ಇತ್ತೀಚೆಗೆ ಕೃಷಿ ಪ್ರವಾಸೋದ್ಯಮ #Agritourism ಬೆಳವಣಿಗೆಯತ್ತ ಸಾಗುತ್ತಿದೆ. ಸರ್ಕಾರದ ಕಡೆಯಿಂದ ಅಲ್ಲದಿದ್ರು, ಕೃಷಿಕರೇ ಸೇರಿ ಈ ಪರಿಕಲ್ಪನೆಯನ್ನು ಬೆಳವಣಿಗೆಯ ಕಡೆ ಕೊಂಡೊಯ್ಯಿತ್ತಿದ್ದಾರೆ. ರೈತರು ಕೃಷಿಯನ್ನೇ ನಂಬಿ ಬದುಕುತ್ತಿರುವುದರಿಂದ ಮುಂದೆ ಇದರ ಅಗತ್ಯ ಬಹಳ ಇದೆ. ಈ ದೃಷ್ಟಿಯನ್ನು ಇಟ್ಟುಕೊಂಡು ಎಲ್ಲರು ಒಂದುಗೂಡಿ ಕೃಷಿ ಮತ್ತು ಗ್ರಾಮೀಣ ಕ್ಷೇತ್ರಗಳ ಸಬಲೀಕರಣದ ಪರಿಕಲ್ಪನೆಯನ್ನು ಹುಟ್ಟು ಹಾಕುತ್ತಿದ್ದಾರೆ. ಈ ಪ್ರಯುಕ್ತ ಮೈಸೂರಿನಲ್ಲಿ ಕಾರ್ಯಗಾರವನ್ನು ಆಯೋಜಿಸಲಾಗಿದೆ. ಇದರ ಸದುಪಯೋಗವನ್ನು ಎಲ್ಲಾ ಆಸಕ್ತ ರೈತರು ಪಡೆದುಕೊಳ್ಳಬಹುದು. ಈ ಕೃಷಿ ಪ್ರವಾಸೋದ್ಯಮದ ಬೆಳವಣಿಗೆಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಬಹುದು.
- ಕೃಷಿ ಪ್ರವಾಸೋದ್ಯಮ ಅಂದರೇನು?
- ಕೃಷಿ ಪ್ರವಾಸೋದ್ಯಮದ ಉದ್ದೇಶಗಳೇನು?
- ಕೃಷಿ ಪ್ರವಾಸೋದ್ಯಮದ ವ್ಯಾಪ್ತಿ.
- ಕೃಷಿ ಪ್ರವಾಸೋದ್ಯಮದ ತತ್ವಗಳು.
- ಕೃಷಿ ಪ್ರವಾಸೋದ್ಯಮದ ಅಂಶಗಳು.
- ಕೃಷಿ ಪ್ರವಾಸೋದ್ಯಮದ ಅವಶ್ಯಕತೆ ಏಕೆ?
- ಕೃಷಿ ಪ್ರವಾಸೋದ್ಯಮದ ಸೇವೆ ಮತ್ತು ಚಟುವಟಿಕೆಗಳು.
- ಕೃಷಿ ಪ್ರವಾಸೋದ್ಯಮ ಯಾರು ಪ್ರಾರಂಭಿಸಬಹುದು?
- ಕೃಷಿ ಪ್ರವಾಸೋದ್ಯಮದ ನೀತಿ ನಿಯಮಗಳು ಹೇಗಿರಬೇಕು?
- ಕೃಷಿ ಪ್ರವಾಸೋದ್ಯಮದ ಅವಕಾಶಗಳು ಮತ್ತು ಸವಾಲುಗಳು.
- ಕೃಷಿ ಪ್ರವಾಸೋದ್ಯಮ ಕೇಂದ್ರಗಳ ಯಶಸ್ಸಿಗೆ ಪ್ರಮುಖ ಅಂಶಗಳು.
- ಮಾದರಿ ಕೃಷಿ ಪ್ರವಾಸೋದ್ಯಮ ಕೇಂದ್ರಗಳ ವಿವರ.
