ಮಣ್ಣನ್ನು ಫಲವತ್ತಾಗಿಸುವ ಸಾಂಪ್ರದಾಯಿಕ ವಿಧಾನ ಮತ್ತೆ ಮುನ್ನೆಲೆಗೆ | ಬೆಳಗಾವಿಯಲ್ಲಿ ಸರಳ ವಿಧಾನ, ಸೆಣಬು ಬೆಳೆಯತ್ತ ಮುಖ ಮಾಡಿದ ರೈತರು..!

April 11, 2024
10:48 PM

ಮಣ್ಣನ್ನು ಫಲವತ್ತಾಗಿಸುವಲ್ಲಿ(Soil Ferti;ity) ನಮ್ಮ ಹಿರಿಯರು ಅನುಸರಿಸುತ್ತಿದ್ದ ಸಾಂಪ್ರದಾಯಿಕ ವಿಧಾನ ಈಗ ಮತ್ತೆ ಮುನ್ನೆಲೆಗೆ ಬರುತ್ತಿದೆ. ಅಂದರೆ ಯಾವುದೇ ಬೆಳೆ ಬೆಳೆಯುವ(Crop) ಮುನ್ನ ಹಸಿರೆಲೆ ಗೊಬ್ಬರದ ಗಿಡಗಳನ್ನು(Manure plant) ಬೆಳೆಸಿ ಮಣ್ಣಿಗೆ(Soil) ಸೇರಿಸುವ ಕಡೆಗೆ ರೈತರು(Farmer) ಹೆಚ್ಚು ಒಲವು ತೋರುತ್ತಿದ್ದಾರೆ.  ಮಣ್ಣಿನಲ್ಲಿ ಸಾವಯವ ಪದಾರ್ಥಗಳು ಹೆಚ್ಚಾಗಿದ್ದರೆ ಮಾತ್ರ ಯಾವುದೆ ಬೆಳೆ ಸಮೃದ್ಧವಾಗಿ ಬೆಳೆಯಲು, ಉತ್ತಮ ಇಳುವರಿ ಬರಲು ಸಾಧ್ಯ. ಇಂತಹ ಸಾವಯವ ಪದಾರ್ಥವನ್ನು ಮಣ್ಣಿಗೆ ಸೇರಿಸುವಲ್ಲಿ ಗೊಬ್ಬರದ ಗಿಡ ಅಥವಾ ಸೆಣಬು(jute) ಮುಖ್ಯವಾಗಿದೆ. 

Advertisement
Advertisement
Advertisement

ಹೌದು ಭೂಮಿಯ ಫಲವತ್ತತೆ ಹೆಚ್ಚಿಸಲು ಬೆಳಗಾವಿ (Belagavi) ರೈತ ಸೆಣಬು ಬೆಳೆ ಬೆಳೆಯುತ್ತಿದ್ದಾರೆ. ಅಥಣಿ ತಾಲೂಕಿನ ನದಿ ಇಂಗಳಗಾಂವ ಗ್ರಾಮದ ಧನಪಾಲ ಚನ್ನಗೌಡರ ಎಂಬುವವರು ತನ್ನ ಒಂದು ಎಕರೆ ಭೂಮಿಯಲ್ಲಿ ಸೆಣಬು ಬೆಳೆದು ಸಾವಯುವ ಕೃಷಿಯತ್ತ ಹೆಜ್ಜೆಯಿಟ್ಟಿದ್ದಾರೆ.

