14.12.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ ರಾಜ್ಯದಾದ್ಯಂತ ಉತ್ತಮ ಚಳಿ ಹಾಗೂ ಒಣ ಹವೆ ಮುಂದುವರಿಯಲಿದೆ.
ಮಧ್ಯಮ ಸ್ತರದ ಗಾಳಿಯು ಗುಜರಾತ್ ಹಾಗೂ ರಾಜಸ್ಥಾನ ಕೇಂದ್ರಿಕರಿಸಿಕೊಂಡು ಬೃಹತ್ ಗಾತ್ರದಲ್ಲಿ ಅಸ್ವಾಭಾವಿಕ ತಿರುಗುವಿಕೆಯ ಪರಿಣಾಮದಿಂದ ಉತ್ತರ ಭಾರತದ ಕಡೆಯಿಂದ ಶೀತ ಮಾರುತಗಳು ದಕ್ಷಿಣದ ಕಡೆಗೆ ಬಲವಾಗಿ ಬೀಸುತ್ತಿದೆ ಹಾಗೂ ರಾಜ್ಯದ ವಾತಾವರಣದ ಉಷ್ಣಾಂಶ ತೀವ್ರವಾಗಿ ಕುಸಿದಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.

ಈಗಿನಂತೆ ಡಿಸೆಂಬರ್ 15 ರಿಂದ ಈ ತಿರುಗುವಿಕೆಯು ಮತ್ತಷ್ಟು ವಿಸ್ತಾರಗೊಂಡು ಬಂಗಾಳಕೊಲ್ಲಿಯ ತನಕ ತಲಪುವ ನಿರೀಕ್ಷೆಯಿದೆ. ಈ ಗಾಳಿಯು ಬಂಗಾಳಕೊಲ್ಲಿಯ ಕಡೆಯಿಂದ ಬೀಸಿದರೆ, ವಾತಾವರಣದ ಉಷ್ಣಾಂಶ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿ, ಡಿಸೆಂಬರ್ 15 ರಿಂದ ದಕ್ಷಿಣ ಒಳನಾಡು, ಮಲೆನಾಡು ಹಾಗೂ ಕರಾವಳಿಯ ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಅಲ್ಲಲ್ಲಿ ಮೋಡದ ವಾತಾವರಣದ ಸಾಧ್ಯತೆಗಳಿವೆ.
ಡಿಸೆಂಬರ್ 16 ರಿಂದ 18 ರ ತನಕ ದಕ್ಷಿಣ ಒಳನಾಡು ಜಿಲ್ಲೆಗಳ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.


