ನಿನ್ನೆ ಕಾರ್ಯನಿಮಿತ್ತ ಮೃಗವಧೆಗೆ ಹೋಗಿದ್ದೆ. ಮೃಗವಧೆಯ ರಾಜಬೀದಿಯಲ್ಲಿ ಎತ್ತಿನ ಗಾಡಿ(Bullock cart) ಹೋಗುತ್ತಿರುವುದನ್ನು ನೋಡಿ ಮೈ ರೋಮಾಂಚನವಾಯಿತು. ಇದು ಕನಸೋ ನನಸೋ ಒಂದು ಕ್ಷಣ ಅರಿಯದಾಯಿತು. ಹೌದು ಇದು ನನಸು…. ಮಲೆನಾಡಿನ(Malenadu) ಇಪ್ಪತ್ತು ಇಪ್ಪತ್ತೈದು ವರ್ಷಗಳ ಹಿಂದೆ ಪ್ರತಿ ಜಮೀನ್ದಾರರ(Land lord) ಮನೆಯಲ್ಲೂ ಎತ್ತು, ಎತ್ತಿನ ಗಾಡಿ ಸ್ಥಾನ ಪಡೆದಿತ್ತು. ದೊಡ್ಡ ಎತ್ತಿನ ಜೋಡು ಮತ್ತು ಎತ್ತಿನ ಗಾಡಿ ಜಮೀನ್ದಾರರ ಪ್ರತಿಷ್ಠೆಯ(Status) ಸಂಕೇತವಾಗಿತ್ತು. ಜಮೀನ್ದಾರರ ಮನೆಯಲ್ಲಿ ಗಾಡಿ ಮತ್ತು ಎತ್ತಿನ ಜೋಡನ್ನ ಮೈಂಟೈನ್ ಮಾಡುವವ ಇವತ್ತಿನ ಕಂಪನಿಗಳ(Company) ನೌಕರರಲ್ಲಿ(Employee) ಸಿಇಒ ಕ್ಯಾಟಗರಿ ಸಂಬಳ ಸವಲತ್ತು ಗೌರವ ಪಡೆಯುತ್ತಿದ್ದ. ಗಾಡಿಯ ಆಕ್ಸಲ್ ಗೆ ಎಣ್ಣೆ ಹಾಕುವುದು. ಬಿರಿಕುಂಟೆ (Break) ನಿರ್ವಹಣೆ. ನೊಗ, ನೊಗ ಎತ್ತಿನ ಭುಜಕ್ಕೆ ಏರಿಸಿ ಕೊರಳ ಪಟ್ಟಿ ಕೂಡಿಸೋದು. ಸದ್ದು ಮಾಡುತ್ತಾ ಎತ್ತಿನ ಗಾಡಿ ಚಲಿಸುವ ಪರಿ..
ಮಲೆನಾಡಿನಲ್ಲಿ ಬೈಕುಗಳು ಹೆಚ್ಚಾದ ಆರಂಭದಲ್ಲಿ ಮಲೆನಾಡಿನ ಮಣ್ಣು ರೋಡಿನಲ್ಲಿ ಎತ್ತಿನ ಗಾಡಿ ಚಕ್ರ ಹೋದ ಎಡ್ಜಿನಲ್ಲಿ ಬೈಕ್ ಸವಾರರು ಸರ್ಕಸ್ ನವರು ಹಗ್ಗದ ಮೇಲೆ ನಾಜೂಕಾಗಿ ನೆಡೆದಂತೆ ನೆಡೆಯಬೇಕಿತ್ತು. ಆಗ ಬೈಕ್ ಚಾಲನೆ ಮಾಡಿದವರಲ್ಲಿ ಮುಕ್ಕಾಲು ಪಾಲು ಬೈಕ್ ಸವಾರರು ಈ ಗಾಡಿ ರಸ್ತೆಯ ಓಣಿ ಎಡ್ಜ್ ನಲ್ಲಿ ಬ್ಯಾಲೆನ್ಸ್ ಮಾಡಲು ಹೋಗಿ ಬಿದ್ದಿರುತ್ತಾರೆ..!!
ಎತ್ತಿನ ಗಾಡಿ ಆಫ್ ರೋಡ್ ವೈಕಲ್.. ಕಾನು ಕೊರಕಲು ಎಲ್ಲೆಂದರಲ್ಲಿ ಎತ್ತಿನ ಗಾಡಿ ಸಾಗುತ್ತಿತ್ತು. ಈ ಅಗ್ಗಕ್ಕೆ ಮೂರು ಚಕ್ರದ ಗೂಡ್ಸ್ ಆಪೆ ರಿಕ್ಷಾ (ಪಿಯಾಜ್ಯೋ) ಬಂದ ಮೇಲೆ ಎತ್ತಿನ ಗಾಡಿ ಮೂಲೆಗೆ ಸರಿಯಲಾರಂಭಿಸಿತು. ಈಗ ನನಗೆ ತಿಳದ ಮಟ್ಟಿಗೆ ಇಡೀ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಚಾಲ್ತಿಯಲ್ಲಿರುವ ಸುಸ್ಥಿತಿಯ ಎತ್ತಿನ ಗಾಡಿ ಎಂದರೆ ಬಹುಶಃ ಇದೊಂದೇ ಯೇನೋ..? ಎತ್ತಿನ ಗಾಡಿ ಉಳಿದಿದ್ದರೆ ಒಂದಷ್ಟು ಹಳ್ಳಿ ಕಾರ್ ದೇವಣಿ ಅಮೃತ್ ಮಹಲ್ ಹೋರಿ ಗಳು ಉಳಿಯುತ್ತಿದ್ದವು.. ಎತ್ತಿನ ಗಾಡಿ ಉಳಿದಿದ್ದರೆ ವಿಶ್ವ ಕರ್ಮರ ಕುಲಮೆ ಉಳಿಯುತ್ತಿತ್ತು. ಎತ್ತಿನ ಗಾಡಿಯ ಹಳಿ ಪಟ್ಟಿ ಜೋಡಿಸುವುದು ಅತ್ಯಂತ ಕೌಶಲದ ಕಲೆ. ಈಗ ಈ ಕಲೆ ಗೊತ್ತಿರುವವರು ಮಲೆನಾಡಿನಲ್ಲಿ ಬೆರಳೆಣಿಕೆಯ ಮಂದಿ ಇರಬಹುದು. ಎತ್ತಿನ ಗಾಡಿ ಈ 2000ನೇ ಇಸವಿ ಈಚೆ ಹುಟ್ಟಿದ ಜನರೇಷನ್ ಗಳಿಗೆ ಗೊತ್ತೇ ಇಲ್ಲ.
ನಮ್ಮ ಸಮಾಜ ಸರ್ಕಾರದ ಕೃಷಿ ಇಲಾಖೆ ಎತ್ತಿನ ಗಾಡಿ ಮತ್ತು ಎತ್ತಿನ ಗಾಡಿ ಉದ್ಯಮವನ್ನು ಉಳಿಸವ ಯೋಚನೆ ಮಾಡಬೇಕು. ಮಾಲಿನ್ಯ ರಹಿತ ಪರಿಸರ ಸ್ನೇಹಿ ಈ ಎತ್ತಿನ ಗಾಡಿ ಮಲೆನಾಡಿನ ಅಂಟು ಮಣ್ಣಿಗೆ ಹೇಳಿ ಮಾಡಿಸಿದ ವಾಹನ.. ಯಾವುದಾದರೂ ಟ್ರಸ್ಟ್, ರೆಸಾರ್ಟ್, ಹೋಮ್ ಸ್ಟೇ ಯವರು ಈ ಎತ್ತಿನ ಗಾಡಿಗಳ ಸವಾರಿಯನ್ನು ಪ್ರವಾಸಿಗರಿಗೆ ಆಯೋಜನೆ ಪಡಿಸಿದರೆ ಮುಂದಿನ ಪೀಳಿಗೆಗೆ ಎತ್ತಿನ ಗಾಡಿ ಉಳಿಯಲು ಸಾಧ್ಯ.