Advertisement

ಸೆಣಬು ಬೆಳೆಯತ್ತ ಮುಖ ಮಾಡಿದ ರೈತರು : ರೈತ ಧನಪಾಲ ಚನ್ನಗೌಡರ ಹಿಂದಿನಿಂದಲೂ ತಮ್ಮ ಕೃಷಿಯಲ್ಲಿ ಸಾವಯುವ ಪದ್ಧತಿ ಅಳವಡಿಸಿ ಆದಾಯ ತೆಗೆಯುತ್ತಿದ್ದಾರೆ. ಈ ಸೆಣಬು ಬೀಜವನ್ನ ತಾಲೂಕಿನ ಉಗಾರ್ ಪಟ್ಟಣದಿಂದ ಪ್ರತಿ ಕೆಜಿಗೆ 80 ರೂಪಾಯಿನಂತೆ 20 ಕೆಜಿ ಬೀಜ ತಂದು ಒಂದು ಎಕರೆ ಭೂಮಿಯಲ್ಲಿ ಬಿತ್ತನೆ ಮಾಡಿದ್ದಾರೆ. ಕೇವಲ ಮೂರು ಬಾರಿ ನೀರು ಬಿಟ್ಟಿದ್ದಾರೆ. ಈಗ 30 ದಿನ ಕಳೆದಿವೆ. ಕೇವಲ 46 ದಿನಗಳ ಬೆಳೆಯಾಗಿದೆ. ಇದರಿಂದ ಭೂಮಿಯ ಫಲವತ್ತತೆ ಹೆಚ್ಚಾಗುತ್ತೆ. ಬೇರೆ ಬೆಳೆ ಬೆಳೆಯಲು ಸಹಾಯವಾಗುತ್ತೆ. ಈಗ ಅನೇಕ ರೈತರು ಎಕರೆಗಟ್ಟಲೇ ಸೆಣಬು ಬೆಳೆಯುತ್ತಿದ್ದಾರೆ. ರಾಸಾಯನಿಕ ಕೃಷಿ ಮಾಡುವವರು ಮೊದಲು ಈ ಬೆಳೆಗಳನ್ನು ಬೆಳೆಸಿ, ಭೂಮಿಗೆ ಬೆರೆಸಿ, ಆ ಮೇಲೆ ಭತ್ತ, ಕಬ್ಬಿನಂತಹ ಬೆಳೆ ಬೆಳೆಯುತ್ತಾರೆ.

ಸೆಣಬಿನ ಬೀಜವನ್ನು ಸಾಮಾನ್ಯ ಉಳುಮೆ ಮಾಡಿದ ನಂತರ ಒಂದು ಎಕರೆಗೆ 25 ರಿಂದ 30 ಕೆಜಿಯಷ್ಟು ಬೀಜವನ್ನು ಚೆಲ್ಲಿ ಮಣ್ಣಿನಲ್ಲಿ ಸೇರುವಂತೆ ಉಳುಮೆ ಮಾಡಬೇಕು. ಬಿತ್ತನೆ ಮಾಡಿದ 45 ರಿಂದ 50 ದಿನಗಳಲ್ಲಿ ಸೆಣಬಿನ ಗಿಡಗಳು ಸಮೃದ್ಧವಾಗಿ ಬೆಳೆದು ಹೂವು ಬಿಡಲು ಆರಂಭಿಸುತ್ತವೆ. ಹೂವು ಬರುವ ಸಂದರ್ಭದಲ್ಲಿ ಭೂಮಿಯಲ್ಲಿ ಸೇವಾಂಶ ಕಡಿಮೆ ಇರುವುದನ್ನು ಗಮನಿಸಿ ಉಳುವೆ ಮಾಡುವ ಮೂಲಕ ಸೆಣಬಿನ ಸೊಪ್ಪು ಮಣ್ಣಿಗೆ ಸೇರುವಂತೆ ಮಾಡಬೇಕು. ಮಣ್ಣಿನಲ್ಲಿ ಹೆಚ್ಚು ತೇವಾಂಶ ಇದ್ದು ಉಳುಮೆ ಮಾಡಲು ಅವಕಾಶ ಇಲ್ಲದಿದ್ದರೆ ಕುಡುಗೋಲಿನಿಂದ ಗಿಡಗಳನ್ನು ಕತ್ತರಿಸಿ ಮಣ್ಣಿಗೆ ಹೊದಿಕೆಯಾಗುವಂತೆ ಮಾಡಬೇಕು. 45 ದಿನಗಳ ನಂತರ ಹೂವು ಹೆಚ್ಚಾಗಿ ಬಂದು ಗಿಡ ಬಲಿತರೆ ಹಸಿರು ಎಲೆಗಳ ಪ್ರಮಾಣ ಕಡಿಮೆಯಾಗಲಿದೆ.

Advertisement

ಮಿಶ್ರ ಬೀಜಗಳು ಮುಖ್ಯ: ಹಸಿರು ಎಲೆ ಗೊಬ್ಬರಕ್ಕಾಗಿ ಯಾವುದೇ ರೀತಿಯ ಬೀಜವನ್ನು ಚೆಲ್ಲುವಾಗ ಒಂದೇ ರೀತಿಯ ಬೀಜಗಳನ್ನು ಚೆಲ್ಲುವ ಬದಲಿಗೆ ಸೆಣಬಿನೊಂದಿಗೆ ಊರುಳಿ, ಹುಚ್ಚಳು, ಅಲಸಂದೆ, ಅವರೆ, ಸಾಸುವೆ,ಉದ್ದು,ಹೆಸರು ಕಾಳು, ಕಡಳೆ ಕಾಳು, ಕೊತ್ತಂಬರಿ ಬೀಜ ಹೀಗೆ ನಾನಾ ರೀತಿಯ ಬೀಜಗಳನ್ನು ಮಿಶ್ರಣ ಮಾಡಿ ಚೆಲ್ಲುವುದು ಮಣ್ಣಿನ ಫಲವತ್ತತೆ ದೃಷ್ಟಿಯಿಂದ ಮುಖ್ಯ ಎನ್ನುತ್ತಾರೆ ಪ್ರಗತಿಪರ ರೈತ ನಟರಾಜ್.

ಸೆಣಬಿನಷ್ಟು ವೇಗವಾಗಿ ಊರುಳಿ, ಅವರೆ, ಅಲಸಂದೆ, ಸಾಸಿವೆ ಮತ್ತಿತರೆ ಗಿಡಗಳು ಬೆಳೆಯುವುದಿಲ್ಲ, 45 ರಿಂದ 50 ದಿನಗಳಲ್ಲಿ ಕಟಾವಿಗು ಬರುವುದಿಲ್ಲ. ಆದರೆ ಒಂದೊಂದು ರೀತಿಯ ಗಿಡಗಳ ಗುಣ ಲಕ್ಷಣ, ಮಣ್ಣಿನ ಫಲತ್ತತೆಗೆ ತಮ್ಮದೇ ಭಿನ್ನ ರೀತಿಯ ಸಾವಯವ ಪದಾರ್ಥಗಳನ್ನು ಕೊಡುಗೆಯಾಗಿ ನೀಡುತ್ತವೆ. ಮಣ್ಣು ಫಲವತ್ತುಗೊಳ್ಳುವ ಹಾಗೂ ಮಣ್ಣಿನಲ್ಲಿ ಸೂಕ್ಷ್ಮಾಣು ಜೀವಿಗಳ ಬೆಳವಣಿಗೆಗೆ ಸಹಕಾರಿಯಾಗಲಿವೆ.

Advertisement
  • ಅಂತ್ರಜಾಲ ಮಾಹಿತಿ

 

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಗದಗದ ಲಕ್ಕುಂಡಿಯಲ್ಲಿ ಪ್ರಾಚ್ಯಾವಶೇಷಗಳ ಅನ್ವೇಷಣೆ ಕಾರ್ಯಕ್ರಮಕ್ಕೆ ಚಾಲನೆ
November 25, 2024
7:33 AM
by: The Rural Mirror ಸುದ್ದಿಜಾಲ
ಬೆಂಗಳೂರಿನ ಬಸವನ ಗುಡಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ
November 25, 2024
7:26 AM
by: The Rural Mirror ಸುದ್ದಿಜಾಲ
ಮಲೆನಾಡಿನಲ್ಲಿ ಕಾಡಾನೆ ಹಾವಳಿ ತಡೆಗೆ ಅಧಿವೇಶನದಲ್ಲಿ ಚರ್ಚಿಸಿ ಶಾಶ್ವತ ಪರಿಹಾರ
November 25, 2024
7:15 AM
by: The Rural Mirror ಸುದ್ದಿಜಾಲ
ಅಡಿಕೆ ಹಳದಿ ಎಲೆರೋಗ ಬಾಧಿಸಿದ ನಂತರದ ಕೃಷಿ ಬದುಕು ಹೇಗೆ ? ಕೃಷಿಕರು ಸವಾಲನ್ನು ಹೇಗೆ ಸ್ವೀಕರಿಸಬಹುದು..? | ಸಂಪಾಜೆಯ ಕೃಷಿಕ ಶಂಕರಪ್ರಸಾದ್‌ ರೈ ಅವರ ಅಭಿಪ್ರಾಯ |
November 25, 2024
6:52 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror