ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಮಾತಿನಂತೆ ನಾವು ತೆಗೆದುಕೊಳ್ಳಬೇಕಾದ ಆಹಾರ ಕ್ರಮದಲ್ಲಿ ನಮಗೆ ಹೆಚ್ಚಿನ ಕಾಳಜಿ ಇರಬೇಕು. ಹೊಟ್ಟೆ ತುಂಬಿಸಲು ಏನಾದರೊಂದನ್ನು ಸೇವಿಸಿದರಾಯಿತು ಎಂಬ ನಿರ್ಲಕ್ಷ್ಯವೇ ರೋಗಕ್ಕೆ ಆಹ್ವಾನವನ್ನು ನೀಡುತ್ತದೆ. ಆದರೆ ಸಣ್ಣ ವಯಸ್ಸಿನಿಂದಲೇ ಸಾಧ್ಯವಾದಷ್ಟು ಹೆಚ್ಚಿನ ಪ್ರಮಾಣದಲ್ಲಿ ಪೌಷ್ಠಿಕ ಆಹಾರಗಳ ಸೇವನೆಗೆ ಒತ್ತು ನೀಡಬೇಕು.
ಆಹಾರಗಳು ನಮ್ಮ ಶರೀರವನ್ನು ಪೋಷಣೆ ಮಾದುವುದಲ್ಲದೆ ನಮ್ಮ ದೈನಂದಿನ ಚಟುವಟಿಕೆಗಳಿಗೆ ಉತ್ತೇಜನಕೊಡುತ್ತದೆಂದು ಎಲ್ಲರಿಗೂ ತಿಳಿದ ವಿಷಯ. ಆದರೆ ಅದೇ ಆಹಾರದಿಂದ ಕೆಲವು ಕಾಯಿಲೆಗಳನ್ನು – ಅಂದರೆ ಅಧಿಕ ರಕ್ತದೊತ್ತಡ, ಅಸ್ತಮಾ, ಚರ್ಮ ತುರಿಕೆ ಮತ್ತು ಮೂತ್ರಕೋಶ ಸೋಂಕು – ಇಂತಹ ಕಾಯಿಲೆಗಳನ್ನು ತಡೆಗಟ್ಟಬಹುದು. ಕೆಲವೊಂದು ಹಣ್ಣುಗಳು ಹಾಗೂ ತರಕಾರಿಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ನಿಮ್ಮನ್ನು ಆರೋಗ್ಯಕರವಾಗಿಸಲು ಅಗತ್ಯವಾಗಿರುವ ಪೋಷಕಾಂಶಗಳು ಇವುಗಳು ಒಳಗೊಂಡಿವೆ. ದಿನವೂ ಈ ಆಹಾರಗಳನ್ನು ನಿಮಗೆ ಸೇವಿಸಬಹುದು.
ಸೇಬಿನಲ್ಲಿ ಫ್ಲಾವನೋಯ್ಡ್‌ಗಳು (ಆಂಟಿ-ಆಕ್ಸಿಡೆಂಟ್‌ಗಳು) ಅಧಿಕವಾಗಿರುತ್ತವೆ. ಇವುಗಳು ಅಸ್ತಮಾ ಮತ್ತು ಮಧುಮೇಹವನ್ನು ನಿವಾರಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಇದರ ಜೊತೆಗೆ ಸೇಬುಗಳು ನಮ್ಮ ಹಲ್ಲುಗಳಿಗೆ ಬಿಳುಪನ್ನು ಸಹ ನೀಡುತ್ತವೆ ಮತ್ತು ಮೌತ್ ಫ್ರೆಶ್‌ನರ್ ಆಗಿ ಸಹ ಕಾರ್ಯ ನಿರ್ವಹಿಸುತ್ತವೆ. ಇದು ಸಹ ಮಧುಮೇಹದ ವಿರುದ್ಧ ಕೂಡ ಹೋರಾಡುತ್ತದೆ.
