುಂದಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹೊರನಾಡು ಗ್ರಾಮದಲ್ಲಿ ಉಚಿತ ಸಾಮೂಹಿಕ ಗದ್ದೆ ನಾಟಿ ಮಾಡಲಾಯಿತು.  ಈಗಷ್ಟೇ ಮಳೆಯಲ್ಲಿ ನೆನೆದ ಗಿಡಮರಗಳು, ಉಳುಮೆ ಮಾಡಿ ಹಸಿ ಹಸಿಯಾದ ಕೆಸರು ಗದ್ದೆ. ಕೈಯಲ್ಲಿ ಭತ್ತದ ಸಸಿ ಹಿಡಿದು ಒಂದೇ ಗದ್ದೆಯಲ್ಲಿ ಕೆಸರು ಕಾಲಲ್ಲಿ ಸಾಲಾಗಿ ಸಾವಿರಾರು ಮಹಿಳೆಯರು ನಾಟಿ ಮಾಡುತ್ತಿದ್ದಾರೆ.

Advertisement
ಹೊರನಾಡಿನ ದೊಡ್ಮನೆಯ ರಾಜೇಂದ್ರ ಹೆಗ್ಗಡೆಯವರ ದೇವರಗದ್ದೆಯಲ್ಲಿ ಜನಪದ ಗೀತೆ ಹಾಡುತ್ತಾ ಸಾಮೂಹಿಕ ನಾಟಿ ನಡೆಯಿತು. ಒಂದೇ ಗದ್ದೆಯಲ್ಲಿ ಸುಮಾರು 1000 ಜನರಿಂದ ನಾಟಿ ಕಾರ್ಯವು ಸಾಂಪ್ರಾದಾಯಿಕ ಶೈಲಿಯಲ್ಲಿ ಜನಪದ ಗೀತೆ ಹಾಡುತ್ತಾ ಗದ್ದೆ ನಾಟಿ ಮಾಡಿದರು. ಮೂಡಿಗೆರೆ, ಬೇಲೂರು, ಜಯಪುರ, ಕೊಪ್ಪ, ಶೃಂಗೇರಿ, ಬಲಿಗೆ, ಬಸರೀಕಟ್ಟೆಯಿಂದಲು ನೂರಾರು ಜನರು ನಾಟಿ ಮಾಡಲೆಂದು ಆಗಮಿಸಿದ್ದರು. ಎಲ್ಲರೂ ಬಂದು ಉಚಿತವಾಗಿ ಸಾಂಪ್ರದಾಯಿಕ ಶೈಲಿಯಲ್ಲಿ ನಾಟಿ ಮಾಡಿ ಸಂಭ್ರಮಿಸಿದರು. ಇಲ್ಲಿ ನಾಟಿ ಮಾಡಿದ ಬಳಿಕವೇ ತಮ್ಮ ಗದ್ದೆಯಲ್ಲಿ ರೈತರು ನಾಟಿ ಮಾಡೋದು ಇಲ್ಲಿನ ವಿಶೇಷ. ಹಾಗಾಗಿ ಈ ಊರಿನ ಸುತ್ತಮುತ್ತಲ ರೈತರು ಮೊದಲು ಇಲ್ಲಿ ಬಂದು ನಾಟಿ ಕಾರ್ಯ ಮಾಡುತ್ತಾರೆ. ನಂತರ ತಮ್ಮ ತಮ್ಮ ಹೊಲದ ಕೆಲಸ ಆರಂಭಿಸುತ್ತಾರೆ. ಇದು ಅನಾದಿ ಕಾಲದಿಂದ ನಡೆದುಕೊಂಡು ಬಂದ ಪದ್ಧತಿ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ವಿಶ್ವ ಚೆಸ್ ಚಾಂಪಿಯನ್‌ಶಿಪ್‌ | ಭಾರತದ ಗುಕೇಶ್ ಚಾಂಪಿಯನ್‌ | ವಿಶ್ವದ ಕಿರಿಯ ಚಾಂಪಿಯನ್ ಆದ ಗುಕೇಶ್‌ |
December 12, 2024
6:48 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 12.12.2024 | ರಾಜ್ಯದ ಹಲವೆಡೆ ಮೋಡದ ವಾತಾವರಣ | ಸಂಜೆ ಸಾಮಾನ್ಯ ಮಳೆ ಸಾಧ್ಯತೆ | ಡಿ.17 ರ ನಂತರ ಕರಾವಳಿಯಲ್ಲಿ ಮತ್ತೆ ಮಳೆ ನಿರೀಕ್ಷೆ..?
December 12, 2024
12:22 PM
by: ಸಾಯಿಶೇಖರ್ ಕರಿಕಳ
ಜೇನುನೊಣಗಳಿಂದ ನಿಮ್ಮ ಹತ್ತಿರದ ಪರಿಸರ ಮಾಲಿನ್ಯ ಪತ್ತೆ…! | ಜೇನುತುಪ್ಪದ ಮೂಲಕ ಪರಿಸರ ಮಾಲಿನ್ಯದ ಸುಳಿವು..! |
December 10, 2024
11:12 PM
by: ವಿಶೇಷ ಪ್ರತಿನಿಧಿ
ಹವಾಮಾನ ವರದಿ | 10.12.2024 | ರಾಜ್ಯದ ಕೆಲವೆಡೆ ಇಂದೂ ಮಳೆ ಸಾಧ್ಯತೆ | ಡಿ.16ರಿಂದ ವಾಯುಭಾರ ಕುಸಿತ| ಮತ್ತೆ ಮಳೆ ಸಾಧ್ಯತೆ
December 10, 2024
1:33 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror