ಚಿತ್ತೂರು ವಿವಿಧ ಮಾವಿನಹಣ್ಣುಗಳಿಗೆ ಹೆಸರುವಾಸಿಯಾದ ಊರಾಗಿದೆ. ಚಿತ್ತೂರು ಮಾವಿನ ಹಣ್ಣು ಗುಣಮಟ್ಟದಲ್ಲೂ ಶ್ರೇಷ್ಟವಾಗಿದೆ. ಹೀಗಾಗಿ ದೇಶದಾದ್ಯಂತದ ವ್ಯಾಪಾರಿಗಳಿಗೂ, ಗ್ರಾಹಕರಿಗೂ ಹೆಚ್ಚು ಬೇಡಿಕೆ ಇರುವ ಮಾವು. ಆದರೆ ಈ ಬಾರಿ ಹವಾಮಾನ ವೈಪರೀತ್ಯದಿಂದಾಗಿ ಮಾವಿನ ಕೃಷಿಯ ಮೇಲೆ ಪರಿಣಾಮವನ್ನು ಬೀರಿದೆ. ಹೂ ಬಿಡುವ ಹಂತದಲ್ಲಿ ವಿಳಂಬವಾಗಿರುವುದರಿಂದ ಈ ವರ್ಷ ಸಾಮಾನ್ಯ 7.9 ಲಕ್ಷ ಟನ್ ಇಳುವರಿ ಕಡಿಮೆಯಾಗಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಮುಂಬರುವ ಬೇಸಿಗೆಯಲ್ಲಿ ಚಿತ್ತೂರು ಜಿಲ್ಲೆಯ ರೈತರು 4.5 ಲಕ್ಷ ಟನ್ ತೋತಾಪುರಿ ತಳಿಯ ಮಾವಿನ ಇಳುವರಿ ನಿರೀಕ್ಷೆಯಲ್ಲಿದ್ದಾರೆ. ಆದರೆ ಹವಾಮಾನ ಪರಿಸ್ಥಿತಿಗಳಲ್ಲಿನ ಬದಲಾವಣೆಯಿಂದಾಗಿ ಈ ನಿರ್ದಿಷ್ಟ ವಿಧದ ತಳಿಯಲ್ಲಿ ಇಳುವರಿಯಲ್ಲಿನ ಕುಸಿತ ಕಾಣುತ್ತಿದೆ. ಸುಮಾರು 70,000 ಹೆಕ್ಟೇರ್ ಪ್ರದೇಶದಲ್ಲಿ ರೈತರು ತೋತಾಪುರಿ ತಳಿಯ ಮಾವು ಬೆಳೆಸಿದ್ದಾರೆ. ಮಾವಿನ ಇಳುವರಿ ಕಡಿಮೆಯಾದರೆ ಕೆಲವು ಉದ್ಯಮಗಳ ಮೇಲೂ ಪರಿಣಾಮ ಬೀರುತ್ತದೆ ಎಂದು ಬಂಗಾರುಪಾಳ್ಯಂ ಪ್ರದೇಶದ ರೈತ ಕೆ. ವೀರಸ್ವಾಮಿ ಹೇಳಿದ್ದಾರೆ.