ಕಳ್ಳನೊಬ್ಬ ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು (Mahesh Babu) ಅವರ ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿ ಆಸ್ಪತ್ರೆಗೆ ದಾಖಲಾದ ಘಟನೆ ಬೆಳಕಿಗೆ ಬಂದಿದೆ.
ಮಂಗಳವಾರ ರಾತ್ರಿ ಹೈದರಾಬಾದ್‌ನ ಜುಬಿಲಿ ಹಿಲ್ಸ್ನಲ್ಲಿರುವ ಮಹೇಶ್ ಬಾಬು ಅವರ ಮನೆ ದರೋಡೆಗೆ ಒಡಿಶಾ ಮೂಲಕ ಯುವಕನೊಬ್ಬ ಯತ್ನಿಸಿದ. ಮಹೇಶ್ ಬಾಬು ಅವರ ನಿವಾಸದ ಸುತ್ತ ಸುಮಾರು 30 ಅಡಿ ಎತ್ತರವಿರುವ ಕಾಪೌಂಡ್ ಏರಿದ ಖದೀಮ, ಕೆಳಗೆ ಜಿಗಿದು, ಕಾಲು ನೋವು ಮಾಡಿಕೊಂಡು ಒದ್ದಾಡುತ್ತಿದ್ದ. ಸೆಕ್ಯರಿಟಿ ಗಾರ್ಡ್‌ಗೆ ಶಬ್ಧ ಕೇಳಿ ಹೋಗಿ ನೋಡಿದಾಗ ಕಳ್ಳ ಸಿಕ್ಕಿಬಿದ್ದಿದ್ದಾನೆ. ತಕ್ಷಣ ಸೆಕ್ಯುರಿಟಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದನು.ಸ್ಥಳಕ್ಕೆ ಬಂದ ಪೊಲೀಸರು ಖದೀಮನನ್ನು ವಶಕ್ಕೆ ಪಡೆದು, ಆತನನ್ನು ಹೈದರಾಬಾದ್‌ನ ಒಸ್ಮಾನಿಯಾ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಿದ್ದಾರೆ. ಈ ಕಳ್ಳ ಮೂರು ದಿನಗಳ ಹಿಂದೆ ಒಡಿಶಾದಿಂದ ಹೈದರಾಬಾದ್ಗೆ ಬಂದಿದ್ದನು.
ನಟ ಮಹೇಶ್ ಬಾಬು ಅವರ ತಾಯಿ ಇಂದಿರಾ ದೇವಿ ಹೈದರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಎರಡು ದಿನಗಳ ಹಿಂದೆ ನಿಧನರಾಗಿದ್ದರು. ಹೀಗಾಗಿ ಮನೆ ಆವರಣದಲ್ಲಿ ಸೆಕ್ಯುರಿಟಿ ಗಾರ್ಡ್ ಕೂಡಾ ಎಲರ್ಟ್ ಆಗಿದ್ದರು.