ಯಾವುದೇ ದೇಶದ ಆರ್ಥಿಕತೆ ಕೈ ಕೊಟ್ಟರೆ ಎಂತಹಾ ಪರಿಸ್ಥಿತಿ ಬರುತ್ತದೆ ಅನ್ನೋದು ನಮಗೆ ತಿಳಿದೇ ಇದೆ. ಪಾಕಿಸ್ಥಾನ, ಶ್ರೀಲಂಕಾ, ಅಮೇರಿಕಾದ ಕೆಲ ದೇಶಗಳು ಇದಕ್ಕೆ ಸ್ಪಷ್ಠ ಉದಾಹರಣೆ. ಈ ಹಣದುಬ್ಬರ ಕೇವಲ ಬಡ ರಾಷ್ಟ್ರಗಳಿಗೆ ಮಾತ್ರವಲ್ಲ ಶ್ರೀ ಮಂತ ರಾಷ್ಟ್ರಗಳಿಗೂ ತಟ್ಟುತ್ತದೆ. ಇದೀಗ ದಕ್ಷಿಣ ಅಮೆರಿಕ(South America) ಖಂಡದ ಎರಡನೇ ಅತಿದೊಡ್ಡ ಆರ್ಥಿಕತೆ ಎನಿಸಿದ ಅರ್ಜೆಂಟೀನಾ ಈಗ ಹಣದುಬ್ಬರದ (Inflation in Argentina) ಸುಳಿಗೆ ಸಿಲುಕಿ ವಿಲವಿಲ ಒದ್ದಾಡುತ್ತಿದೆ. ಬೆಲೆ ಏರಿಕೆ ಅಲ್ಲಿನ ಜನರನ್ನು ಹೈರಾಣಗೊಳಿಸುತ್ತಿದೆ.
ಸೆಪ್ಟೆಂಬರ್ನಲ್ಲಿ ಅರ್ಜೆಂಟೀನಾದ ಹಣದುಬ್ಬರ ಬರೋಬ್ಬರಿ ಶೇ. 138ಕ್ಕೂ ಹೆಚ್ಚಿತ್ತು. ಈ ಅಕ್ಟೋಬರ್ನಲ್ಲಿ ಶೇ. 143ರಷ್ಟಾಗಿದೆ. ಇಂಥ ಸ್ಥಿತಿಯಲ್ಲಿ ಅರ್ಜೆಂಟೀನಾದ ಜನರು ಸಾಮಾನ್ಯ ಜೀವನ ನಡೆಸುವುದೇ ದುಬಾರಿಯಾಗಿದೆ(Costly). ತಮ್ಮ ಹಳೆಯ ಬಟ್ಟೆ ಮಾರಿ(Old Clothes) ಜೀವನ(Life) ನಡೆಸಬೇಕಾದ ಸ್ಥಿತಿಯಲ್ಲಿ ಅಲ್ಲಿನ ಜನರಿದ್ದಾರೆ. ಅಭಿವೃದ್ಧಿಶೀಲ ದೇಶವೆನಿಸಿದ ಅರ್ಜೆಂಟೀನಾದಲ್ಲಿ ಈಗ ಶೇ. 40ರಷ್ಟು ಜನರು ಬಡತನಕ್ಕೆ ಸಿಲುಕಿದ್ದಾರೆ. ಅಲ್ಲೀಗ ಜವಳಿ ಉದ್ಯಮವೇ ಸ್ಥಗಿತಗೊಂಡಂತಿದೆ. ಹೊಸ ಉಡುಪುಗಳ ಮಾರಾಟ ಬಹಳ ಕಡಿಮೆ ಆಗಿದೆ. ಸೆಕೆಂಡ್ ಹ್ಯಾಂಡ್ ಉಡುಪುಗಳ ಮಾರುಕಟ್ಟೆ ಗಿಜಿಗಿಜಿಗುಡುತ್ತಿದೆ. ಜನರು ತಮ್ಮ ಹಳೆಯ ಉಡುಪುಗಳನ್ನು, ಅದರಲ್ಲೂ ಜೀನ್ಸ್ ಬಟ್ಟೆಗಳನ್ನು ಮಾರಿ ಅದರಿಂದ ಬಂದ ಹಣದಿಂದ ಜೀವನ ನಡೆಸುತ್ತಿದ್ದಾರೆ. ಹೊಸ ಬಟ್ಟೆ ಖರೀದಿಸಲು ಸಾಧ್ಯವಿಲ್ಲದ ಜನರು ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಗೆ ಬಂದು ಹಳೆಯ ಉಡುಪುಗಳನ್ನು ಪಡೆದು ಹೋಗುತ್ತಿದ್ದಾರೆ ಎಂದು ರಾಯ್‌ಟರ್ಸ್ ಅವರದಿ ಹೇಳುತ್ತಿವೆ. ಅರ್ಜೆಂಟೀನಾ ಮೊದಲ ದಕ್ಷಿಣ ಅಮೆರಿಕನ್ ದೇಶಗಳ ಜನರಿಗೆ ಜೀನ್ಸ್ ಎನ್ನುವುದು ಬಹಳ ಅಚ್ಚುಮೆಚ್ಚಿನ ಉಡುಪು.
ಅರ್ಜೆಂಟೀನಾದಲ್ಲಿ ಯಾಕಿಷ್ಟು ಬೆಲೆ ಏರಿಕೆ? : ಅರ್ಜೆಂಟೀನಾ ಕೆಲವಾರು ವರ್ಷಗಳಿಂದಲೂ ಬೆಲೆ ಏರಿಕೆಯಿಂದ ಬಸವಳಿದಿದೆ. ಆರ್ಥಿಕ ತಜ್ಞರ ಪ್ರಕಾರ ಅಲ್ಲಿನ ಸರ್ಕಾರ ಅವಶ್ಯಕತೆಗಿಂತ ಹೆಚ್ಚು ನೋಟುಗಳನ್ನು ಮುದ್ರಿಸುತ್ತಿರುವುದು ಇದಕ್ಕೆ ಪ್ರಮುಖ ಕಾರಣ. ಪಿಸೋ ಕರೆನ್ಸಿ ಮೌಲ್ಯ ಗಣನೀಯವಾಗಿ ಕುಸಿಯುತ್ತಿದೆ. ಕಳೆದ 10 ವರ್ಷಗಳಿಂದ ಅರ್ಜೆಂಟೀನಾ ಕರೆನ್ಸಿ ಮಹಾಕುಸಿತ ಅನುಭವಿಸಿದೆ. 2013ರಲ್ಲಿ ಒಂದು ಅಮೆರಿಕನ್ ಡಾಲರ್ಗೆ 6 ಪೆಸೋ ಬೆಲೆ ಇತ್ತು. ಈಗ ಒಂದು ಡಾಲರ್ಗೆ ಬರೋಬ್ಬರಿ 350 ಪೆಸೋ ಆಗಿದೆ. ಅಂದರೆ 10 ವರ್ಷದಲ್ಲಿ ಕುಸಿತವಾಗಿರುವುದು ಗಮನಾರ್ಹ.
Argentina, which is the second largest economy of the South American continent, is now reeling under the spiral of inflation. The price hike is bothering the people there. Inflation in Argentina in September was 10% in October. It is 143. In such a situation, it is expensive for the people of Argentina to live a normal life. There are people there who have to sell their old clothes to make a living. In Argentina, which is a developing country, now percent. 40 percent of the people have fallen into poverty.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…