ಬೇಸಿಗೆ ರಜೆ ಮುಗಿಯುತ್ತಿದ್ದಂತೆ ತಿರುಪತಿಯಲ್ಲಿ ವೆಂಕಟೇಶ್ವರನ ದರ್ಶನಕ್ಕೆ ಆಗಮಿಸುತ್ತಿರುವ ಭಕ್ತರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಸೋಮವಾರದಂದು 79,974 ಭಕ್ತರು ತಿಮ್ಮಪ್ಪನ ದರ್ಶನಕ್ಕೆ ಆಗಮಿಸಿದ್ದು, ಇನ್ನೊಂದು ವಾರದ ಕಾಲ ತಿರುಮಲದಲ್ಲಿ ಭಕ್ತರ ನೂಕುನುಗ್ಗಲು ಮುಂದುವರಿಯಲಿದೆ ಎಂದು ಟಿಟಿಡಿ ಆಡಳಿತ ಮಂಡಳಿ ಹೇಳಿದೆ.
ವೆಂಕಟೇಶ್ವರನ ದರ್ಶನಕ್ಕೆ ಇನ್ನೂ 18 ಗಂಟೆ ಕಾಯಬೇಕಿದೆ. ಮಾತ್ರವಲ್ಲ, ಭಕ್ತರು ಹುಂಡಿಯಲ್ಲಿ ಕಾಣಿಕೆ ರೂಪದಲ್ಲಿ ಶ್ರೀಗಳಿಗೆ 3.77 ಕೋಟಿ ರೂಪಾಯಿ ನೀಡಿದ್ದಾರೆ. ಇನ್ನು ಭಕ್ತರಿಗೆ ಯಾವುದೇ ತೊಂದರೆಯಾಗದಂ ತೆ ಟಿಟಿಡಿ ವಿಶೇಷ ಕ್ರಮ ಕೈಗೊಂಡಿದ್ದು, ವೈಕುಂಠ ಕ್ಯೂ ಕಾಂಪೆಕ್ಸ್ ನಲ್ಲಿ ಭಕ್ತರಿಗೆ ಹಾಲು, ಮಜ್ಜಿಗೆ, ಕಿಚಿಡಿ, ಸಾಂಬಾರ್ ಅನ್ನ ಮತ್ತು ಉತ್ತಮ ನೀರನ್ನು ಒದಗಿಸುತ್ತಿದೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel