ಆಟೋ ಅಂದ್ರೆ ಸಾಕು ಅಷ್ಟೂ ದುಬಾರಿ ಬೆಲೆ ಕೊಟ್ಟು ಯಾರು ಹೋಗ್ತಾರೆ. ಅದಕ್ಕಿಂತ ನಾಲ್ಕು ಹೆಜ್ಜೆ ನಡೆದ್ರೆನೆ ವಾಸಿ ಅನ್ಕೊತ್ತಾರೆ. ಆದರೆ, ಇಲ್ಲೊಬ್ಬ ಆಟೋ ರಿಕ್ಷಾ ಡ್ರೈವರ್ ತಮ್ಮ ಆಟೋದಲ್ಲಿ ಬುಕ್ಸ್, ಬಿಸ್ಕೆಟ್, ಸ್ಯಾನಿಟರಿ ಪ್ಯಾಡ್, ನೀರು ಉಚಿತವಾಗಿ ಇಡುವ ಮೂಲಕ ಪ್ರಯಾಣಿಕರನ್ನು ತನ್ನತ್ತ ಸೆಳೆಯುತ್ತಿದ್ದಾರೆ.
ನಾವೆಲ್ಲ ಪ್ರಯಾಣದ ವೇಳೆ ದಿನನಿತ್ಯ ಆಟೋ ರಿಕ್ಷಾಗಳನ್ನು ಬಳಸುತ್ತಲೆ ಇರುತ್ತೇವೆ. ಕೆಲವರಿಗೆ ಕೆಲವೊಂದು ಅನುಭವ ಆಗಿರುತ್ತದೆ. ನಾವು ಹೇಳಿದಲ್ಲಿಗೆ ಯಾಕಾದ್ರು ಇವರು ಕರೀತಾರಪ್ಪಾ ಅನ್ನುವಷ್ಟರ ಮಟ್ಟಿಗೆ ಉದಾಸಿನತೆ ತೋರಿ ಬರುತ್ತಾರೆ. ಇನ್ನು ಒಂದು ರೂಪಾಯಿಗೂ ಚೌಕಸಿ ಮಾಡಿ ನಮ್ಮತ್ರ ಹಣ ಕಿತ್ತುಕೊಂಡೇ ಕಳುಹಿಸೋದು. ಆದ್ರೆ ಇಲ್ಲೊಬ್ರು ವಿಶೇಷ ವ್ಯಕ್ತಿ ಇದ್ದಾರೆ.
ಆಟೋ ರಿಕ್ಷಾ ಡ್ರೈವರ್ ರಾಜೇಶ್ ಎಂಬುವವರು ತಮ್ಮ ಆಟೋದಲ್ಲಿ ಬುಕ್ಸ್, ಬಿಸ್ಕೆಟ್, ಸ್ಯಾನಿಟರಿ ಪ್ಯಾಡ್, ನೀರು ಉಚಿತವಾಗಿ ಇಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. “ಗ್ರಾಹಕರೇ ನನಗೆ ಎಲ್ಲಾ” ಎನ್ನುವ ರಾಜೇಶ್ ಅವರು ಗ್ರಾಹಕರಿಗೆ ಸಹಾಯವಾಗಲೆಂದು ತಮ್ಮ ಆಟೋದಲ್ಲಿ ಸಾಧನಗಳನ್ನು ಇಟ್ಟಿದ್ದಾರೆ. ಇದನ್ನು ಗಮನಿಸಿದ ಪ್ರಯಾಣಿಗ ಉತ್ತಮ್ ಕಶ್ಯಪ್ ಅವರು ತಮ್ಮ ಟ್ವಿಟರ್ ಮೂಲಕ ಟ್ವೀಟ್ ಮಾಡಿ ಈ ಆಟೋ ಡ್ರೈವರ್ ಅವರ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ರಾಜೇಶ್ ಅವರು ತಮ್ಮ ಆಟೋದಲ್ಲಿ ಪುಸ್ತಕ, ಸ್ಯಾನಿಟೈಸರ್, ಬ್ಯಾಂಡ್‌ಎಡ್, ಬಿಸ್ಕೆಟ್, ಚಾಕಲೇಟ್ ಮತ್ತು ನೀರಿನ ಬಾಟಲಿಗಳನ್ನು ಇಟ್ಟುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಜೊತೆಗೆ ತಮ್ಮ ಗ್ರಾಹಕರಿಗೆ ಸರ್ವೀಸ್ ಮಾಡುತ್ತಾರೆ. ಇದಲ್ಲದೇ ಇಲ್ಲಿ ಇಟ್ಟಿರುವಂತಹ ಈ ಎಲ್ಲವೂ ಉಚಿತವಾಗಿಯೇ ಇರುತ್ತವೆ.
ಈ ಆಟೋ ಡ್ರೈವರ್‌ನ ಕಾರ್ಯವನ್ನು ಟ್ವೀಟ್ ಮಾಡಿದ್ದ ಉತ್ತಮ್ ಎನ್ನುವವರ ಪೋಸ್ಟ್‌ಗೆ ಜನರಿಂದ ತುಂಬಾ ಆಶ್ಚರ್ಯಕರವಾದ ಪ್ರತಿಕ್ರಿಯೆ ಬಂದಿದೆ. ಇದು ಬೆಂಗಳೂರಿನಲ್ಲಿ ವೈರಲ್ ಆಗುತ್ತಿರುವ ಒಬ್ಬ ಸಮಾಜ ಸೇವಕನ ಕಥೆ. ಇಂತಹವ ಜನರು ಈಗಿನ ಸಮಾಜದಲ್ಲಿ ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು. ರಾಜೇಶ್ ಅವರ ಈ ಕಾರ್ಯ ಪ್ರಶಂಸನೀಯವಾದದ್ದು.