ಗುತ್ತಿಗಾರಿನಲ್ಲಿ ಸ್ವಚ್ಛತಾ ಅಭಿಯಾನ | ರಸ್ತೆ ಬದಿ ಕಸ ಚೆಲ್ಲಿದವರೇ ಮತ್ತೆ ಎತ್ತಿದರು….! | ಜನರು ಜಾಗೃತರಾಗಿದ್ದರೆ ಇದು ಸಾಧ್ಯ |

November 25, 2023
10:25 AM
ಸ್ವಚ್ಛ ಭಾರತ ಸಾಕಾರವಾಗಬೇಕಾದರೆ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವುದು ಕಡಿಮೆಯಾಗಬೇಕು. ಇದೀಗ ಗ್ರಾಮೀಣ ಭಾಗದಲ್ಲಿ ಇಂತಹ ಜಾಗೃತಿ ಹೆಚ್ಚಾಗುತ್ತಿದೆ. ಜನರೂ ಜಾಗೃತರಾಗಬೇಕಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರಿನಲ್ಲಿ ಕಳೆದ 21 ವಾರಗಳಿಂದ   ಪ್ರತೀ ಗುರುವಾರ ಸ್ವಚ್ಛತಾ ಅಭಿಯಾನ ನಡೆಯುತ್ತಿದೆ. ಈ ಮೂಲಕ ಸ್ವಚ್ಛತೆಯ ಕಡೆಗೆ ಜನರನ್ನು ಜಾಗೃತಿ ಮಾಡುವುದು ಉದ್ದೇಶ. ಇದೀಗ ಗುತ್ತಿಗಾರು ಪ್ರದೇಶದಲ್ಲಿ ಪ್ರಜ್ಞಾವಂತ ಜನರು ಜಾಗೃತರಾಗಿದ್ದಾರೆ. ಹೀಗಾಗಿ ಗುತ್ತಿಗಾರು ಸಮೀಪದ ಕಡ್ತಲ್‌ಕಜೆ ಬಳಿ ಕಸ ಎಸೆದವರೇ ಕಸ ಎತ್ತಿದ ಘಟನೆ ನಡೆದಿದೆ.

ಗುತ್ತಿಗಾರು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಸ್ವಚ್ಛ ಗ್ರಾಮ ಗುತ್ತಿಗಾರು ಟಾಸ್ಕ್‌ ಫೋರ್ಸ್‌ ತಂಡವು ಕಳೆದ 5 ತಿಂಗಳಿನಿಂದ ಪ್ರತೀ ಗುರುವಾರ ಸ್ವಚ್ಛತಾ ಜಾಗೃತಿ ಕಾರ್ಯಕ್ರಮ ಮಾಡುತ್ತಿದೆ. ಕಸ ಹೆಕ್ಕುವುದು  ಹಾಗೂ ಕಸ ಎಸೆಯದಂತೆ ಜಾಗೃತಿ ನೀಡುವುದು ಇದರ ಉದ್ದೇಶ. ಈ ತಂಡದಲ್ಲಿ  ಗ್ರಾಮ ಪಂಚಾಯತ್‌, ಸಂಜೀವಿನಿ ಒಕ್ಕೂಟ, ಗುತ್ತಿಗಾರು ವರ್ತಕರ ಸಂಘ ಹಾಗೂ ಇತರ ಸಂಘಸಂಸ್ಥೆಗಳ ನೆರವಿನೊಂದಿಗೆ ಈ ಕೆಲಸ ನಡೆಯುತ್ತಿದೆ. ಇದೀಗ ಗುತ್ತಿಗಾರು ಪೇಟೆ ಸ್ವಚ್ಛತೆಯತ್ತ ಸಾಗುತ್ತಿದೆ. ಆದರೆ ಗ್ರಾಮದ ಅಲ್ಲಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವುದು ಕಾಣುತ್ತಿದೆ. ಈಗ ಪ್ರಜ್ಞಾವಂತ ಜನರು ಜಾಗೃತರಾಗಿ ಕಸ ಎಸೆಯುವುದನ್ನು ತಡೆಯುತ್ತಿರುವುದು  ಗಮನಾರ್ಹವಾಗಿದೆ.

ಕಳೆದ ಶನಿವಾರ ಬೆಳಗ್ಗೆ ಏಳು ಗಂಟೆಯ ಸುಮಾರಿಗೆ ಜೆಸಿಬಿ ವಾಹನವೊಂದು ತನ್ನ ಒಡೆದ ಬೃಹತ್ ಪ್ಲಾಸ್ಟಿಕ್ ಯುಕ್ತ ಗಾಜನ್ನು ಕಡ್ತಲ್ಕಜೆ ಸಮೀಪ ರಸ್ತೆ ಪಕ್ಕದಲ್ಕಿ ಎಸೆದು ಹೋಗಿತ್ತು.ಪಕ್ಕದ ಮನೆಯವರಿಗೆ ಸಂಶಯ ಬಂದು ಗಮನಿಸಿದರು. ತಕ್ಷಣವೇ ಸಾಮಾಜಿಕ ಕಾಳಜಿಯುಳ್ಳ ಪತ್ರಕರ್ತರೊಬ್ಬರು ವಾಹನವನ್ನು ತಡೆದು ಕಸ ಎಸೆದ ಬಗ್ಗೆ ಪ್ರಶ್ನಿಸಿದರು. ಸಂಜೆಯ ವೇಳೆ ಕೆಲಸ ಮುಗಿಸಿ ಹೋಗುವಾಗ ತೆಗಿತೇವೆ ಎಂದು ಹೇಳಿದ್ದರು. ಆದರೆ ಮೂರು ದಿನವಾಗಿದ್ದರು ಕೂಡಾ ಕಸ ತೆಗೆಯದಿರುವ ಬಗ್ಗೆ ಪಂಚಾಯತ್ ಸಿಬ್ಬಂದಿ ಮತ್ತು ಪಂಚಾಯತ್ ಸದಸ್ಯೆಯೊಬ್ಬರ ಜೊತೆ ಸಂಬಂಧಿತ ವಾಹನಕ್ಕೆ ದಂಡ ವಿಧಿಸುವ ಬಗ್ಗೆ ಮಾಹಿತಿ ಪಡೆದರು. ದೂರು ನೀಡಿದರೆ ದಂಡ ವಿಧಿಸುವ ಬಗ್ಗೆ ತಿಳಿಸಿದ ಹಿನ್ನೆಲೆಯಲ್ಲಿ ದೂರು ನೀಡಲು ಸಿದ್ಧತೆ ನಡೆಸಿದ್ದರು ಕೂಡಾ. ಈ ಮಾಹಿತಿ ಪಡೆದ ಅದೇ ವಾಹನದವರು ಆಗಮಿಸಿ ಎಸೆದಿದ್ದ ವಾಹನದ ಗಾಜನ್ನು ಎತ್ತಿದರು.

ಈಗಾಗಲೆ ತ್ಯಾಜ್ಯ ಮುಕ್ತ ಗ್ರಾಮವನ್ನಾಗಿ ಪಂಚಾಯತ್ ಆಡಳಿತ ಹಾಗೂ ಸಾರ್ವಜನಿಕ ಸಂಘಟನೆಗಳು ಶ್ರಮಿಸುತಿರುವಾಗ ಸಾರ್ವಜನಿಕ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ಕಸ, ಪ್ಲಾಸ್ಟಿಕ್, ಮದ್ಯದ ಬಾಟಲಿ ಮೊದಲಾದ ತ್ಯಾಜ್ಯ ಎಸೆಯುವ ವಾಹನ ಅಥವಾ ವ್ಯಕ್ತಿ ಗಳ ಪೋಟೊ ಸಮೇತ ವಾಹನದ ನಂಬರ್, ವ್ಯಕ್ತಿಗಳ ಹೆಸರನ್ನು ಲಿಖಿತವಾಗಿ ದೂರಿತ್ತರೆ ಪಂಚಾಯತ್ ಆಡಳಿತ ದೂರು ಸ್ವೀಕರಿಸಿ ದಂಡ ವಿಧಿಸಲು ಸಾಧ್ಯವಿದೆ. ಈ ಬಗ್ಗೆ ಟಾಸ್ಕ್‌ ಫೋರ್ಸ್‌ ಗ್ರಾಮ ಪಂಚಾಯತ್‌ ಗೆ ಮನವಿ ಕೂಡಾ ನೀಡಿದೆ. ಪ್ರತಿಯೊಬ್ಬ ನಾಗರೀಕರು ಸ್ವಪ್ರೇರಣೆಯಿಂದ ಪಂಚಾಯತ್ ಆಡಳಿತದೊಂದಿಗೆ ಕೈಜೋಡಿಸಬೇಕಿದೆ.

ಈಚೆಗೆ ಶಾಲೆಗಳಲ್ಲೂ ಕಸ ಎಸೆಯುವ ಬಗ್ಗೆ ಜಾಗೃತಿ ನೀಡಲಾಗಿತ್ತು. ಆದರೆ ಗುತ್ತಿಗಾರು ದೂರವಾಣಿ ಕೇಂದ್ರದ ಬಳಿ ಈಚೆಗೆ ಶಾಲೆಯ ವಿದ್ಯಾರ್ಥಿಗಳು ಬಾಟಲಿಯ ಕಟ್ಟನ್ನು ಎಸೆದಿರುವ ಬಗ್ಗೆಯೂ ಸ್ಥಳೀಯರು ಮಾಹಿತಿ ನೀಡಿದ್ದರು. ಆದರೆ ವಿದ್ಯಾರ್ಥಿಗಳು ಎಂಬ ಕಾರಣದಿಂದ ದೂರು ದಾಖಲಿಸಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.

ಇದರ ಜೊತೆಗೇ, ಸಾಕುಪ್ರಾಣಿಗಳನ್ನು , ಹೋರಿ ಕರುಗಳನ್ನು ರಸ್ತೆ ಬದಿ ತಂದು ಬಿಡುವವರ ಬಗ್ಗೆಯೂ ಈಗ ಚರ್ಚೆಗಳು ನಡೆಯುತ್ತಿವೆ. ರಸ್ತೆ ಬದಿ ತಂದು ಬಿಡುವುದರಿಂದ ಜನರಿಗೂ, ಆಸುಪಾಸಿನಲ್ಲೂ, ವಾಹನ ಸವಾರರಿಗೂ ಸಮಸ್ಯೆ ಉಂಟಾಗಬಹುದಾಗಿದೆ ಎನ್ನುವುದು ಚರ್ಚೆಯ ಸಾರಾಂಶ. ಸ್ವಚ್ಛತಾ ಅಭಿಯಾನವು ಈ ಎಲ್ಲಾ ಕಾರಣಗಳಿಂದ ಗ್ರಾಮದ ಜನರನ್ನು ಜಾಗೃತರನ್ನಾಗಿಸುತ್ತಿದೆ.

The Swachcha Gram Guthigar Task Force team has been conducting cleanliness awareness program every Thursday for the last 5 months under Guthigar Gram Panchayath. The purpose of this is to create awareness about Swach Bharath. Now Guthigar village is moving towards cleanliness. But littering is seen everywhere in the village. It is remarkable that now conscious people are aware and stop littering. This work is being done with the help of Gram Panchayat, Sanjeevini okkuta, Guthigar Vartaka Sangh and other organizations.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೃಷಿಗೆ ಹವಾಮಾನ ಅಪಾಯ ಹೆಚ್ಚಳ | ರೈತರಿಗೆ ಕಠಿಣ ಕಾಲ ಬರುವ ಸೂಚನೆ ? ದೇಶದ 310 ಜಿಲ್ಲೆಗಳು ಅಪಾಯ ವಲಯದಲ್ಲಿ..!
March 26, 2026
7:04 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 25.03.2026 | ಕರಾವಳಿಯಲ್ಲಿ ಇಂದು ಸಂಜೆ ಮಳೆ ಸಾಧ್ಯತೆ | ಏಪ್ರಿಲ್‌ 5ರವರೆಗೆ ಬೇಸಿಗೆ ಮಳೆ ಸಕ್ರಿಯ!
March 25, 2026
12:30 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 24-03-2026 | ಕರ್ನಾಟಕದಲ್ಲಿ ಮತ್ತೆ ಮಳೆ ಅಲರ್ಟ್‌ | ಈ ದಿನದಿಂದ ಮಳೆ ವ್ಯಾಪ್ತಿ ಹೆಚ್ಚಳ ಸಾಧ್ಯತೆ..!
March 24, 2026
12:24 PM
by: ಸಾಯಿಶೇಖರ್ ಕರಿಕಳ
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 4 ಸಾವಿರ ಹುದ್ದೆಗಳು ಖಾಲಿ – ಆರಂಭದಲ್ಲಿ 1 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ
March 24, 2026
7:12 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror