ಅಡಿಕೆ ಬೆಳೆ ಸಮಸ್ಯೆ ನಮ್ಮಲ್ಲಿ ಮಾತ್ರವಲ್ಲ.. ಭೂತಾನ್‌ನಲ್ಲೂ ಇದೆ..! ಕಳೆದ 3 ವರ್ಷಗಳಿಂದ ಅಲ್ಲಿ ಏನಾಗುತ್ತಿದೆ..?

June 21, 2025
8:17 AM
ಅಡಿಕೆ ಬೆಳೆಯಲ್ಲಿನ ವಿವಿಧ ಸಮಸ್ಯೆ ಭಾರತದಲ್ಲಿ ಮಾತ್ರವಲ್ಲ, ವಿವಿಧ ದೇಶಗಳಲ್ಲೂ ಈಗ ಕಾಣಿಸಿಕೊಳ್ಳಲು ಆರಂಭಿಸಿದೆ. ಪ್ರಮುಖವಾಗಿ ಹವಾಮಾನ ವೈಪರೀತ್ಯವೇ ಅಡಿಕೆ ಬೆಳೆಗೆ ಈಗ ಸಮಸ್ಯೆಯಾಗುತ್ತಿದೆ. ಭೂತಾನ್‌ನಲ್ಲಿ ಕೂಡಾ ಅಡಿಕೆ ಇಳುವರಿ ಕಡಿಮೆಯಾಗಿದೆ. ಚೀನಾದಲ್ಲೂ ಅಡಿಕೆ ಬೆಳೆಯಲ್ಲಿ ಸಮಸ್ಯೆ ಕಂಡುಬರುತ್ತಿದೆ.

ಅಡಿಕೆ ಬೆಳೆಯುವ ನಾಡುಗಳಲ್ಲಿ ಈಗ ವಿವಿಧ ರೋಗಗಳದ್ದೇ ಚರ್ಚೆ. ಎಲೆಚುಕ್ಕಿ, ಹಳದಿ ಎಲೆರೋಗ ಸೇರಿದಂತೆ ಎಳೆ ಅಡಿಕೆ ಬೀಳುವುದು ಚರ್ಚೆಯ ವಿಷಯ. ಕಳೆದ ಮೂರು ವರ್ಷಗಳಿಂದ ಎಲೆಚುಕ್ಕಿ ಜೋರಾಗಿ ಸದ್ದು ಮಾಡುತ್ತಿದೆ. ಈಗ ಎರಡು ವರ್ಷಗಳಿಂದ ವಿಪರೀತ ಎಳೆ ಅಡಿಕೆ ಬೀಳುವುದು ಸಮಸ್ಯೆ. ಅಡಿಕೆ ಬೆಳೆ ವಿಸ್ತರಣೆಯ ನಡುವೆ ಈ ಸಮಸ್ಯೆಗಳು ಸವಾಲಾಗಿದೆ. ಈ ನಡುವೆ ಅಡಿಕೆ ಬೆಳೆಯ ಸಮಸ್ಯೆ ಇಲ್ಲಿ ಮಾತ್ರವಲ್ಲ ಚೀನಾದಲ್ಲಿ, ಭೂತಾನ್‌ನಲ್ಲೂ ಇದೆ. ಕಳೆದ ಮೂರು ವರ್ಷಗಳಲ್ಲಿ ಭೂತಾನ್‌ ನಲ್ಲಿ ಅಡಿಕೆ ಉತ್ಪಾದನೆ ತೀರಾ ಇಳಿಮುಖವಾಗುತ್ತಿದೆ, ಅಡಿಕೆ ಮರಗಳು ಇದ್ದಕ್ಕಿದ್ದಂತೆ ಒಣಗುತ್ತಿದೆ.ಅಡಿಕೆ ಉತ್ಪಾದನೆ ತೀವ್ರವಾಗಿ ಕುಸಿದಿದೆ ಎಂದು ಅಲ್ಲಿನ ಮಾಧ್ಯಮ ವರದಿ ಮಾಡಿದೆ …… ಮುಂದೆ ಓದಿ……

