Advertisement
MIRROR FOCUS

ಕೇಂದ್ರದ NEP ಕೋರ್ಸ್ ಕೈಬಿಡಲು ನಿರ್ಧರಿಸಿದ ರಾಜ್ಯ ಸರ್ಕಾರ | ಮಕ್ಕಳ ಭವಿಷ್ಯದ ಜೊತೆ ಯಾಕೆ ಆಟ..?

Share

ಸರ್ಕಾರಗಳು(Govt) ಬದಲಾಗುತ್ತಿದ್ದಂತೆ ಹಿಂದಿನ ಸರ್ಕಾರಗಳು ಜಾರಿಗೆ ತಂದ ಯೋಜನೆಗಳನ್ನು(Scheme) ಬಂದ ಸರ್ಕಾರಗಳು ಬದಲಾಯಿಸೋದು ಮಾಮೂಲು. ಬದಲಾಯಿಸೊದೇನೋ ಸರಿ.. ಆದರೆ ಅದರಿಂದ ಯಾರಿಗೆ ತೊಂದರೆ ಇದೆ. ಲಾಭ ಏನು..? ಸಮಸ್ಯೆ ಏನಾಗಬಹುದು ಅನ್ನೋದನ್ನು ಕನಿಷ್ಠ ಯೋಚನೆ ಮಾಡೋದಿಲ್ಲ ಸರ್ಕಾರಗಳು. ಅಂದಿನ ಬಿಜೆಪಿ ಸರ್ಕಾರ(BJP Govt) ಎನ್​​ಇಪಿ(NEP) ಜಾರಿಗೊಳಿಸಿದ ಸಮಯದಿಂದ ಪದವಿಗೆ ಸೇರಿದ್ದ ವಿದ್ಯಾರ್ಥಿಗಳು ಸದ್ಯ ಮೂರನೇ ವರ್ಷದ ಪದವಿ ವ್ಯಾಸಂಗ(Graduate) ಮಾಡ್ತಿದ್ದಾರೆ. ಆದರೀಗ ಅದನ್ನು ಕಾಂಗ್ರೆಸ್‌ ಸರ್ಕಾರ(Congress Govt) ಕೈ ಬಿಡಲು ನಿರ್ಧರಿಸಿದೆ. ಇದು ನೇರ ಪರಿಣಾಮ ಬೀರೋದು ತಮ್ಮ ಭವಿಷ್ಯ ಕಟ್ಟಿಕೊಳ್ಳಲು ಹೊರಟ ವಿದ್ಯಾರ್ಥಿಗಳ(Students) ಮೇಲೆ.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್​​ಇಪಿ) ಅಡಿಯಲ್ಲಿ ಪರಿಚಯಸಿದ್ದ ಕೋರ್ಸ್​​ ಕೈಬಿಡುವ ಶಿಫಾರಸ್ಸಿಗೆ ಉನ್ನತ ಶಿಕ್ಷಣ ಇಲಾಖೆ ಅಸ್ತು ಎಂದಿದೆ. ಸಿಎಂ ಸಿದ್ದರಾಮಯ್ಯ ಒಪ್ಪಿಗೆಯಷ್ಟೇ ಬಾಕಿ ಉಳಿದಿದೆ.ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ಬಂದಿದ್ದ ರಾಷ್ಟ್ರೀಯ ಶಿಕ್ಷಣ ನೀತಿಯಡಿ ರಾಜ್ಯ ಉನ್ನತ ಶಿಕ್ಷಣದಲ್ಲಿ ಪರಿಚಯಿಸಿದ್ದ 4 ವರ್ಷಗಳ ಪದವಿ ಹಾಗೂ ಬಹು ಐಚ್ಛಿಕ ವಿಷಯಗಳ ಆಯ್ಕೆಯ ಅವಕಾಶವನ್ನ ಕಾಂಗ್ರೆಸ್​​ ಸರ್ಕಾರ 2024-25ನೇ ಸಾಲಿನಿಂದ ಕೈ ಬಿಡುವುದು ಬಹುತೇಕ ಖಚಿತವಾಗಿದೆ.

ಸದ್ಯ ಉನ್ನತ ಶಿಕ್ಷಣ ಇಲಾಖೆ ಸಮ್ಮತಿ ನೀಡಿದ್ದು, ಎನ್​​ಇಪಿ ಕೈಬಿಡುವ ಶಿಫಾರಸ್ಸಿಗೆ ಸಿಎಂ ಸಿದ್ದರಾಮಯ್ಯ ಅಧಿಕೃತ ಒಪ್ಪಿಗೆಯಷ್ಟೇ ಬಾಕಿ ಉಳಿದಿದೆ. ಎನ್​​ಇಪಿ ಬದಲು ಪ್ರತ್ಯೇಕ ರಾಜ್ಯ ನೀತಿ ಜಾರಿಗೆ ತರಲು ಅಗತ್ಯ ಕರಡು ರಚಿಸಲು ಕಾಂಗ್ರೆಸ್ ಸರ್ಕಾರ ಡಾ ಸುಖದೇವ್ ಥೋರಟ್ ನೇತೃತ್ವದಲ್ಲಿ ಆಯೋಗ ರಚಿಸಿತ್ತು. ಎನ್​​ಇಪಿ ಜಾರಿಯಾದ ಸಮಯದಿಂದ ಪದವಿಗೆ ಸೇರಿದ್ದ ವಿದ್ಯಾರ್ಥಿಗಳು ಸದ್ಯ ಮೂರನೇ ವರ್ಷದ ಪದವಿ ವ್ಯಾಸಂಗ ಮಾಡ್ತಿದ್ದಾರೆ.

ಸದ್ಯ ಎನ್​​ಇಪಿ ಮುಂದುವರಿಸಿದರೆ ಪದವಿ ವಿದ್ಯಾರ್ಥಿಗಳು ನಾಲ್ಕನೇ ವರ್ಷ ಕೋರ್ಸ್ ಮುಂದುವರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಸಮಿತಿ ಮಧ್ಯಂತರ ವರದಿಯನ್ನು ನೀಡಿ ಹಿಂದಿನಂತೆ ಪದವಿ ಕೋರ್ಸ್ ಅನ್ನ ಮೂರು ವರ್ಷಕ್ಕೆ ನಿಗದಿ ಮಾಡಲು ಮುಂದಾಗಿದೆ. 2020-21ರಲ್ಲಿ ಇಡೀ ದೇಶದಲ್ಲೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ರೂಪಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಂದಿನ ಸರ್ಕಾರ ಕರ್ನಾಟದಲ್ಲಿ ಜಾರಿಗೆ ಮಾಡಿತ್ತು. ಇದರಂತೆ ನಾಲ್ಕು ವರ್ಷಗಳ ಪದವಿ ಕೋರ್ಸ್, ಯಾವುದೇ ಸಮಯದಲ್ಲಿ ವ್ಯಾಸಂಗ ಕಡಿತಗೊಳಿಸಿದರೂ ಆ ವರ್ಷದ ಆಧ್ಯನಯನಕ್ಕೆ ಪ್ರಮಾಣ ಪತ್ರ ಪಡೆದುಕೊಳ್ಳಲು ಅವಕಾಶ ನೀಡಲಾಗಿತ್ತು.

  • ಅಂತರ್ಜಾಲ ಮಾಹಿತಿ

The higher education department has said that the recommendation to drop the course introduced under the new National Education Policy (NEP) has come to an end. All that is pending is the consent of CM Siddaramaiah. It is almost certain that the Congress government will abandon the option of 4-year degree and multiple optional subjects introduced in the state higher education under the National Education Policy implemented during the previous BJP government from 2024-25.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮಧ್ಯಪ್ರಾಚ್ಯ ಸಂಘರ್ಷ ಪರಿಣಾಮ – ಗೋಮಯ ಗೊಬ್ಬರದತ್ತ ಭಾರತದ ರೈತರು – ರಾಸಾಯನಿಕ ಗೊಬ್ಬರ ಕೊರತೆ ಭೀತಿ..!

