ಬಸ್ಸು ಚಾಲಕನಿಗೆ ಹಲಸಿನ ಊಟ ತಂದ ಸಂಕಷ್ಟ…!

July 24, 2025
7:06 AM

ಹಲಸಿನಹಣ್ಣು ತಿಂದು ಉಸಿರಾಟದ ಮೂಲಕ ಆಲ್ಕೋಹಾಲ್‌ ಪತ್ತೆ ಮಾಡುವ ವೇಳೆ ಯಂತ್ರಕ್ಕೆ ಒಳಪಟ್ಟ ಬಸ್‌ ಚಾಲಕ ವರದಿಯಲ್ಲಿ ಏರುಪೇರಾದ ಘಟನೆ ಕೇರಳದ ಕೊಟ್ಟಾಯಂನಲ್ಲಿ ನಡೆದಿದೆ.

Advertisement

ಪತ್ತನಂತಿಟ್ಟದಲ್ಲಿರುವ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ ಡಿಪೋದಲ್ಲಿ ಬ್ರೀತ್‌ಅಲೈಜರ್‌ ಮೂಲಕ ನಡೆಸಲಾದ  ಪರೀಕ್ಷೆಯಲ್ಲಿ ಬಸ್ ಚಾಲಕ ವಿಫಲನಾದ ಘಟನೆ ನಡೆಯಿತು. ಆದರೆ ಬಸ್‌ ಚಾಲಕ, ತಾನು ಅಮಲು ಪದಾರ್ಥ ಸೇವಿಸಿಲ್ಲ ಎಂದು ಅಧಿಕಾರಿಗಳಿಗೆ ಸವಾಲು ಹಾಕಿದರು. ಈ ಸಂದರ್ಭ ರಕ್ತದ ಸ್ಯಾಂಪಲ್‌ ಕೂಡಾ ತೆಗೆಯಲಾಯಿತು. ಅದರಲ್ಲಿ ನೆಗೆಟಿವ್‌ ವರದಿ ಬಂದಿತ್ತು. ತಕ್ಷಣವೇ ಬ್ರೀತ್‌ ಅಲೈಸರ್‌ ಪರೀಕ್ಷೆಗೆ ಒಳಪಡಿಸಲಾಯಿತು, ಇತರರನ್ನೂ ಪರೀಕ್ಷೆ ಒಳಪಡಿಸಲಾಯಿತು. ಹಾಗಿದ್ದರೆ ಬ್ರೀತ್‌ಅಲೈಜರ್‌ ಮೂಲಕ ನಡೆಸಲಾದ  ಪರೀಕ್ಷೆಯಲ್ಲಿ ಬಸ್ ಚಾಲಕ ವಿಫಲನಾದದ್ದು ಹೇಗೆ ಎಂದು ಪತ್ತೆ ಮಾಡುವ ಪ್ರಯತ್ನ ನಡೆಯಿತು.

ಈ ಸಂದರ್ಭ ಬೆಳಕಿಗೆ ಬಂದ ಅಂಶ, ಬಸ್‌ ಚಾಲಕರೊಬ್ಬರು ತನ್ನ ಮನೆಯಿಂದ ಹಲಸಿನ ಹಣ್ಣುಗಳನ್ನು ಡಿಪೋಗೆ ತಂದು ತನ್ನ ಸಹೋದ್ಯೋಗಿಗಳೊಂದಿಗೆ ಹಂಚಿಕೊಂಡಿದ್ದರು. ಈ ಬಸ್ ಚಾಲಕ ಸಾಕಷ್ಟು ಪ್ರಮಾಣದಲ್ಲಿ‌ ಹಲಸಿನ ಹಣ್ಣನ್ನು ಸೇವಿಸಿದ್ದರು.  ಬಸ್‌ ಚಾಲನೆಗೆ ಮುನ್ನ ಇಲಾಖೆಯ ನಿಯಮದಂತೆ ಅವರು ನಂತರ ಬ್ರೀತ್‌ ಅಲೈಜರ್ ಪರೀಕ್ಷೆಗೆ ಒಳಗಾದರು. ಆ ಮೀಟರ್ ತಕ್ಷಣ 10 ಕ್ಕೆ ಏರಿತು. ಕೊನೆಗೆ ಇದು ಹಲಸಿನ ಹಣ್ಣಿನ ಪ್ರಭಾವ ಎಂಬಲ್ಲಿಗೆ ಘಟನೆ ತಿಳಿಯಾಯಿತು.

ಕೆಲವು  ವರದಿಗಳ ಪ್ರಕಾರ, ಹಲಸಿನ ಹಣ್ಣು ತಿನ್ನುವುದರಿಂದ , ವಿಶೇಷವಾಗಿ ಅದು ಹಣ್ಣಾದಾಗ ಅಥವಾ ಅತಿಯಾಗಿ ಹಣ್ಣಾದಾಗ  ಬಾಯಿಯಲ್ಲಿ ಎಥೆನಾಲ್ ಉಳಿಯಬಹುದು, ಇದು ಬ್ರೀತ್‌ ಅಲೈಜರ್ ಮೂಲಕ ತಪ್ಪು  ಫಲಿತಾಂಶವನ್ನು ನೀಡಲು ಸಾಧ್ಯವಿದೆ.

Advertisement

ಸಾಮಾನ್ಯವಾಗಿ ಬ್ರೀತ್‌ ಅಲೈಜರ್‌ ಉಸಿರಾಟದಲ್ಲಿನ ಆಲ್ಕೋಹಾಲ್ ಆವಿಯನ್ನು ಅಳೆಯುತ್ತವೆ ಮತ್ತು ಶ್ವಾಸಕೋಶದಿಂದ ಹೊರಹಾಕಲ್ಪಟ್ಟ ಆಲ್ಕೋಹಾಲ್ ಅನ್ನು ಪತ್ತೆಹಚ್ಚಲು ವಿನ್ಯಾಸಗೊಳಿಸಲಾಗಿದೆ. ಆದರೆ ಹಲಸು ಹಣ್ಣು ತಿಂದಾಗಲೂ ಉಳಿದಿರಬಹುದಾದ ಅಥವಾ ರಾಸಾಯನಿಕ ಕ್ರಿಯೆಗಳಿಂದ ಕಂಡುಬರುವ ಆಲ್ಕೋಹಾಲ್‌ ಅಥವಾ ಎಥೆನಾಲ್‌ ವಾಸನೆಯನ್ನು ಯಂತ್ರವು ಗ್ರಹಿಸುವ ಸಾಧ್ಯತೆ ಹೆಚ್ಚಿದೆ.  ಆದರೆ ಹಣ್ಣು ತಿಂದು ಲಾಲಾರಸದ ಮೂಲಕ ಸ್ವಲ್ಪ ಹೊತ್ತು ಕಳೆದರೆ ಅಥವಾ ಬಾಯಿ ತೊಳೆದರೆ ಈ ಫಲಿತಾಂಶ ಬರಲು ಸಾಧ್ಯವಿಲ್ಲ. ಅಂದರೆ ಸಾಮಾನ್ಯವಾಗಿ 15-20 ನಿಮಿಷಗಳಲ್ಲಿ ಈ ಅಂಶಗಳು ನಿವಾರಣೆಯಾಗುತ್ತದೆ.  ತೀರಾ ಮಾಗಿದ ಯಾವುದೇ ಹಣ್ಣು ಸೇವಿಸಿದರೂ ಇಂತಹ ಫಲಿತಾಂಶ ಬರಲು ಸಾಧ್ಯತೆ ಇದೆ ಎಂದು ವರದಿಗಳು ಹೇಳುತ್ತವೆ.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಭಾರೀ ಮಳೆ | ರಾಜ್ಯದ ಈ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ
August 17, 2025
10:31 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 17.08.2025 | ಕೆಲವು ಕಡೆ ಉತ್ತಮ ಮಳೆ | ಆ.19ರಿಂದ ಮಳೆ ಕಡಿಮೆ ನಿರೀಕ್ಷೆ
August 17, 2025
2:33 PM
by: ಸಾಯಿಶೇಖರ್ ಕರಿಕಳ
ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಭಾರತಕ್ಕೆ
August 17, 2025
6:52 AM
by: The Rural Mirror ಸುದ್ದಿಜಾಲ
ರಾಜ್ಯದ ಕರಾವಳಿ, ಮಲೆನಾಡು ಭಾರೀ ಮಳೆ ಸಂಭವ | ಘಟ್ಟ ಪ್ರದೇಶಗಳಲ್ಲಿ ಭೂ ಕುಸಿತ ಸಾಧ್ಯತೆ | ಹವಾಮಾನ ಇಲಾಖೆ ಎಚ್ಚರಿಕೆ
August 17, 2025
6:49 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group