MIRROR FOCUS

ತಣ್ಣೀರಲ್ಲಿ ಬೇಯುತ್ತೆ ಈ ವಿಶೇಷ ಅಕ್ಕಿ ತಳಿ…! | ಕೇವಲ 30 ನಿಮಿಷದಲ್ಲಿ ಅನ್ನ ರೆಡಿ…! |ಇದು ಆರೋಗ್ಯಕ್ಕೆ ತುಂಬಾ ಉಪಯುಕ್ತ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಒಂದೆಡೆ ಅನ್ನದ(Rice) ಉಪಯೋಗ ದಿನಕಳೆದಂತೆ ಯುವ ಜನತೆ ಕಡಿಮೆ ಮಾಡುತ್ತಿದ್ದಾರೆ. ಹಾಗೆ ಆರೋಗ್ಯ(Health) ದೃಷ್ಟಿಯಿಂದ ಅನ್ನ ಒಳ್ಳೆಯದಲ್ಲಾ ಎನ್ನುವ ತಪ್ಪು ಸಂದೇಶಗಳನ್ನು ರವಾನಿಸಲಾಗುತ್ತಿದೆ. ಡಯಟ್‌(Diet) ಮಾಡುವವರಿಗೆ, ಸಕ್ಕರೆ ಕಾಯಿಲೆ(Diabetes) ಇರುವವರು ಅನ್ನದಿಂದ ದೂರ ಇದ್ದರೆ ಒಳ್ಳೆದು ಅನ್ನುವ ಸಲಹೆಯೇ ಹೆಚ್ಚು. ಆದರೆ ನಮ್ಮ ಹಿರಿಯರು ಅನ್ನ ತಿಂದೆ ನೂರಾರು ಕಾಲ ಬಾಳಿ ಬದುಕಿದ್ದಾರೆ. ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಂಡಿದ್ದಾರೆ. ಇಲ್ಲೊಂದು ವಿಶೇಷ ಭತ್ತದ ತಳಿ(variety of rice)ಇದೆ. ಇದರ ಅಕ್ಕಿಯನ್ನು ತಣ್ಣೀರಿನಲ್ಲೇ(Cold water) ಬೇಯಿಸಬಹುದಂತೆ. ಹಾಗೆ ಆರೋಗ್ಯಕ್ಕೂ ಒಳ್ಳೆಯದಂತೆ…!

Advertisement

ಅನ್ನವನ್ನು ತಣ್ಣೀರಿನಿಂದ ಬೇಯಿಸುವುದನ್ನು ಕೇಳಿದ್ದೀರಾ..? ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ನರ್ಕತಿಯಾಗಂಜ್‌ನ ಮುಶರ್ವಾ ಗ್ರಾಮದ ನಿವಾಸಿ ಕಮಲೇಶ್ ಚೌಬೆ ಈ ರೀತಿಯ ಅಕ್ಕಿಯನ್ನು ಬೆಳೆಯುತ್ತಾರೆ. ಇದೇ ಜಿಲ್ಲೆಯ ಹರ್ಪುರ್ ಗ್ರಾಮದಲ್ಲಿ ವಿಜಯ್ ಗಿರಿ ಎಂಬವರೂ 2020 ರಿಂದಲೇ ಈ ಮಾದರಿ ಅಕ್ಕಿ ಬೆಳೆದು ಸುದ್ದಿಯಾಗಿದ್ದರು. ಕಮಲೇಶ್ ಸಾಂಪ್ರದಾಯಿಕ ಕೃಷಿಯ ಹೊರತಾಗಿ ಹೊಸ ರೀತಿಯಲ್ಲಿ ಕೃಷಿ ಮಾಡುವ ಬಗ್ಗೆ ಸದಾ ಯೋಚಿಸುತ್ತಿರುತ್ತಾರೆ. ಸದ್ಯ ಕಮಲೇಶ್ ವಿಶೇಷ ಭತ್ತವೊಂದರ ಕೃಷಿ ಮಾಡುತ್ತಿದ್ದಾರೆ. ಕಮಲೇಶ್ ಐದು ಎಕರೆ ಹೊಲದಲ್ಲಿ ಈ ವಿಶೇಷ ಭತ್ತವನ್ನು ನಾಟಿ ಮಾಡಿದ್ದಾರೆ. ಈ ಬಗ್ಗೆ ವಿವಿಧ ಮಾಧ್ಯಮಗಳು ವರದಿ ಮಾಡಿದೆ.

ಕಮಲೇಶ್ ಅವರ ವಿವರಗಳ ಪ್ರಕಾರಈ ಅಕ್ಕಿಯನ್ನು ಕೇವಲ 30 ನಿಮಿಷದಲ್ಲಿ ತಣ್ಣೀರಿನಲ್ಲಿ ಬೇಯಿಸಬಹುದಂತೆ..! ಮತ್ತೊಂದೆಡೆ ತಜ್ಞರು ಕೂಡ ಈ ಅಕ್ಕಿ ಒಳ್ಳೆಯದು ಎಂದು ತಿಳಿಸಿದ್ದು, ಈ ಅಕ್ಕಿಯಲ್ಲಿ ಕಾರ್ಬೋಹೈಡ್ರೇಟ್‌ಗಳ ಪ್ರಮಾಣ ಕಡಿಮೆ ಎಂದು ಹೇಳಲಾಗುತ್ತದೆ. ಇದು ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ. ಇದರ ಬಹುದೊಡ್ಡ ವಿಶೇಷತೆ ಏನೆಂದರೆ, ಈ ಅಕ್ಕಿಯು ಸಕ್ಕರೆ ಮುಕ್ತವಾಗಿದ್ದು, ಇದರಲ್ಲಿ ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೇಟ್, ಪ್ರೊಟೀನ್ ಇರುವುದರಿಂದ ಜನಸಾಮಾನ್ಯರಿಗೆ ಅನುಕೂಲವಾಗಲಿದೆ.

ಈ ರೀತಿಯ ಧಾನ್ಯವನ್ನು ಕೊಯ್ಲು ಮಾಡಿದ ನಂತರ ಕಮಲೇಶ್, ಮಧ್ಯಪ್ರದೇಶ, ಗುಜರಾತ್, ಉತ್ತರ ಪ್ರದೇಶ, ನಾಗಾಲ್ಯಾಂಡ್, ಬಿಹಾರ ಮತ್ತು ಇತರ ಜಿಲ್ಲೆಗಳ ರೈತರಿಗೆ ಸರಬರಾಜು ಮಾಡುತ್ತಾರೆ. ಈ ವಿಶೇಷ ಅಕ್ಕಿಯನ್ನು ಬೆಳೆಯಲು ಒಟ್ಟು 140 ದಿನಗಳು ಬೇಕಾಗುತ್ತದೆ. ಮಾರುಕಟ್ಟೆಯಲ್ಲಿ ಕೆಜಿಗೆ 40-60 ರೂ. ಬೆಲೆ ಸಿಗುತ್ತದೆ. ಅಸ್ಸಾಂನಲ್ಲಿ ಈ ಅಕ್ಕಿಯನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಪ್ರವಾಹದಂತಹ ವಿಪತ್ತುಗಳ ಸಮಯದಲ್ಲಿ ಈ ಅಕ್ಕಿ ತುಂಬಾ ಪರಿಣಾಮಕಾರಿ ಎಂದು ಹೇಳಲಾಗುತ್ತದೆ.ಈ ಭತ್ತದ ತಳಿಯು ಅಸ್ಸಾಂನಲ್ಲಿ ಹೆಚ್ಚು ಪ್ರಚಲಿತದಲ್ಲಿದೆ, ಇದು ಈಗಾಗಲೇ ಜಿಐ ಟ್ಯಾಗ್  ಪಡೆದುಕೊಂಡಿದೆ.

– ಅಂತರ್ಜಾಲ ಮಾಹಿತಿ

Advertisement

Heard of cooking rice with cold water? Kamlesh Chaube, a resident of Musharwa village in Narkatiyaganj, West Champaran district of Bihar, grows this type of rice. Kamlesh is always thinking about new ways of farming apart from traditional farming. Currently, Kamlesh is cultivating a special paddy. Kamlesh has planted this special paddy in a five acre field.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 12-07-2025 | ಸಾಮಾನ್ಯ ಮಳೆ ಮುಂದುವರಿಕೆ | ಜು.16 ರಿಂದ ಮಳೆ ಹೆಚ್ಚಳ |

ಅಸಹಜ ಚಲನೆಯ ಕಾರಣದಿಂದ ಕರಾವಳಿ ಭಾಗಗಳಲ್ಲಿ ಹೆಚ್ಚು ಮಳೆಯಾಗುತ್ತಿದೆ.

7 hours ago

ತಾಳೆ ಬೆಳೆ ಕೃಷಿ | ಅಡಿಕೆಯ ಪರ್ಯಾಯ ಬೆಳೆಯ ಬಗ್ಗೆ ಮಾಹಿತಿ

ಅಡಿಕೆ ಬೆಳೆಗೆ ಪರ್ಯಾಯವಾಗಿ ಅಥವಾ ಉಪಬೆಳೆಯಾಗಿ ತಾಳೆ ಬೆಳೆಯನ್ನು ಬೆಳೆಯುವ ಬಗ್ಗೆ ಈಗಾಗಲೇ…

10 hours ago

ಹವಾಮಾನ ಬದಲಾವಣೆಯಿಂದ ನಿದ್ರೆಯ ಮೇಲೆ ಪರಿಣಾಮ – ಅಧ್ಯಯನ ವರದಿ

ಹವಾಮಾನ ಬದಲಾವಣೆಯಿಂದ  ಹಾಗೂ ತಾಪಮಾನದ ದಿಢೀರ್‌ ಬದಲಾವಣೆಗಳು ನಿದ್ರೆಯಲ್ಲಿ ಉಸಿರುಕಟ್ಟುವಿಕೆ ಪ್ರಕರಣ ಹೆಚ್ಚಾಗುತ್ತಿದೆ…

13 hours ago

ಮಾರುಕಟ್ಟೆ ಶುಲ್ಕ ಬದಲಾವಣೆ ಮಾಡಬಾರದೆಂಬ ಕ್ಯಾಂಪ್ಕೋ ಬೇಡಿಕೆ ಪರಿಗಣನೆ

ಕ್ಯಾಂಪ್ಕೋದಿಂದ ಸಂಗ್ರಹಿಸುತ್ತಿರುವ ಶೇಕಡ 0.48ರಷ್ಟು ಮಾರುಕಟ್ಟೆ ಶುಲ್ಕದಲ್ಲಿ ಯಾವುದೇ ಬದಲಾವಣೆ ಮಾಡಬಾರದೆಂಬ ಸಂಸ್ಥೆಯ…

14 hours ago

ಹೊಸರುಚಿ | ಹಲಸಿನ ಬೀಜದ ಪರೋಟ

ಹಲಸಿನ ಬೀಜದ ಪರೋಟ : ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ :  ಹಲಸಿನ…

14 hours ago

ಮಂಗಳದ ದೃಷ್ಟಿ | ಈ ರಾಶಿಗಳಿಗೆ ಆಕ್ರಮಣಕಾರಿ ತೀರ್ಮಾನಗಳಿಂದ ಲಾಭ..!

ವೈದಿಕ ಜ್ಯೋತಿಷ್ಯದಲ್ಲಿ ಮಂಗಳ ಗ್ರಹವು ಶಕ್ತಿ, ಧೈರ್ಯ, ಮತ್ತು ಆಕ್ರಮಣಕಾರಿ ನಿರ್ಧಾರಗಳ ಸಂಕೇತವಾಗಿದೆ.…

14 hours ago