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಜಾಗತಿಕ ಗೊಬ್ಬರ ಸರಬರಾಜು ವ್ಯವಸ್ಥೆಯಲ್ಲಿ ಅನಿಶ್ಚಿತತೆ ಉಂಟಾಗಿದ್ದು, ಭಾರತದಲ್ಲಿ…

5 hours ago

ಕೇರಳದಲ್ಲಿ ಕೊಬ್ಬರಿ ಬೆಲೆ MSP ಗಿಂತಲೂ ಕಡಿಮೆ – ₹130 ಕನಿಷ್ಠ ಬೆಂಬಲ ಬೆಲೆಗೆ ರೈತರ ಆಗ್ರಹ

ಕೇರಳದಲ್ಲಿ ಕೊಬ್ಬರಿ ದರ MSP ಗಿಂತ ಕೆಳಗೆ ಇಳಿದಿದ್ದು, ರೈತರು ಪ್ರತಿ ಕೆ.ಜಿಗೆ…

5 hours ago

ಎಲ್‌ ನಿನೋ ಈಗ ಮತ್ತಷ್ಟು ನಿಗೂಢ…! ಹವಾಮಾನ ಬದಲಾವಣೆ ಮಳೆ ಮುನ್ಸೂಚನೆಗಳನ್ನೇ ಗೊಂದಲಗೊಳಿಸುತ್ತಿದೆಯೇ..?

ಹವಾಮಾನ ಬದಲಾವಣೆಯಿಂದ ಎಲ್‌ ನಿನೋ ಮತ್ತು ಲಾ ನಿನಾ ಘಟನೆಗಳ ವರ್ತನೆ ಬದಲಾಗುತ್ತಿದ್ದು,…

8 hours ago

ಪ್ರತಿ ಜಿಲ್ಲೆಯಲ್ಲಿ ಒಂದು ಗೋಆಧಾರಿತ ಉದ್ಯಮ – ಉತ್ತರ ಪ್ರದೇಶದ ಹೊಸ ಮಾದರಿ ದೇಶದ ಗಮನ ಸೆಳೆಯುತ್ತಿದೆ

ಉತ್ತರ ಪ್ರದೇಶ ಸರ್ಕಾರ ಪ್ರತಿ ಜಿಲ್ಲೆಯಲ್ಲಿ ಒಂದು ಪ್ರಮುಖ ಗೋಆಧಾರಿತ ಉದ್ಯಮ ಅಭಿವೃದ್ಧಿಪಡಿಸಲು…

8 hours ago

ಅತಿವೃಷ್ಟಿ, ಬರ, ಹೀಟ್‌ ವೇವ್‌ಗಳಿಗೆ ಯಾರು ಕಾರಣ? ಐಐಟಿ ದೆಹಲಿ ಅಧ್ಯಯನದಿಂದ ಕುತೂಹಲಕಾರಿ ಮಾಹಿತಿ!

ಭಾರತದಲ್ಲಿ ಹೆಚ್ಚುತ್ತಿರುವ ಅತಿವೃಷ್ಟಿ, ಬರ ಮತ್ತು ಉಷ್ಣ ಅಲೆಗಳಂತಹ ತೀವ್ರ ಹವಾಮಾನ ಘಟನೆಗಳಿಗೆ…

1 day ago

ದಕ್ಷಿಣ ಕನ್ನಡಕ್ಕೆ ಕೈಗಾರಿಕಾ ಬಲ : ಗಂಜಿಮಠ ಪ್ಲಾಸ್ಟಿಕ್ ಪಾರ್ಕ್ ಕಾಮಗಾರಿ ಪರಿಶೀಲಿಸಿದ ಸಂಸದ ಬ್ರಿಜೇಶ್ ಚೌಟ

ಗಂಜಿಮಠದ 104 ಎಕರೆ ಪ್ಲಾಸ್ಟಿಕ್ ಪಾರ್ಕ್ ಯೋಜನೆಗೆ ಮತ್ತೆ ವೇಗ ಸಿಕ್ಕಿದ್ದು, ಸಂಸದ…

2 days ago