ನಮ್ಮ ಊರು, ಗ್ರಾಮ, ಪಕ್ಕದ ಹಳ್ಳಿ, ತಾಲೂಕು, ಜಿಲ್ಲೆ ಹೀಗೆ ಸುತ್ತ ಮುತ್ತ ಅಗಾಧ ಕೃಷಿಯಲ್ಲಿ ಸಾಧನೆ(Model Farmers) ಮಾಡಿದವರು ಇರುತ್ತಾರೆ. ಅವರೆಲ್ಲರ ಅನುಭವ ನಮ್ಮ ಮುಂದಿನ ಪೀಳಿಗೆಗೆ ದಾರಿದೀಪ. ಕೃಷಿಯಲ್ಲಿ(Agriculture) ಇನ್ನು ನಾವು ಸಾಧನೆ ಮಾಡಬೇಕು, ಹೊಸದನ್ನು ತರಬೇಕು ಅನ್ನುವವರಿಗೆ ಇವರು ಮಾದರಿ. ಕೃಷಿಕ ಭರತ್ ರಾಜ್ ಕೆರೆಮನೆ, ಶೃಂಗೇರಿ ಇವರ ಮನೆಗೆ ಅಪರೂಪದ ಕೃಷಿಯಲ್ಲಿ ಸಾಧನೆ ಮಾಡಿದ ವಿಶೇಷ ವ್ಯಕ್ತಿಗಳ ಒಂದು ತಂಡ(Team) ಅವರ ಮನೆಗೆ ಭೇಟಿ ನೀಡಿದ್ದರು. ಅವರ ಬಗ್ಗೆ ಭರತ್ ರಾಜ್ ಅವರು ಬಹಳ ಚೆನ್ನಾಗಿ ಇಲ್ಲಿ ವಿವರಿಸಿ ಬರೆದಿದ್ದಾರೆ. ಅದೇ ಬರಹ ಇಲ್ಲಿ ಇದೆ ಓದಿ..
ಇವರೆಲ್ಲರೂ ಕೃಷಿಯಲ್ಲಿ ಅಗಾಧವಾದ ಸಾಧನೆ ಹಾಗೂ ಪಾಂಡಿತ್ಯವನ್ನು ಹೊಂದಿದವರು ತಮ್ಮ ತಮ್ಮ ಕೃಷಿಯ ಕ್ಷೇತ್ರದಲ್ಲಿ ಆಸಕ್ತಿಯಲ್ಲಿ. (ಬಲದಿಂದ ಎಡಕ್ಕೆ)
ತಿರುಮಲೇಶ್ವರ ಭಟ್: ಕೃಷಿ ಪಂಡಿತ್ ಪ್ರಶಸ್ತಿಯ ನಂದನವನದ ತಿರುಮಲೇಶ್ವರ ಭಟ್ ಹಾಗೂ ಅವರ ಮಗ ನಮ್ಮಲ್ಲಿಗೆ ಬಂದಿದ್ದರು. ಇವತ್ತಿನ ಆಧುನಿಕ ಕೃಷಿ ಯುಗದಲ್ಲಿ ತಿರುಮಲೇಶ್ವರ ಭಟ್ ಇವರ ಹೆಸರನ್ನು ಕೇಳದೆ ಇರುವವರು ಯಾರು ಇಲ್ಲ. ಇವರ ಮನೆಯ ಎದುರು ಇರುವ ಗಾರ್ಡನ್ ಎಲ್ಲರಿಗೂ ಕಿರುಪರಿಚಯ, ಯೂಟ್ಯೂನಲ್ಲಿ ಎಲ್ಲರೂ ನೋಡಿರುತ್ತೀರಿ. ಅಂತಹ ಒಂದು ಅಗಾಧವಾದ ಕೃಷಿಯಲ್ಲಿ ಪಾಂಡಿತ್ಯವನ್ನು ಹೊಂದಿರುವಂತಹವರು, ಕೃಷಿ ಪಂಡಿತ್ ಪ್ರಶಸ್ತಿ ಹೀಗೆ ಹತ್ತು ಹಲವಾರು ಪ್ರಶಸ್ತಿಯನ್ನು ಪಡೆದಂತಹ ಅತ್ಯಂತ ಸರಳ ವ್ಯಕ್ತಿ ಇವರು.
ಸುಳ್ಯ ತಾಲೂಕಿನ ಬೆಳ್ಳಾರೆ ಎಂಬಲ್ಲಿ ತನ್ನ 14 ಎಕರೆ ಜಮೀನಿನಲ್ಲಿ ಒಂದು ಅದ್ಭುತ ಕೃಷಿ ಲೋಕವನ್ನು ಸೃಷ್ಟಿ ಮಾಡಿದ್ದಾರೆ. ಇವತ್ತು ಎಲ್ಲರೂ ಅವರ ಕೃಷಿ ತೋಟ, ಗಾರ್ಡನ್ ಅನ್ನು ಯೂಟ್ಯೂಬ್ ನಲ್ಲಿ ನೋಡಿರುತ್ತೀರಿ. ಮನೆಯಂಗಳದಲ್ಲಿ ಒಂದು ತನ್ನದೇ ಆದ ಕಲ್ಪನೆಯಲ್ಲಿ ಒಂದು ಬೃಂದಾವನವನ್ನು ನಿರ್ಮಿಸಿದ್ದಾರೆ. ಜೊತೆಗೆ ಹವ್ಯಾಸವಾಗಿ 300ಕ್ಕೂ ಅಧಿಕ ಕ್ಯಾಕ್ಟಸ್ ಗಿಡಗಳನ್ನು ಬೆಳೆಸಿದ್ದಾರೆ. ಜೊತೆಗೆ 40ಕ್ಕೂ ಅಧಿಕ ಜಾತಿಯ ಹಲಸಿನ ತಳಿ ಇವರಲ್ಲಿದೆ. ವಿದೇಶ ಹಣ್ಣುಗಳ ದೊಡ್ಡಮಟ್ಟದ ಸಂಗ್ರಹ ಇವರಲ್ಲಿದೆ ಎಲ್ಲವೂ ಪಸಲು ಕೊಡುತ್ತಿದೆ. ( ಪ್ರತಿಯೊಬ್ಬ ಕೃಷಿಕರು ಒಮ್ಮೆ ಇವರ ತೋಟಕ್ಕೆ ಹೋಗಿ ಬನ್ನಿ ಆಸಕ್ತರು. ಕೃಷಿಯಲ್ಲಿ ತುಂಬಾ ತಿಳಿಯುವಂತಹ ವಿಚಾರ ಇವರಲ್ಲಿ ಇದೆ)
ಶಿವಪ್ರಸಾದ್: ತೀರ್ಥಹಳ್ಳಿಯ ಹತ್ತಿರ ಹೇರಂಬಾಪುರದ ಹತ್ತಿರ ಜಿಗಳೆಬೈಲು ಎಂಬಲ್ಲಿ ಇರುವ ಇವರು ಕೃಷಿಯಲ್ಲಿ ಇವರು ಕೂಡ ತನ್ನದಾದ ವಿಶೇಷ ಸಾಧನೆಯನ್ನು ಮಾಡಿದ್ದಾರೆ. ಅಡಿಕೆ, ರಬ್ಬರ್ ,ಕಾಫಿ ಜೊತೆಗೆ 670 ಹಣ್ಣಿನ ಗಿಡಗಳ ಕಲೆಕ್ಷನ್ ಇವರಲ್ಲಿ ಇದೆ. ಜೊತೆಗೆ ವಿದೇಶಿ ಹಣ್ಣುಗಳ ನರ್ಸರಿ ಕೂಡ ಇವರಲ್ಲಿ ಇದೆ. ಬಹುಶಃ ಗಿಡಗಳ ಪರಿಚಯ ಇಲ್ಲದೆ ಇರುವ ಗಿಡವೇ ಇಲ್ಲ. ನೀವು ಯಾವುದೇ ಗಿಡ ಕೇಳಿ, ಕ್ಷಣಾರ್ಧದಲ್ಲಿ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸುತ್ತಾರೆ. ಒಮ್ಮೆ ಇವರ ತೋಟಕ್ಕೆ ಇವರ ಮನೆಗೆ ಹೋಗಿ ಬಂದರೆ ಮಾತ್ರ ಗೊತ್ತಾಗುತ್ತದೆ. ಶೃಂಗೇರಿ, ಕೊಪ್ಪ, ತೀರ್ಥಹಳ್ಳಿ, ಇಲ್ಲಿಂದ ಇವರ ಮನೆಗೆ ಒಂದು ಗಂಟೆಯಲ್ಲಿ ಹೋಗಬಹುದು, ಆಸಕ್ತಿ ಇದ್ದವರು ಖಂಡಿತವಾಗಿಯೂ ಇವರಲ್ಲಿ ಹೋಗಿ ಬಂದರೆ ಮಾತ್ರ ಇವರ ಕೃಷಿ ಸಾಧನೆ ಗೊತ್ತಾಗುವುದು. ಇವತ್ತಿನ ಎಲ್ಲಾ ವಿದೇಶಿ ಹಣ್ಣುಗಳ ಗಿಡಗಳು ಇವರಲ್ಲಿ ಸಿಗುತ್ತದೆ.
ತಿರುಮಲೇಶ್ವರ್ ಭಟ್ಟರ ಮಗ ಉದ್ಯೋಗದಲ್ಲಿ ಹೊರಗೆ ಇದ್ದು. ಇವಾಗ ಮನೆಗೆ ಬಂದು ತಮ್ಮ ತಂದೆಯ ಜೊತೆ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ತಂದೆಯಂತೆ ಇವರಿಗೂ ಕೂಡ ಕೃಷಿ ಯಲ್ಲಿ ವಿಶೇಷ ಆಸಕ್ತಿಯು ಇದೆ.
ಶ್ಯಾಮ್ ಪ್ರಸಾದ್: ಸಂತೆಕೊಪ್ಪ ಎಂಬಲ್ಲಿ ಇರುವ ಇವರು ತನ್ನ ಕೃಷಿಯಲ್ಲಿ ವಿಶೇಷವಾಗಿ ಇವರು ಬೋನ್ಸಾಯಿಗಳನ್ನು ತುಂಬಾ ಬೆಳೆದಿದ್ದಾರೆ, ಜೊತೆಗೆ ಮಾವಿನ ಗಿಡಗಳ ಸಂಗ್ರಹ ಇವರ ಆಸಕ್ತಿಗಳಲ್ಲಿ ಇದು ಒಂದು, ಇದುವರೆಗೆ ಬಂದ ಎಲ್ಲ ಮಾವಿನ ಗಿಡಗಳು ಇವರ ಸಂಗ್ರಹದಲ್ಲಿ ಇದೆ. ಜೊತೆಗೆ ಕಲ್ಲುಗಳಿಂದ ಪಾಠಗಳನ್ನು ನಿರ್ಮಿಸುತ್ತಾರೆ, ಯಕ್ಷಗಾನ ಕಲಾವಿದರು ಹೌದು. ಪುರೋಹಿತರು ಹೌದು. ಹೀಗೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುತ್ತಾರೆ ಇಂತಹ ಒಂದು ವಿಶೇಷ ಆಸಕ್ತಿ ಇರುವವರು ಇವರು.
ಮಜ್ಜಿಗೆ ಸರ ಸುಬ್ಬಣ್ಣ: ತೀರ್ಥಹಳ್ಳಿಯವರಾದ ಇವರು ನಡೆದಾಡುವ ವಿಶ್ವಕೋಶ ಎಂದರೆ ತಪ್ಪಾಗಲಾರದು. ಇವತ್ತಿನ ಆಧುನಿಕ ಕೃಷಿಯಲ್ಲಿ ಇವರ ಹೆಸರನ್ನು ಕೇಳದೆ ಇರುವವರು ಬಹಳ ಕಡಿಮೆ ಸದಾ ಎಲೆ ಮರೆ ಕಾಯಿ ಹಾಗೆ ಇರುವ ಇವರು. ಇವರನ್ನು ನೋಡಿದರೆ ಅಂತಹ ಒಂದು ಪಾಂಡಿತ್ಯವನ್ನು ಹೊಂದಿದ್ದಾರೆ ಎಂದು ಯಾರಿಗೂ ಗೊತ್ತಾಗುವುದಿಲ್ಲ. ಅವರನ್ನು ಬೆಳೆಸಿದವರಿಗೆ ಮಾತ್ರ ಗೊತ್ತು ಅವರ ಕೃಷಿಯಲ್ಲಿ ಇರುವ ಪಾಂಡಿತ್ಯ. ಇವರು ಹಾಗೂ ಇವರ ಮನೆಯಲ್ಲಿರುವ ಎಲ್ಲಾ ಅಣ್ಣತಮ್ಮಂದಿರು, ಕೂಡು ಕುಟುಂಬದಿಂದ ಕೂಡಿದ್ದು .ಎಲ್ಲರೂ ಕೂಡ ಕೃಷಿಯಲ್ಲಿ ತನ್ನದೇ ಆದ ಪಾಂಡಿತ್ಯವನ್ನು ಹೊಂದಿದ್ದಾರೆ.
40 ರಿಂದ 50 ಜಾತಿ ಬಿದಿರು ಇವರ ಸಂಗ್ರಹದಲ್ಲಿ ಇದೆ, ಕಾಡು ಜಾತಿಯ ವಿನಾಶದಂಚಲಿರುವ ಎಲ್ಲಾ ಹಣ್ಣಿನ ಗಿಡಗಳು ಇವರ ಸಂಗ್ರಹದಲ್ಲಿ ಇದೆ. ಜೊತೆಗೆ ಗೆಣಸು ಜಾತಿ ಬಹುತೇಕ ಇದ್ರಲ್ಲಿ ಇರುವ ಎಲ್ಲ ಜಾತಿಯ ಗೆಣಸು ಸಂಗ್ರಹ ಇವರಲ್ಲಿ ಇದೆ. ಜೊತೆಗೆ ನೀವು ಯಾವದೇ ಗಿಡದ ಎಲೆಯನ್ನು ತೋರಿಸಿದರು ಅದು ಇಂತಹ ಗಿಡದ ಎಲೆ, ಅದರ ಬಟಾನಿಕಲ್ ನೇಮ್ ಹಾಗೂ ಅ ಗಿಡದ ಕಿರುಪರಿಚಯ ಕ್ಷಣಾರ್ಧದಲ್ಲಿ ಹೇಳುವಂತಹ ಪಾಂಡಿತ್ಯ ಇವರಲ್ಲಿ ಇದೆ. ಬಹುಷ್ಯ 1000ಕೂ ಅಧಿಕ ತಳಿಯ ಹೆಸರನ್ನು ಗಿಡದ ಎಲೆ ನೋಡುತ್ತಿದ್ದ ಹಾಗೆ ಹೇಳುವಂತಹ ಪಾಂಡಿತ್ಯ ಇವರದ್ದು.
ಆತ್ಮೀಯರೇ ಇವರೆಲ್ಲರೂ ಕೂಡ ಅಡಿಕೆ, ಕಾಫಿ ,ಮೆಣಸು ಜೊತೆಗೆ ತನ್ನದೇ ಆದ ಬೇರೆ ಕ್ಷೇತ್ರದಲ್ಲಿ ಕೃಷಿಯಲ್ಲಿ ತೊಡಗಿಕೊಂಡಂತವರು ಹಾಗೂ ಯಶಸ್ವಿಯಾದಂತವರು.
All of them have immense achievements and expertise in agriculture in their respective fields of interest.