ಮೇಲ್ಕಂಡ ವಿಚಾರಗಳ ಜೊತೆಗೆ ಕೃಷಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಮತ್ತಷ್ಟು ವಿಚಾರಗಳೊಂದಿಗೆ ಸೆಪ್ಟೆಂಬರ್ ತಿಂಗಳು ಮೈಸೂರಿನಲ್ಲಿ 03 ದಿನಗಳ ಕಾರ್ಯಗಾರ ನಡೆಸುವ ಬಗ್ಗೆ ಉದ್ದೇಶಿಸಲಾಗಿದೆ.
ಕರ್ನಾಟಕ ರಾಜ್ಯದ ಪ್ರವಾಸೋದ್ಯಮ ಇಲಾಖೆಗೆ ಕಳೆದ 2023 ಜೂನ್ ತಿಂಗಳಿನಲ್ಲಿ ಕೃಷಿ ಪ್ರವಾಸೋದ್ಯಮ ನೀತಿ ರೂಪಿಸುವ ಸಂಬಂಧ ನೀಡಲಾದ ಮನವಿ ಮತ್ತು ವರದಿಯ ಅನುಸಾರ ಈಗಾಗಲೇ ಕೆಲಸಗಳು ಪ್ರಾರಂಭವಾಗಿರುತ್ತದೆ ಮತ್ತು ವಿವಿಧ ರಾಜ್ಯಗಳ ಪ್ರವಾಸೋದ್ಯಮ ನೀತಿ ಅಧ್ಯಾಯನ ಮಾಡಿ ನಮ್ಮ ರಾಜ್ಯಕ್ಕೆ ಸೂಕ್ತವಾಗುವ ನೀತಿ ರೂಪಿಸುವ ಕೆಲಸಗಳು ಪ್ರಗತಿಯಲ್ಲಿದೆ.
ಕಾರ್ಯಾಗಾರದಲ್ಲಿ ಪ್ರವಾಸೋದ್ಯಮ ಇಲಾಖೆಯವರು,ಕೃಷಿ ಪ್ರವಾಸೋದ್ಯಮ ನೆಡೆಸುತ್ತಿರುವ ಕೃಷಿಕರು,ಕೇಂದ್ರ ಪ್ರಾರಂಭ ಮಾಡಲು ಸಿದ್ಧತೆ ಮಾಡಿಕೊಂಡಿರುವ ಮತ್ತು ಪ್ರಾರಂಭ ಮಾಡಲು ಆಸಕ್ತಿ ಹೊಂದಿರುವ ಕೃಷಿಕರು, ಪ್ರವಾಸಿ ನಿರ್ವಾಹಕರು, ಕೃಷಿ/ತೋಟಗಾರಿಕೆ ಇಲಾಖೆಯವರು,ಸಂಪನ್ಮೂಲ ವ್ಯಕ್ತಿಗಳು ಹೀಗೆ ಸಂಬಂಧಪಟ್ಟವರೊಂದಿಗೆ ವಿಚಾರಗಳನ್ನು ಚರ್ಚಿಸುವುದು ಮತ್ತು ಕಾರ್ಯಗತ ಮಾಡುವ ಬಗ್ಗೆ ತೆಗೆದುಕೊಳ್ಳಬೇಕಾದ ಜವಾಬ್ದಾರಿಗಳು,ಇತ್ಯಾದಿ ಕಾರ್ಯಗಾರದ ಉದ್ದೇಶವಾಗಿರುತ್ತದೆ.
ಕೃಷಿ ಪ್ರವಾಸೋದ್ಯಮ ಕೇಂದ್ರ ಪ್ರಾರಂಭ ಮಾಡಲು ಮತ್ತು ಕಾರ್ಯಾಗಾರದಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವವರು ಸಂಪರ್ಕಿಸಲು ಕೋರಲಾಗಿದೆ.
ಪ್ರಶಾಂತ್ ಜಯರಾಮ್, ಕೃಷಿಕರು & ಕೃಷಿ ಸಲಹೆಗಾರರು , ಮೊಬೈಲ್ :9342434530