ಭಾರಿ ಕುತೂಹಲದಿಂದ ಕಾಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಈ ಬಾರಿ ಭಾರತದಲ್ಲಿ(India) ನಡೆಯಲಿದ್ದು ಸಂಪೂರ್ಣ ವೇಳಾಪಟ್ಟಿಯನ್ನು ಬಿಸಿಸಿಐ (BCCI) ಪ್ರಕಟಿಸಿದೆ.
ಲೋಕಸಭಾ ಚುನಾವಣೆ (Lok Sabha Election) ನಡೆಯಲಿರುವ ಕಾರಣ ಈ ಹಿಂದೆ ಬಿಸಿಸಿಐ ಏಪ್ರಿಲ್ 7ರವರೆಗಿನ ವೇಳಾಪಟ್ಟಿಯನ್ನು(Time table) ಬಿಡುಗಡೆ ಮಾಡಿತ್ತು. ಈಗ ಲೋಕಸಭಾ ಚುನಾವಣಾ ದಿನಾಂಕ ಪ್ರಕಟವಾದ ಬಳಿಕ ಉಳಿದ ಪಂದ್ಯಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಕ್ವಾಲಿಫೈಯರ್, ಎಲಿಮಿನೇಟರ್, ಫೈನಲ್ ಸೇರಿ ಒಟ್ಟು 74 ಪಂದ್ಯಗಳು ನಡೆಯಲಿದೆ. ಮೇ 21, 22 ರಂದು ಗುಜರಾತಿನ ಅಹಮದಾಬಾದ್‌ನಲ್ಲಿ ಕ್ವಾಲಿಫೈಯರ್ 1 ಮತ್ತು ಎಲಿಮಿನೇಟರ್ ಪಂದ್ಯ ನಡೆಯಲಿದ್ದರೆ ಚೆನ್ನೈನಲ್ಲಿ ಮೇ 24 ರಂದು ಕ್ವಾಲಿಫೈಯರ್ 2 ನಡೆದರೆ ಮೇ 26 ರಂದು ಫೈನಲ್ ಪಂದ್ಯ ನಡೆಯಲಿದೆ. ಕೆಲ ಶನಿವಾರ ಮತ್ತು ಭಾನುವಾರ ಎರಡು ಪಂದ್ಯಗಳು ನಡೆಯಲಿದೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಭದ್ರತಾ ಕಾರಣದಿಂದಾಗಿ ಈ ಬಾರಿ ಐಪಿಎಲ್ ಟೂರ್ನಿ ವಿದೇಶದಲ್ಲಿ ನಡೆಯಲಿದೆ ಎಂಬ ವರದಿಗಳು ಪ್ರಕಟವಾಗಿದ್ದವು. ಆದರೆ ಈ ವರದಿಯನ್ನು ತಳ್ಳಿ ಹಾಕಿದ್ದ ಬಿಸಿಸಿಐ ಕಾರ್ಯದರ್ಶಿ ಜಯ್‌ಶಾ (Jay Shah) ಐಪಿಎಲ್ ಟೂರ್ನಿ ಸಂಪೂರ್ಣವಾಗಿ ಭಾರತದಲ್ಲೇ (India) ನಡೆಯಲಿದೆ ಎಂದು ಸ್ಪಷ್ಟನೆ ನೀಡಿದ್ದರು.