ಇಷ್ಟೇನಾ ಅಂತ ಕೇಳ್ಬೇಡಿ – ಪರಿಸರವನ್ನು ಪ್ಲಾಸ್ಟಿಕ್‌ ಮಾಲಿನ್ಯದಿಂದ ಕಾಪಾಡಲು ಇಷ್ಟು ಸಾಕು..

July 19, 2024
12:05 PM
ಪರಿಸರ ಕಾಳಜಿಯು ಮಾತನಾಡುವುದರಿಂದ ಬರುವುದಿಲ್ಲ, ಆಚರಿಸುವುದರಿಂದ ಬರುತ್ತದೆ. ಈ ಮಾದರಿಯ ಬಗ್ಗೆ ಪುತ್ತೂರಿನ ಕಿರಣ ಶಂಕರ ಮಲ್ಯ ಅವರು ಸಾಮಾಜಿಕ ಜಾಲತಾಣ ಪೇಸ್‌ಬುಕ್‌ನಲ್ಲಿ ಬರೆದಿರುವ ಉತ್ತಮ ಸಂಗತಿ, ಮಾದರಿ ಕಾರ್ಯವನ್ನು ಇಲ್ಲಿ ಪ್ರಕಟಿಸಲಾಗಿದೆ.

ಪ್ಲಾಸ್ಟಿಕ್‌(Plastic) ರಾಸಾಯನಿಕವಾಗಿ(Chemical) ಪಾಲಿ ಈಥೈಲೀನ್ ಪಾಲಿಮರ್ ಆಗಿದ್ದು ಇದು ಪೆಟ್ರೋಲಿಯಂ ಉತ್ಪನ್ನಗಳಿಂದ(Petroleum) ಪ್ರಧಾನವಾಗಿ ಮಾಡಲ್ಪಟ್ಟಿದೆ. ಸುಮಾರು ೧೩,೦೦೦ ಬಗೆಯ ರಾಸಾಯನಿಕಗಳು ಇದರ ಉತ್ಪತ್ತಿ ಮತ್ತು ಉಪಯೋಗದಲ್ಲಿ ಪ್ರಮುಖ ಪಾತ್ರವಹಿಸುತ್ತವೆಯಾದುದರಿಂದ ಇದರಿಂದುಂಟಾಗಬಹುದಾದ ಅನಾಹುತಗಳನ್ನು ಊಹಿಸಲು ಅಸಾಧ್ಯ. ಪ್ಲಾಸ್ಟಿಕ್ ಮಾಲಿನ್ಯವನ್ನು ಹೊಡೆದೋಡಿಸಿ ಇದರಿಂದುಂಟಾಗುವ ಭೂಮಿ(Earth), ಜಲ(Water) ಮತ್ತು ವಾಯುಮಾಲಿನ್ಯಗಳನ್ನು(Air polution) ತಡೆಯುವುದು ಅತ್ಯವಶ್ಯಕವಾಗಿದೆ.

Advertisement
Advertisement
Advertisement

ಕೃತಕವಾಗಿ ತಯಾರಿಸಲ್ಪಟ್ಟ ಪೆಟ್ರೋಲಿಯಂ ರಾಸಾಯನಿಕ ವಸ್ತುಗಳಿಂದ ಪ್ಲಾಸ್ಟಿಕ್ ರಚಿತವಾಗಿದ್ದು, ಇದನ್ನು ಸುಟ್ಟಾಗ ಅಥವಾ ಕರಗಿಸಿದಾಗ ಉಂಟಾಗುವ ಹಾನಿಕಾರಕ ರಾಸಾಯನಿಕಗಳು ಪರಿಸರ ಮಾಲಿನ್ಯವನ್ನುಂಟುಮಾಡುತ್ತವೆ. ಇತ್ತೀಚೆಗೆ ಪ್ಲಾಸ್ಟಿಕ್ ವಸ್ತುಗಳ ಬಳಕೆ ಅತಿ ಹೆಚ್ಚಾಗಿದ್ದು, ಪ್ಲಾಸ್ಟಿಕ್ ಮನುಷ್ಯ ಜೀವನದ ಅವಿಭಾಜ್ಯ ಅಂಗವಾಗಿದೆ. ಆದರೆ ಇದನ್ನೀಗ ಮನುಜರಾದ ನಾವೇ ತಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಒಂದು ಸಣ್ಣ ಪ್ರಯತ್ನವೂ ಸಾಕಾಗುತ್ತದೆ. ಇಲ್ಲಿ ನೋಡಿ