ಕೊತ್ತಂಬರಿಯಲ್ಲಿರುವ ಆರು ಪ್ರಮುಖ ಆಮ್ಲಗಳಲ್ಲಿ ಲಿನೋಲಿಕ್ ಆಸಿಡ್ ಎಂಬ ಆಮ್ಲವೂ ಇದೆ. ಇದು ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಗಳನ್ನು ಕಡಿಮೆ ಮಾಡಲು ಪ್ರಮುಖವಾಗಿದೆ. ಇದರೊಂದಿಗೆ ಓಲಿಕ್ ಆಮ್ಲ, ಪಾಮಿಟಿಕ್ ಆಮ್ಲ, ಸ್ಟಿಯಾರಿಕ್ ಅಮ್ಲ ಮತ್ತು ವಿಟಮಿನ್ ಸಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕೆಡಿಮೆಗೊಳಿಸಲು ನೆರವಾಗುತ್ತವೆ.
ಹೂಕೋಸು ಹಾಗೂ ಇತರ ಕ್ಯಾಬೇಜು ವರ್ಗಕ್ಕೆ ಸೇರಿದ ತರಕಾರಿಗಳು ರಕ್ತದೊತ್ತಡವನ್ನು ಹಾಗೂ ಮೂತ್ರಪಿ೦ಡಗಳ ಕಾರ್ಯನಿರ್ವಹಣೆಯನ್ನು ಸುಧಾರಿಸಬಲ್ಲವು. ವಿಜ್ಞಾನಿಗಳು ಹಾಗೂ ಸ೦ಶೋಧನಾ ಅಧ್ಯಯನಗಳು ಹೇಳಿರುವ ಪ್ರಕಾರ, DNA methylation ಅನ್ನು ಸುಧಾರಿಸುವಲ್ಲಿ sulforaphane ನ ಪ್ರಯೋಜನಗಳು ಅಡಗಿವೆ. ಇದ೦ತೂ ಜೀವಕೋಶಗಳ ಸಹಜವಾದ ಕಾರ್ಯನಿರ್ವಹಣೆಗೆ ಹಾಗೂ ಸಮರ್ಪಕ gene ಅಭಿವ್ಯಕ್ತಿಗೆ, ವಿಶೇಷವಾಗಿ endothelium ಎ೦ದು ಕರೆಯಲ್ಪಡುವ, ಸುಲಭವಾಗಿ ಹಾನಿಗೊಳಪಡುವ ರಕ್ತನಾಳಗಳ ಒಳಮೇಲ್ಮೈಗಳ ವಿಚಾರದಲ್ಲ೦ತೂ ಇದು ಬಹು ಅವಶ್ಯವಾದುದಾಗಿದೆ.
ಹೀಗಾಗಿ ಹೂಕೋಸನ್ನು ನಿಮ್ಮ ಆಹಾರಕ್ರಮಕ್ಕೆ ಸೇರಿಸಿಕೊ೦ಡಲ್ಲಿ, ಅದು ನಿಮ್ಮ ಹೃದಯದ ಸ್ವಾಸ್ಥ್ಯಕ್ಕೆ ಪೂರಕವಾಗಿರಬಲ್ಲದು.
ಮಾವಿನ ಹಣ್ಣಿನಲ್ಲಿರುವ ಜಿಯಾಕ್ಸಾಂತಿನ್ ಮತ್ತು ಲೂಟೇನ್ ಎಂಬ ಆಂಟಿಆಕ್ಸಿಡೆಂಟ್‌ಗಳು ಮಧುಮೇಹ ಮತ್ತು ಕೆಲವೊಂದು ನಿರ್ದಿಷ್ಟ ಬಗೆಯ ಕಣ್ಣಿನ ಡಿಸಾರ್ಡರ್‌ಗಳನ್ನು ನಿವಾರಿಸಲು ಸಹಾಯ ಮಾಡುತ್ತವೆ.
ಬ್ರೊಕೊಲಿಯಲ್ಲಿ ವಿಟಮಿನ್‌ಗಳು, ಖನಿಜಗಳು, ನಾರಿನಾಂಶ ಮತ್ತು ಆಂಟಿಆಕ್ಸಿಡೆಂಟ್‌ಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇವುಗಳಿಂದ ಮುಕ್ತ ಮೂಲ ಸ್ವರೂಪಗಳಿಗಾಗುವ ಅಪಾಯವನ್ನು ತಡೆಗಟ್ಟಬಹುದು. ಇದು ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆಗೊಳಿಸಲು ಒಂದು ಅತ್ಯಂತ ವಿಶಿಷ್ಟವಾದ ಆಹಾರ.
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…