ಮನೆ ದರೋಡೆಗೆ ಯತ್ನಿಸಿದ ಕಳ್ಳ ಆಸ್ಪತ್ರೆಗೆ ಸೇರಿದ….! | ಸೂಪರ್ ಸ್ಟಾರ್ ಮಹೇಶ್ ಬಾಬು ಮನೆಯಲ್ಲಿ ಘಟನೆ |

September 30, 2022
3:30 PM

ಕಳ್ಳನೊಬ್ಬ ಟಾಲಿವುಡ್​ ಸೂಪರ್​ ಸ್ಟಾರ್​ ಮಹೇಶ್​ ಬಾಬು (Mahesh Babu) ಅವರ ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿ ಆಸ್ಪತ್ರೆಗೆ ದಾಖಲಾದ ಘಟನೆ ಬೆಳಕಿಗೆ ಬಂದಿದೆ. 

ಮಂಗಳವಾರ ರಾತ್ರಿ ಹೈದರಾಬಾದ್‌ನ   ಜುಬಿಲಿ ಹಿಲ್ಸ್​ನಲ್ಲಿರುವ ಮಹೇಶ್​ ಬಾಬು ಅವರ ಮನೆ ದರೋಡೆಗೆ ಒಡಿಶಾ ಮೂಲಕ ಯುವಕನೊಬ್ಬ ಯತ್ನಿಸಿದ.  ಮಹೇಶ್​ ಬಾಬು ಅವರ ನಿವಾಸದ ಸುತ್ತ ಸುಮಾರು 30 ಅಡಿ ಎತ್ತರವಿರುವ ಕಾಪೌಂಡ್ ಏರಿದ ಖದೀಮ, ಕೆಳಗೆ ಜಿಗಿದು, ಕಾಲು ನೋವು ಮಾಡಿಕೊಂಡು ಒದ್ದಾಡುತ್ತಿದ್ದ. ಸೆಕ್ಯರಿಟಿ ಗಾರ್ಡ್‌ಗೆ   ಶಬ್ಧ ಕೇಳಿ  ಹೋಗಿ ನೋಡಿದಾಗ  ಕಳ್ಳ ಸಿಕ್ಕಿಬಿದ್ದಿದ್ದಾನೆ. ತಕ್ಷಣ ಸೆಕ್ಯುರಿಟಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದನು.ಸ್ಥಳಕ್ಕೆ ಬಂದ ಪೊಲೀಸರು ಖದೀಮನನ್ನು ವಶಕ್ಕೆ ಪಡೆದು, ಆತನನ್ನು ಹೈದರಾಬಾದ್‌ನ ಒಸ್ಮಾನಿಯಾ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಿದ್ದಾರೆ. ಈ ಕಳ್ಳ  ಮೂರು ದಿನಗಳ ಹಿಂದೆ ಒಡಿಶಾದಿಂದ ಹೈದರಾಬಾದ್​ಗೆ ಬಂದಿದ್ದನು.

ನಟ ಮಹೇಶ್ ಬಾಬು ಅವರ ತಾಯಿ ಇಂದಿರಾ ದೇವಿ ಹೈದರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಎರಡು ದಿನಗಳ ಹಿಂದೆ ನಿಧನರಾಗಿದ್ದರು. ಹೀಗಾಗಿ ಮನೆ ಆವರಣದಲ್ಲಿ ಸೆಕ್ಯುರಿಟಿ ಗಾರ್ಡ್‌ ಕೂಡಾ ಎಲರ್ಟ್‌ ಆಗಿದ್ದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಶಬರಿಮಲೆ ಯಾತ್ರೆ – ಆನ್‌ಲೈನ್ ಕೊಠಡಿ ಬುಕ್ಕಿಂಗ್ ಮಿತಿ 400ಕ್ಕೆ ಹೆಚ್ಚಳ – ಅ. 7ರಿಂದ ನೋಂದಣಿ ಆರಂಭ
October 9, 2026
7:53 AM
by: ದ ರೂರಲ್ ಮಿರರ್.ಕಾಂ
ಬೇವು ಲೇಪಿತ ಯೂರಿಯಾ ಬಳಕೆಯಿಂದ ಕೃಷಿ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆ
October 9, 2026
7:27 AM
by: ದ ರೂರಲ್ ಮಿರರ್.ಕಾಂ
ಮನೆ ಎಂದರೆ ಗೋಡೆಗಳಲ್ಲ , ನೆಮ್ಮದಿಯನ್ನು ಕಟ್ಟುವ ಜೀವನಕಲೆ
October 9, 2026
7:14 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಮಿಜೋರಾಂ ಮೂಲಕ 3,103 ಮೆಟ್ರಿಕ್ ಟನ್ ಅಡಿಕೆ ಕಳ್ಳಸಾಗಣೆ ಆರೋಪ – ಮ್ಯಾನ್ಮಾರ್‌ ಜಾಲ ಪತ್ತೆ
October 8, 2026
9:27 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror