ಸಾವಯವ ಬದುಕು(Organic farming) – ಕೃಷಿಯ ಮೌಲ್ಯಗಳನ್ನು ಜನಮಾನಸದಲ್ಲಿ ಬೇರೂರಿಸುವ ಸಂಕಲ್ಪದೊಂದಿಗೆ ಜನವರಿ 12 ಮತ್ತು 13 ರಂದು ಮಹಾಸಮಾವೇಶವು ಕೊಲ್ಹಾಪುರ(Kolhapur) ಸಮೀಪವಿರುವ ಕನ್ನೇರಿಯ(Kanneri) ಶ್ರೀ ಸಿದ್ಧಗಿರಿ ಸಂಸ್ಥಾನದಲ್ಲಿ ನಾಡಿನ ಎಲ್ಲಾ ಮಠಾಧೀಶರ, ಸಂತರ ಹಾಗೂ ಧರ್ಮದರ್ಶಿಗಳ ಮಹಾಸಮಾವೇಶ ನಡೆಯಲಿದೆ.
ಆಧುನಿಕ ಕೃಷಿಯು ಪ್ರಾಕೃತಿಕ ಮೌಲ್ಯಗಳನ್ನು ಪರಂಪರೆಗಳ ಅನುಭವಗಳನ್ನು ಗೌರವಿಸದಿರುವ ಪರಿಣಾಮದ ಗಂಭೀರತೆ ಈಗಾಗಲೇ ಹಲವು ರೀತಿಯಲ್ಲಿ ತಟ್ಟುತ್ತಿದೆ. ಕೃಷಿ ಉತ್ಪಾದನೆ ಕ್ಷೀಣಿಸುತ್ತಿದೆ, ಕೀಟ-ರೋಗದ ನಿಯಂತ್ರಣಕ್ಕೆ ಬಳಸುತ್ತಿರುವ ವಿಷಗಳು ಜೀವಜಾಲಕ್ಕೇ ಮಾರಕವಾಗುತ್ತಿವೆ, ಜನರು – ಜಾನುವಾರುಗಳು ಹೊಸ ಹೊಸ ಖಾಯಿಲೆಗಳಿಂದ ನರಳುವಂತಾಗಿದೆ, ಪುಟ್ಟ ಮಕ್ಕಳಿಗೂ ಕ್ಯಾನ್ಸರ್, ಸಕ್ಕರೆ ಖಾಯಿಲೆಗಳು… ಸಾಮಾಜಿಕ ಕಾರಣಗಳು ಯುವ ಸಮುದಾಯವನ್ನು ಕೃಷಿ ಕ್ಷೇತ್ರದಿಂದ ಬಹುದೂರ ಸರಿಸುತ್ತಿವೆ ರೈತರನ್ನು ಹುಟ್ಟಿಸಲಾಗದೆ ಗ್ರಾಮಗಳು ಬಂಜೆಯಾಗುತ್ತಿವೆ.
‘ರೈತನ ತಾಯಿ’ ಯಾರಾದಾರು ಎಂಬ ಪ್ರಶ್ನೆಗೆ ಉತ್ತರ ಸಿಗದೆ ಕೃಷಿ ಪ್ರಧಾನ ಭಾರತ ನಲುಗಿದೆ. ಆಧುನಿಕ ಶಿಕ್ಷಣದ ಸುನಾಮಿ ಗ್ರಾಮೀಣ ಚೇತನಗಳನ್ನು ನಗರಕ್ಕೆ ಹೊತ್ತೊಯ್ಯುತ್ತಿದೆ. ಈ ಎಲ್ಲಾ ಸಂಕಷ್ಟಗಳಿಗೆ ಪರಿಹಾರ ಹುಡುಕುವ ತವಕದಿಂದ ಆಯೋಜಿಸಿದ ಮಹಾಸಮಾವೇಶ ಇದಾಗಿದೆ. ಕಾರ್ಯಕ್ರಮದ ಉದ್ದೇಶ ನಾಡಿನ ಎಲ್ಲಾ ಪ್ರಮುಖರು, ಕೃಷಿಕರ ಆಗಮನದ ಮೂಲಕ – ಆಶೀರ್ವಾದ – ಪ್ರೇರಣೆ ಪಡೆದು ಗ್ರಾಮೀಣ ಬದುಕಿನ ಚಿತ್ರಣ ಸುಂದರಗೊಳಿಸಲು ಅತ್ಯಗತ್ಯ ಇದೆ.
ವಿಶ್ವದ ಪ್ರಮುಖವಾದ 107 ಬೆಳೆಗಳಲ್ಲಿ ಸುಮಾರು 70% ಗೆ ಬೆಳೆಗಳು ಜೇನುನೊಣಗಳಂತಹ ಪರಿಸರ…
ಬಂಡಿಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಾತ್ರಿ ಸಂಚಾರ ನಿಷೇಧ ತೆರವುಗೊಳಿಸಬಾರದು ಎಂದು…
ರಾಜ್ಯದಲ್ಲಿ 100 ಹೊಸ ವಿದ್ಯುತ್ ಉಪ ಕೇಂದ್ರಗಳನ್ನು ಸ್ಪಾಪಿಸಲಾಗುವುದು ಎಂದು ಇಂಧನ ಸಚಿವ…
ಒಂದು ರಾಷ್ಟ್ರ, ಒಂದು ಚುನಾವಣೆ ವ್ಯವಸ್ಥೆ ಜಾರಿಗೆ ಬಂದರೆ ಭಾರತವು ಶೇಕಡ 1.5…
ಬೆಂಗಳೂರಿನಲ್ಲಿ ಭಾಗಶಃ ಮೋಡಕವಿದ ವಾತಾವರಣ ಇರಲಿದೆ. ಗುಡುಗು ಸಹಿತ ಹಗುರ ಮಳೆಯಾಗಲಿದೆ ಎಂದು…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490