ಅಡಿಕೆ ಧಾರಣೆ ಇಳಿಕೆ | ಅನಾವಶ್ಯಕ ಗೊಂದಲ ಬೇಡ | ಅಡಿಕೆಗೆ ಬೇಡಿಕೆ ಇದ್ದು ಧಾರಣೆ ಕುಸಿಯುವ ಲಕ್ಷಣವಿಲ್ಲ – ಕಿಶೋರ್‌ ಕುಮಾರ್‌ ಕೊಡ್ಗಿ |

October 3, 2024
2:13 PM

ಅಡಿಕೆ ಧಾರಣೆಗೆ ಸಂಬಂಧಿಸಿದ  ಅನಾವಶ್ಯಕ ಗೊಂದಲಗಳಿಂದ ಕೂಡಿದ, ಆಡಿಕೆ ಬೆಳೆಗಾರರ ಆತ್ಮ ಸೈರ್ಯ ಕುಗ್ಗಿಸುವ ಪ್ರಯತ್ನವನ್ನು ಕ್ಯಾಂಪ್ಕೊ ಸಂಸ್ಥೆ ಖಂಡಿಸುತ್ತದೆ.  ಉತ್ತರ ಭಾರತದಲ್ಲಿ  ಚಾಲಿ ಅಡಿಕೆಗೆ ಉತ್ತಮ ಬೇಡಿಕೆ ಇದ್ದು, ಧಾರಣೆ ಕುಸಿಯುವ ಯಾವ ಕಾರಣವು ಇಲ್ಲ ಹಾಗೂ ಕ್ಯಾಂಪ್ಕೋ ಅಡಿಕೆ ಬೆಳೆಗಾರರ ಹಿತ ಕಾಪಾಡುವಲ್ಲಿ  ಪ್ರಾಮಾಣಿಕ ಸೇವೆ ನೀಡುತ್ತದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಹೇಳಿದ್ದಾರೆ.…..ಮುಂದೆ ಓದಿ….

Advertisement

ಅಡಿಕೆ ಸೇಟುಗಳು ಹಾಗೂ ವ್ಯಾಪಾರಿಗಳಿಗೆ ಅವರ ಹಿತಾಸಕ್ತಿ ಮುಖ್ಯವೇ ಹೊರತು ರೈತರ ಕಾಳಜಿ ಇರುವುದಿಲ್ಲ. ಅವರುಗಳು ಹೇಳಿದಂತೆ, ವಿದೇಶಿ ಅಡಿಕೆ ಗುಣಮಟ್ಟದಲ್ಲಿಯಾಗಲಿ, ದರದಲ್ಲಿಯೂ ನಮ್ಮ ಅಡಿಕೆಗೆ ಸರಿಸಾಟಿ ಅಲ್ಲ. ಅಡಿಕೆ ಬೆಳೆಗಾರರು ಯಾವುದೇ ಕಾರಣಕ್ಕೆ ಈ ವದಂತಿಗಳಿಗೆ ಮಣಿಯದೇ, ತಮಗೆ ಅಗತ್ಯವಿರುವಷ್ಟು ಅಡಿಕೆಯನ್ನು ಹಂತ ಹಂತವಾಗಿ ಕ್ಯಾಂಪ್ಕೋ ಸಂಸ್ಥೆ , ಹಾಗೂ ಸಹಕಾರಿ ಸಂಸ್ಥೆಗಳಿಗೆ ಮಾರಾಟ ಮಾಡಬೇಕಾಗಿ ಕ್ಯಾಂಪ್ಕೊ ಅಧ್ಯಕ್ಷರು ವಿನಂತಿಸಿದ್ದಾರೆ.…..ಮುಂದೆ ಓದಿ….

ಈಗಾಗಲೆ ಚೋಲ್ ಅಡಿಕೆ ದರ ಹೆಚ್ಚಾಗಿದ್ದು, ಮಳೆಯಿಂದಾಗಿ ಹೊಸ ಅಡಿಕೆ ಗುಣಮಟ್ಟ ಸುಧಾರಣೆ ಆದಾಗ ಇನ್ನು ಹೆಚ್ಚಿನ ದರ ನಮ್ಮ ರೈತರಿಗೆ ಖಂಡಿತಾ ಸಿಗುತ್ತದೆ ಎಂಬ ಭರವಸೆಯನ್ನು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ನೀಡಿದ್ದಾರೆ. ರೈತರು ಯಾವುದೇ ಕಾರಣದಿಂದ ತಮ್ಮ ಹೆಸರಿನಲ್ಲಿ ವ್ಯಾಪಾರಿಗಳ ಕಳಪೆ ಗುಣಮಟ್ಟದ ಅಡಿಕೆಯನ್ನು ತಮ್ಮ ಉತ್ತಮ ಗುಣಮಟ್ಟದ ಅಡಿಕೆಯೊಂದಿಗೆ ಮಿಕ್ಸ್ ಮಾಡಿ ನಮ್ಮ ಸಂಸ್ಥೆಗೆ ನೀಡಬಾರದಾಗಿ ಅವರು ಇದೇ ವೇಳೆ ಮನವಿ ಮಾಡಿದ್ದಾರೆ.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅನ್ನದ ಪರಿಮಳ ಮನವರಳಿಸ ಬಹುದಲ್ಲವೇ..!
April 16, 2025
11:18 AM
by: ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ
ಹೆಚ್ಚಿನ ಮೌಲ್ಯದ ಹಣ್ಣಿನ ಬೆಳೆಗಳ ಕುರಿತು ಚರ್ಚೆ | ಹಲಸು , ಡ್ರಾಗನ್‌ಫ್ರುಟ್‌ ಕೃಷಿಯ ಕಡೆಗೆ ಆದ್ಯತೆ |
April 16, 2025
10:50 AM
by: The Rural Mirror ಸುದ್ದಿಜಾಲ
ದೆಹಲಿಯಲ್ಲಿ ಹೀಟ್‌ವೇವ್‌ , ಬಿಹಾರದಲ್ಲಿ ಮಳೆ, ಕರ್ನಾಟಕದಲ್ಲಿ ಬಿಸಿ ಗಾಳಿ ಎಚ್ಚರಿಕೆ |
April 16, 2025
8:14 AM
by: The Rural Mirror ಸುದ್ದಿಜಾಲ
ಹೊಸರುಚಿ| ಗುಜ್ಜೆ ರೋಲ್
April 16, 2025
8:00 AM
by: ದಿವ್ಯ ಮಹೇಶ್

You cannot copy content of this page - Copyright -The Rural Mirror

Join Our Group