ಅಯೋಧ್ಯೆ ರಾಮ ಮಂದಿರ(Ayodhya Ram Mandir) ಪೂರ್ಣಗೊಂಡು ರಾಮನ ಮೂರ್ತಿ ಪ್ರತಿಷ್ಠಾಪನೆಗೆ ಮುನ್ನ ರಾಮನ ಪ್ರತಿಮೆಯನ್ನು ಕೆತ್ತುವ ಕೆಲಸದ್ದೇ ಸುದ್ದಿ. ದೇಶದಾದ್ಯಂತ ಮೂವರನ್ನು ಆಯ್ಕೆ ಮಾಡಲಾಗಿತ್ತು. ಮೂವರು ರಾಮಲಲ್ಲಾನ ಮೂರ್ತಿಯನ್ನು ಕೆತ್ತಿದ್ದರು. ಆದರೆ ಪ್ರಾಣಪತಿಷ್ಠಾಪನೆ ಭಾಗ್ಯ ಒದಗಿ ಬಂದಿದ್ದು ಮೈಸೂರಿನ ಅರುಣ್ ಯೋಗಿರಾಜ್(Arun Yogiraj ಅವರು ಕೆತ್ತಿದ ಅಂದದ ಮೂರ್ತಿಗೆ.
ಉತ್ತರ ಕನ್ನಡ ಜಿಲ್ಲೆಯ ಶಿಲ್ಪಿ ಗಣೇಶ್ ಭಟ್ ಮತ್ತು ರಾಜಸ್ಥಾನದ ಶಿಲ್ಪಿ ಸತ್ಯ ನಾರಾಯಣ ಪಾಂಡೆ ಕೆತ್ತಿದ ಬಾಲರಾಮನ ಮೂರ್ತಿಗಳನ್ನು ಏನು ಮಾಡುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲಿದೆ. ಈ ಎರಡು ಮೂರ್ತಿಗಳ ಬಗ್ಗೆ ಟ್ರಸ್ಟ್ ಶೀಘ್ರ ತೀರ್ಮಾನ ತೆಗೆದುಗೊಳ್ಳಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ರಾಮಮಂದಿರದ ಮೊದಲ ಮತ್ತು ಎರಡನೇ ಮಹಡಿಯಲ್ಲಿ ನಿರ್ಮಾಣವಾಗಲಿರುವ ಗುಡಿಯಲ್ಲಿ ಎರಡು ಮೂರ್ತಿಗಳನ್ನು ಇರಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಮೂಲಕ ಮೂರು ಮೂರ್ತಿಗಳಿಗೂ ಅಯೋಧ್ಯೆ ರಾಮಮಂದಿರದಲ್ಲಿ ಪೂಜೆ, ಆರಾಧನೆ ನಡೆಯಲಿದೆ. ಭಕ್ತರಿಗೆ ದರ್ಶನ ಮಾಡುವ ಅವಕಾಶ ಸಿಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. ಜ.22 ರಂದು ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ಗರ್ಭಗುಡಿಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ಜರುಗಿತು.
Source : ಅಂತರ್ಜಾಲ ಮಾಹಿತಿ
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಾಭಕ್ತರದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490
ಸಂಸ್ಕಾರದಿಂದ ಮೀಯದ ಮನಸ್ಸು, ತನ್ನ ಬಗ್ಗೆ ಯೋಚಿಸುವುದಿಲ್ಲ. ತನ್ನ ಭವಿಷ್ಯದತ್ತ ನೋಟ ಹರಿಸುವುದಿಲ್ಲ.…
ಶನಿವಾರ ಸಂಜೆ 5 ಗಂಟೆಗೆ ಆರಂಭವಾದ ತೀವ್ರ ಘರ್ಷಣೆಗಳ ನಂತರ ಭಾರತ ಮತ್ತು…
ಪೆಹಲ್ಗಾಮ್ ಭಯೋತ್ಪಾದಕರ ವಿರುದ್ಧ ಪ್ರಧಾನಿ ನರೇಂದ್ರಮೋದಿಯವರು ತೆಗೆದುಕೊಂಡಿರುವ ಕಠಿಣ ಕ್ರಮವನ್ನು ಸಂಪೂರ್ಣ ಬೆಂಬಲಿಸುವುದಾಗಿ…
ಒಂದೆರಡು ಕಡೆ ಸಂಜೆ, ರಾತ್ರಿ ಗುಡುಗು ಸಹಿತ ಸಾಮಾನ್ಯ ಮಳೆಯ ಸಾಧ್ಯತೆಗಳಿವೆ. ಮೇ14ರಿಂದ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490