ಅಡಿಕೆ ಬೆಲೆ ಜಾಸ್ತಿ ಆದಂತೆ ಅಡಿಕೆ ಬೆಳಗಾರರ ಸ್ಥಿತಿಯೂ ಇದೇ ಆಗಿತ್ತು…!. ಅಡಿಕೆಗೆ ಬೆಲೆ ಬಂದಾಗ ಅದನ್ನು ಕಳ್ಳರಿಂದ ಕಾಯುವುದೇ ದೊಡ್ಡ ಸವಾಲಾಗಿತ್ತು. ಅಂದು ವೆನಿಲ್ಲಾ ಬೆಳೆಗೆ ಬೆಲೆ ಬಂದಾಗಲೂ ಅದೇ ಸ್ಥಿತಿ ಉಂಟಾಗಿತ್ತು. ಮನೆಗೆ ಸಿಸಿ ಕ್ಯಾಮರಾ, ಗನ್ ಹಿಡಿದು ತಿರುಗುವುದೇ ಆಗಿತ್ತು. ಈಗ ಟೊಮ್ಯಾಟೋ ಬೆಲೆ #TomatoPrice ಏರಿಕೆ ಕಂಡು ಟೊಮ್ಯಾಟೋ ಬೆಳೆಗಾರರ ಕತೆನೂ ಇದೆ.
ತರಕಾರಿ ಬೆಲೆ ಗಗನಕ್ಕೇರಿದೆ, ಟೊಮೆಟೊವಂತು #Tomato ಕೇಳೋ ಮಾತೇ ಇಲ್ಲ, ಶತಕ ಭಾರಿಸಿ ಮುನ್ನುಗ್ಗುತ್ತಿದೆ. ಹೀಗಾಗಿ ಟೊಮೆಟೊ ಬೆಳೆದ ದಾವಣಗೆರೆಯ ರೈತರು #Farmers ಜಮೀನನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದಾರೆ!
ಟ್ರ್ಯಾಕ್ಟರ್ ಟ್ರ್ಯಾಲಿ ಹಾಕಿಕೊಂಡು ಜಮೀನಿಗೆ ಕಾವಲು : ಅತಿಯಾದ ತರಕಾರಿ ಬೆಲೆ ಏರುತ್ತಿರುವುದರಿಂದ ರೈತರಿಗೆ ಬೆಳೆಯ ಕಾವಲಿನ ಕುರಿತು ಟೆನ್ಶನ್ ಶುರುವಾಗಿದೆ. ಟೊಮೆಟೋ ಸೇರಿದಂತೆ ತಾವು ಬೆಳೆದ ಬೆಳೆಗಳನ್ನು ರಕ್ಷಿಸಲು ಜಮೀನಿನಲ್ಲಿ ಟ್ರ್ಯಾಕ್ಟರ್ ಟ್ರ್ಯಾಲಿ ಹಾಕಿಕೊಂಡು ಜಮೀನು ಕಾಯುತ್ತಿದ್ದಾರೆ.
ರಾತ್ರಿ ಹಗಲೆನ್ನದೇ ಎರಡು ಶಿಫ್ಟ್ನಲ್ಲಿ ಗಸ್ತು: ರಾತ್ರಿ ಹಗಲು ಎನ್ನದೇ ಎರಡು ಶಿಫ್ಟ್ನಂತೆ ಟೊಮೆಟೊ ಬೆಳೆದ ಹೊಲದಲ್ಲಿ ಇರುವ ಬಾಕಿ ಎಲ್ಲ ಕೆಲಸ ಬಿಟ್ಟು ರೈತರು ಕಾವಲು ಕಾಯುತ್ತಿದ್ದಾರೆ. ಒಟ್ಟಾರೆ ಇತ್ತ ತರಕಾರಿ ಬೆಲೆ ಏರಿಕೆಯಿಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಅತ್ತ ರೈತರಿಗೂ ಹೊಸ ಬಗೆಯ ತಲೆಬಿಸಿ ಶುರುವಾಗಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel