ಅಡಿಕೆ ಧಾರಣೆಗೆ ಸಂಬಂಧಿಸಿದ ಅನಾವಶ್ಯಕ ಗೊಂದಲಗಳಿಂದ ಕೂಡಿದ, ಆಡಿಕೆ ಬೆಳೆಗಾರರ ಆತ್ಮ ಸೈರ್ಯ ಕುಗ್ಗಿಸುವ ಪ್ರಯತ್ನವನ್ನು ಕ್ಯಾಂಪ್ಕೊ ಸಂಸ್ಥೆ ಖಂಡಿಸುತ್ತದೆ. ಉತ್ತರ ಭಾರತದಲ್ಲಿ ಚಾಲಿ ಅಡಿಕೆಗೆ ಉತ್ತಮ ಬೇಡಿಕೆ ಇದ್ದು, ಧಾರಣೆ ಕುಸಿಯುವ ಯಾವ ಕಾರಣವು ಇಲ್ಲ ಹಾಗೂ ಕ್ಯಾಂಪ್ಕೋ ಅಡಿಕೆ ಬೆಳೆಗಾರರ ಹಿತ ಕಾಪಾಡುವಲ್ಲಿ ಪ್ರಾಮಾಣಿಕ ಸೇವೆ ನೀಡುತ್ತದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಹೇಳಿದ್ದಾರೆ.…..ಮುಂದೆ ಓದಿ….
ಅಡಿಕೆ ಸೇಟುಗಳು ಹಾಗೂ ವ್ಯಾಪಾರಿಗಳಿಗೆ ಅವರ ಹಿತಾಸಕ್ತಿ ಮುಖ್ಯವೇ ಹೊರತು ರೈತರ ಕಾಳಜಿ ಇರುವುದಿಲ್ಲ. ಅವರುಗಳು ಹೇಳಿದಂತೆ, ವಿದೇಶಿ ಅಡಿಕೆ ಗುಣಮಟ್ಟದಲ್ಲಿಯಾಗಲಿ, ದರದಲ್ಲಿಯೂ ನಮ್ಮ ಅಡಿಕೆಗೆ ಸರಿಸಾಟಿ ಅಲ್ಲ. ಅಡಿಕೆ ಬೆಳೆಗಾರರು ಯಾವುದೇ ಕಾರಣಕ್ಕೆ ಈ ವದಂತಿಗಳಿಗೆ ಮಣಿಯದೇ, ತಮಗೆ ಅಗತ್ಯವಿರುವಷ್ಟು ಅಡಿಕೆಯನ್ನು ಹಂತ ಹಂತವಾಗಿ ಕ್ಯಾಂಪ್ಕೋ ಸಂಸ್ಥೆ , ಹಾಗೂ ಸಹಕಾರಿ ಸಂಸ್ಥೆಗಳಿಗೆ ಮಾರಾಟ ಮಾಡಬೇಕಾಗಿ ಕ್ಯಾಂಪ್ಕೊ ಅಧ್ಯಕ್ಷರು ವಿನಂತಿಸಿದ್ದಾರೆ.…..ಮುಂದೆ ಓದಿ….
ಈಗಾಗಲೆ ಚೋಲ್ ಅಡಿಕೆ ದರ ಹೆಚ್ಚಾಗಿದ್ದು, ಮಳೆಯಿಂದಾಗಿ ಹೊಸ ಅಡಿಕೆ ಗುಣಮಟ್ಟ ಸುಧಾರಣೆ ಆದಾಗ ಇನ್ನು ಹೆಚ್ಚಿನ ದರ ನಮ್ಮ ರೈತರಿಗೆ ಖಂಡಿತಾ ಸಿಗುತ್ತದೆ ಎಂಬ ಭರವಸೆಯನ್ನು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ನೀಡಿದ್ದಾರೆ. ರೈತರು ಯಾವುದೇ ಕಾರಣದಿಂದ ತಮ್ಮ ಹೆಸರಿನಲ್ಲಿ ವ್ಯಾಪಾರಿಗಳ ಕಳಪೆ ಗುಣಮಟ್ಟದ ಅಡಿಕೆಯನ್ನು ತಮ್ಮ ಉತ್ತಮ ಗುಣಮಟ್ಟದ ಅಡಿಕೆಯೊಂದಿಗೆ ಮಿಕ್ಸ್ ಮಾಡಿ ನಮ್ಮ ಸಂಸ್ಥೆಗೆ ನೀಡಬಾರದಾಗಿ ಅವರು ಇದೇ ವೇಳೆ ಮನವಿ ಮಾಡಿದ್ದಾರೆ.
ರಾತ್ರಿ ಗುಡುಗು ಸಹಿತ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಈಗಿನಂತೆ ಕರಾವಳಿಯಲ್ಲಿ…
ಈ ತಿಂಗಳ ಅಂತ್ಯದೊಳಗೆ ಮೀನ ಕಟಕ ಕುಂಭ ಮಿಥುನ ವೃಶ್ಚಿಕ ವೃಷಭ ಈ…
ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳ ನೆಲೆಗಳ…
ಯುದ್ಧ ಆದರೆ ಅಥವಾ ಬಿಗುವಿನ ವಾತಾವರಣ ನಿರ್ಮಾಣವಾದರೆ ತಾತ್ಕಾಲಿಕವಾಗಿ ಎಲ್ಲಾ ಉತ್ಪನ್ನಗಳ ಮಾರುಕಟ್ಟೆಗಳು…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490