Advertisement

ಭೂತಾನ್‌ನಲ್ಲಿ ಕಳೆದ ಮೂರು ವರ್ಷಗಳಲ್ಲಿ ನೆಟ್ಟ ಮರಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದರೂ ಅಡಿಕೆ ಉತ್ಪಾದನೆ ತೀವ್ರವಾಗಿ ಕುಸಿದಿದೆ ಎಂದು ಅಲ್ಲಿನ ಮಾಧ್ಯಮ ವರದಿ ಮಾಡಿದೆ. 2021 ರಲ್ಲಿ 21,400 ಮೆಟ್ರಿಕ್ ಟನ್  ಇದ್ದ ಅಡಿಕೆ ಇಳುವರಿ 2022 ರಲ್ಲಿ 11,100 ಮೆಟ್ರಿಕ್ ಟನ್ ಗೆ ಇಳಿದಿದೆ.ಇದಕ್ಕೆ ಪ್ರಮುಖವಾಗಿ ದೀರ್ಘಕಾಲದ ಚಳಿಗಾಲ, ಕೀಟಗಳ ಬಾಧೆ ಮತ್ತು ಅಡಿಕೆ ಮರ-ಗಿಡಗಳಲ್ಲಿ ರೋಗ ಬಾಧೆ  ಇಳುವರಿ ಕುಸಿಯಲು ಮತ್ತು ಮರಗಳು ಸಾಯಲು ಕಾರಣ ಎಂದು ರೈತರು ಹೇಳಿದ್ದಾರೆ.ಅಲ್ಲಿನ ಅಂಕಿಅಂಶದ ಪ್ರಕಾರ ಶೇ.50 ಅಡಿಕೆ ಫಸಲು ಮೂರು ವರ್ಷಗಳಿಂದ ಇಳಿಕೆಯಾಗಿದೆ.ಅಲ್ಲಿನ ರಾಷ್ಟ್ರೀಯ ಸರಾಸರಿಯು 2021 ರಲ್ಲಿ ಪ್ರತಿ ಮರಕ್ಕೆ 12 ಕಿಲೋಗ್ರಾಂಗಳಷ್ಟು ಇದ್ದದ್ದು 2022 ರಲ್ಲಿ 8 ಕೆಜಿ ಮತ್ತು 2023 ರಲ್ಲಿ 6 ಕೆಜಿಗೆ ಇಳಿದಿದೆ  ಅಂದರೆ ಉತ್ಪಾದಕತೆ ಕಡಿಮೆಯಾಗಿದೆ.

ಭೂತಾನ್‌ನಲ್ಲಿ ಪ್ರಮುಖವಾಗಿ ಅಡಿಕೆ ಉತ್ಪಾದನೆ ಮಾಡುವ ಜಿಲ್ಲೆ ಸ್ಯಾಮ್ಟೆ. ಇಲ್ಲಿ ಕೂಡಾ ಅಡಿಕೆಗೆ ವಿಪರೀತವಾದ ರೋಗ ಬಾಧೆ ಕಂಡುಬಂದಿದೆ. ಅಲ್ಲಿನ ಅಂಕಿ ಅಂಶದ ಪ್ರಕಾರ  ಆ ಜಿಲ್ಲೆಯಲ್ಲಿ  2021 ರಲ್ಲಿ 1.75 ಮಿಲಿಯನ್ ಇದ್ದ ಒಟ್ಟು ಮರಗಳ ಸಂಖ್ಯೆ 2023 ರ ವೇಳೆಗೆ 1.34 ಮಿಲಿಯನ್‌ಗೆ ಇಳಿದಿದೆ. ಪ್ರತಿ ಮರದ ಇಳುವರಿ 2021 ರಲ್ಲಿ 16 ಕೆಜಿಯಿಂದ 2022 ರಲ್ಲಿ 8 ಕೆಜಿಗೆ ಮತ್ತು 2023 ರಲ್ಲಿ 7 ಕೆಜಿಗೆ ಇಳಿದಿದೆ. ಇದೆಲ್ಲದರ ಕಾರಣದಿಂದ ರೈತರು ಆರ್ಥಿಕ ಸಂಕಷ್ಟಕ್ಕೂ ಒಳಗಾಗಿದ್ದಾರೆ. ಹವಾಮಾನವೇ ಪ್ರಮುಖವಾದ ಕಾರಣ ಎಂದು ರೈತರು ಹೇಳುತ್ತಾರೆ. ಹವಾಮಾನದಿಂದಾಗಿ, ಹೂಬಿಡುವ ಅವಧಿಯಲ್ಲಿ ಕೀಟಗಳು ವೃದ್ಧಿಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕೃಷಿ ಅಧಿಕಾರಿಗಳು ಹೇಳುತ್ತಾರೆ. ಅಡಿಕೆ ಹೂಬಿಡುವಿಕೆಯ ವೇಳೆ ತೇವಾಂಶಕ್ಕೆ ಬಹುಬೇಗನೆ ಹೊಂದಿಕೊಳ್ಳಬೇಕಾಗುತ್ತದೆ , ಆದರೆ ಪ್ರಸ್ತುತ ಹವಾಮಾನ ಅಡಿಕೆ ಬೆಳೆಗೆ ಪೂರಕವಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

Advertisement

Advertisement

ಸುದ್ದಿಯ ಮೂಲ : kuensel online

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ನ್ಯಾನೊ ಯೂರಿಯಾ ಬಳಕೆಯಿಂದ ಶೇಕಡಾ 80 ರಷ್ಟು ಇಳುವರಿ ಸಾಧ್ಯ
August 18, 2025
7:43 AM
by: The Rural Mirror ಸುದ್ದಿಜಾಲ
ರಾಜ್ಯದಲ್ಲಿ 17 ಸಾವಿರ ಶಿಕ್ಷಕರ ನೇಮಕಕ್ಕೆ ರಾಜ್ಯ ಸರ್ಕಾರ ಚಿಂತನೆ
August 18, 2025
7:39 AM
by: The Rural Mirror ಸುದ್ದಿಜಾಲ
ಭಾರೀ ಮಳೆ | ರಾಜ್ಯದ ಈ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ
August 17, 2025
10:31 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 17.08.2025 | ಕೆಲವು ಕಡೆ ಉತ್ತಮ ಮಳೆ | ಆ.19ರಿಂದ ಮಳೆ ಕಡಿಮೆ ನಿರೀಕ್ಷೆ
August 17, 2025
2:33 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group