Advertisement

ಇಷ್ಟೇನಾ ಅಂತ ಕೇಳ್ಬೇಡಿ ಮೊದಲೇ ಹೇಳಿ ಬಿಡುತ್ತೇನೆ… ವಿಷಯ ಸಿಂಪಲ್,,,, 10 ರೂಪಾಯಿ ಮಜೂರಿ ಅಷ್ಟೇ… ನಮ್ಮ ಬೊಳುವಾರಿನಲ್ಲಿ ಭಾಸ್ಕರಣ್ಣ ಅಂತ ಹಿರಿಯ ಟೈಲರ್ ಒಬ್ಬರು ಇದ್ದಾರೆ.  ವಯಸ್ಸು ಅಂದಾಜು 70 ರ ಆಸುಪಾಸು ಮೊದಲೆಲ್ಲಾ ತುಂಬಾ ಕೆಲಸ ಸಿಗುತ್ತಿತ್ತು. ಆದರೆ ಈಗ ಈ ರೆಡಿಮೇಡ್ ಬಟ್ಟೆಗಳಿಗೆ ಬೇಡಿಕೆ ಹೆಚ್ಚು ಇರುವುದರಿಂದ  ಈ ಬಟ್ಟೆ ಖರೀದಿ ಮಾಡಿ ಅದನ್ನು ಟೈಲರಗಳಿಗೆ ಹೊಲಿಯಲು ಕೊಡುವುದು ಜನರಿಗೆ ಕಾಯುವಷ್ಟು ಪುರುಸೋತ್ತು ಇಲ್ಲ,(ನನ್ನನ್ನು ಸೇರಿಸಿ)
ಒಂದು ಸಣ್ಣ ಕೆಲಸ, 10 ಮೀಟರ್ ಬಟ್ಟೆ (ಮೀಟರಿಗೆ 20ರೂಪಾಯಿ) ಖರೀದಿ ಮಾಡಿ 20 ಕೈಚೀಲ ಹೊಲಿದು ಕೊಡುತ್ತೀರಂತಾ ಕೇಳಿದೆ. ಒಂದು ಚೀಲ ಹೊಲಿದ ಮಜೂರಿ 10 ರೂಪಾಯಿ ಕೊಡುತ್ತೇನೆ ಹೇಗೆ ಕೆಲಸ ಮಾಡುತ್ತೀರಂತ ಕೇಳಿದೆ, ಸರಿ ಮಲ್ಯರೇ ಎಂದು ಕೆಲಸ ಶುರುಮಾಡಿದರು. ನೋಡಿ ಚೀಲ ಹೇಗಿದೆ.. ? ಸ್ವಲ್ಪ ತಾಳ್ಮೆ ಬೇಕು ಅಷ್ಟೇ..

ಈ ವಿಷಯದಲ್ಲಿ ಇನ್ನು ಈ ಚೀಲದ ಉಪಯೋಗ ಹೇಗಂತ ಕೇಳುತ್ತೀರಾ…. ನಾನೊಂದ ಪುಟ್ಟದಾದ ಜನರಲ್ ಸ್ಟೋರ್ ಅಂಗಡಿ ವ್ಯಾಪಾರ ಮಾಡಿಕೊಂಡಿದ್ದೇನೆ. ನನ್ನಲ್ಲಿ ನಿತ್ಯ ವ್ಯಾಪಾರಕ್ಕೆ ಬರುವಂತಾಹ ಗ್ರಾಹಕರೀಗೆ (300 ಮೇಲ್ಪಟ್ಟ ವ್ಯಾಪಾರಕ್ಕೆ) ಇದನ್ನು ನೀಡುತ್ತಿದ್ದೇನೆ. 500, 300 ರೂಪಾಯಿ ಖರೀದಿಗೆ ಬಿಲ್ನಲ್ಲಿ 5%10% ಡಿಸ್ಕೌಂಟ್ ಮಾಡುವ ಬದಲು ಇಂತಾಹ ಚೀಲಗಳನ್ನು ನಮ್ಮ ಆಸುಪಾಸಿನ ಈ ವಿಷಯದಲ್ಲಿ ಆಸಕ್ತಿ ಇರುವ ಟೈಲರಗಳಲ್ಲಿ ಹೊಲಿಯಲು ನೀಡಿ. ಅವರೀಗೂ ಕೆಲಸ ಆಗುತ್ತದೆ. ಪ್ಲಾಸ್ಟಿಕ್ ನಿಂದ ಸ್ವಲ್ಪ ಮುಕ್ತಿ ಸಿಗಬಹುದು.

Advertisement
ಬರಹ :
ಕಿರಣ ಶಂಕರ ಮಲ್ಯ
, ಸ್ವಚ್ಚಪುತ್ತೂರು

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮಹಿಳೆಯರಿಗೆ ಕೌಶಲ್ಯ ತರಬೇತಿ ಕಾರ್ಯಾಗಾರ | ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ಹೇಗೆ..?
October 18, 2024
6:58 AM
by: ದ ರೂರಲ್ ಮಿರರ್.ಕಾಂ
ಮಮದಾಪುರ ಅರಣ್ಯ ಪ್ರದೇಶಕ್ಕೆ ಮರುನಾಮಕರಣ
October 17, 2024
7:17 AM
by: ದ ರೂರಲ್ ಮಿರರ್.ಕಾಂ
ನೀವು ಡಿವಿಡೆಂಡ್‌ ಪಡೆದುಕೊಂಡಿದ್ದೀರಾ…?
October 17, 2024
6:49 AM
by: ದ ರೂರಲ್ ಮಿರರ್.ಕಾಂ
ಬೆಂಗಳೂರು ಹವಾಮಾನದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಸೂಕ್ತ ಕ್ರಮ
October 15, 2024
6:52 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror