ಸಕಾಲಿಕ ಮಳೆಯು ಕೃಷಿ ಹಾಗೂ ಗ್ರಾಮೀಣ ಬೇಡಿಕೆ ಈಡೇರಿಸುತ್ತದೆ | ಸಕಾಲಿಕವಾದ ಕೃಷಿ ಮೂಲಕ ಆದಾಯವೂ ಹೆಚ್ಚಿಸಬಹುದು | ಕ್ರೆಸಿಲ್‌ ವರದಿ |

June 12, 2024
9:13 PM
ಸಕಾಲಿಕವಾದ ಮಳೆ ಕೃಷಿ ಅಭಿವೃದ್ಧಿ ಹಾಗೂ ಗ್ರಾಮೀಣ ಬೇಡಿಕೆಗಳು, ಉದ್ಯೋಗದ ಸೃಷ್ಟಿಗೂ ಕಾರಣವಾಗುತ್ತದೆ.

ನೈರುತ್ಯ ಮಾನ್ಸೂನ್ ಕೇರಳ ಮತ್ತು ಈಶಾನ್ಯದಲ್ಲಿ ಪ್ರವೇಶ ಮಾಡುತ್ತಿದ್ದಂತೆ, ಈ ವರ್ಷದ ಮಳೆಗಾಲದ ಸುತ್ತಲಿನ ನಿರೀಕ್ಷೆ ಮತ್ತು ಆತಂಕ ಎರಡೂ ಸೃಷ್ಟಿಯಾಗುತ್ತದೆ. ಉತ್ತಮ ಮಳೆಯಾದರೆ  ಕೃಷಿ ಆದಾಯವನ್ನು ಪುನರುಜ್ಜೀವನಗೊಳಿಸಲು ಮತ್ತು ಹಣದುಬ್ಬರವನ್ನು ನಿಯಂತ್ರಿಸಲು  ನೆರವಾದರೆ, ಕಡಿಮೆ ಮಳೆಯು ಇನ್ನಷ್ಟು ಆತಂಕಕ್ಕೆ ಕಾರಣವಾಗುತ್ತದೆ. ಹೀಗಾಗಿ ಉತ್ತಮ ಮತ್ತು ಸಕಾಲಿಕ ಮಳೆಯು ದೇಶವನ್ನು ಸಮಗ್ರ ಸ್ಥಿತಿಯತ್ತ ಕೊಂಡೊಯ್ಯುತ್ತದೆ.

Advertisement
Advertisement
Advertisement

ಈ ಬಗ್ಗೆ ಕ್ರಿಸಿಲ್ ವರದಿಯೊಂದನ್ನು ತಯಾರಿಸಿದೆ (Credit Rating Information Services of India Limited), ಅದರ ಪ್ರಕಾರ, ಉತ್ತಮ ಮಳೆಯು ಗ್ರಾಮೀಣ ಬೇಡಿಕೆಯನ್ನು ಪೂರೈಸುತ್ತದೆ. ಆದರೆ  ಹಿಂದಿನ ಆರ್ಥಿಕ ವರ್ಷದಲ್ಲಿ ಉಂಟಾದ ಹವಾಮಾನದ ಪರಿಣಾಮ ಸಂಕಷ್ಟ ಉಂಟಾಗಿತ್ತು, ಇದೀಗ ಈ ಬಾರಿಯ ಮಳೆ  ಪುನರುಜ್ಜೀವನದ ಲಕ್ಷಣಗಳನ್ನು ಆರಂಭದಲ್ಲಿ ತೋರಿಸಿದೆ.ಮಳೆ ಉತ್ತಮವಾದರೆ ಬೆಳೆ ಉತ್ಪಾದನೆಯು ಉತ್ತಮವಾಗಿ ಆಹಾರದ ಮೂಲಕ ಉಂಟಾಗುವ ಹಣದುಬ್ಬರವನ್ನು ಕಡಿಮೆಗೊಳಿಸಬಹುದು.ಭಾರತ ಹವಾಮಾನ ಇಲಾಖೆ  ಈ ಬಾರಿ ಸಾಮಾನ್ಯಕ್ಕಿಂತ ಹೆಚ್ಚಿನ ನೈರುತ್ಯ ಮಾನ್ಸೂನ್‌ನ ಮುನ್ಸೂಚನೆಯನ್ನು ದೃಢಪಡಿಸಿದೆ, ಜೂನ್ ಮತ್ತು ಸೆಪ್ಟೆಂಬರ್ ನಡುವಿನ ಸರಾಸರಿ 106 ಪ್ರತಿಶತದಷ್ಟು ಮಳೆಯಾಗುತ್ತದೆ ಎಂದು ಹೇಳಿದೆ. ಹೀಗಾಗಿ ಈ ಬಾರಿಯ ಮಳೆಗಾಲ ನಿರೀಕ್ಷೆ ಉಂಟು ಮಾಡಿದೆ.

Advertisement

ಉಳುಮೆ ಮತ್ತು ಬಿತ್ತನೆಗೆ ಜೂನ್‌ನ ಸಾಮಾನ್ಯ ಮಳೆಯು ಕಾರಣವಾಗುತ್ತದೆ. ಆದರೆ ವಾಯುವ್ಯ ಮತ್ತು ಮಧ್ಯ ಭಾರತದಲ್ಲಿ  ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನವು ಸವಾಲುಗಳನ್ನು ಉಂಟುಮಾಡುತ್ತದೆ. ಹೆಚ್ಚಿನ ತಾಪಮಾನವು ಕಾರ್ಮಿಕರ ಲಭ್ಯತೆ ಮತ್ತು ಜಲಾಶಯದ ನೀರಿನ ಮಟ್ಟದ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಜೂನ್‌ ತಿಂಗಳ ಮಳೆಯು ಉಳುಮೆ ಹಾಗೂ ಬಿತ್ತನೆಯ ಮೇಲೆ ಪರಿಣಾಮ ಬೀರುತ್ತದೆ. ಮಳೆಯಾದರೆ ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆ, ಬಿತ್ತನೆಯೂ ನಡೆಯುತ್ತದೆ.

ಜುಲೈ ಮತ್ತು ಆಗಸ್ಟ್ ಮಳೆ ಬಿತ್ತನೆ ಚಟುವಟಿಕೆಯ ನಂತರ ಕೆಲಸಗಳಿಗೆ ಪ್ರಮುಖವಾಗಿದೆ. ಇಲ್ಲಿನ ಮಳೆಯ ಸಂಕಷ್ಟಗಳು ಬೆಳೆ ಇಳುವರಿ ಮೇಲೆ ಪರಿಣಾಮ ಬೀರಬಹುದು, ವಿಶೇಷವಾಗಿ ಕಳೆದ ವರ್ಷ ಮಳೆ ಕೊರತೆಯನ್ನು ಎದುರಿಸಿದ ಪ್ರದೇಶಗಳಲ್ಲಿ, ಉದಾಹರಣೆಗೆ ಜಾರ್ಖಂಡ್, ಬಿಹಾರ, ಪಶ್ಚಿಮ ಬಂಗಾಳ ಮತ್ತು ಒಡಿಶಾ ಮೊದಲಾದ ಕಡೆ ಇಳುವರಿಯಲ್ಲಿ ಕೊರತೆಯಾಗಿತ್ತು. ಹೀಗಾಗಿ ಮಳೆ ಹಂಚಿಕೆಯಲ್ಲಿ ಕೂಡಾ ಬದಲಾವಣೆಯಾದರೆ ಬಿತ್ತನೆ ಹಾಗೂ ಆ ನಂತರ ಎಲ್ಲಾ ಕಡೆಯೂ ಸಂಕಷ್ಟವಾಗುತ್ತದೆ. ಕಳೆದ ವರ್ಷ ಅಸಮರ್ಪಕ ಮಾನ್ಸೂನ್‌  ಅನೇಕ ಬೆಳೆಗಳ ಮೇಲೆ ಪರಿಣಾಮ ಬೀರಿತು. ಸತತ ಎರಡನೇ ವರ್ಷ ಮಳೆ ಕೊರತೆಯನ್ನು ಎದುರಿಸುತ್ತಿರುವ ಪ್ರದೇಶಗಳು ಈ ಬಾರಿಯೂ ಸಂಕಷ್ಟ ಎದುರಿಸಬಹುದು.

Advertisement

ಏಪ್ರಿಲ್ ಮತ್ತು ಮೇ ಈಗಾಗಲೇ ಸಾಮಾನ್ಯಕ್ಕಿಂತ ಹೆಚ್ಚಿನ ಹೀಟ್‌ ವೇವ್ ಅನುಭವಿಸಿದೆ, ಜೂನ್‌ ತಿಂಗಳು ಅದನ್ನು ಮಳೆಯಿಂದ ಸರಿಗಟ್ಟುವ ನಿರೀಕ್ಷೆ ಇತ್ತು. ಆದರೆ ಮಳೆಯಾದರೂ ಹಲವು ಕಡೆ ತಾಪಮಾನ ಕಡಿಮೆಯಾಗಿಲ್ಲ.ಹೀಟ್‌ ವೇವ್ ಕಾರಣದಿಂದ  ಪ್ರಮುಖ ಬೆಳೆಗಳು , ಬೇಸಿಗೆಯ ತರಕಾರಿಗಳ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ಈಗ ರೈತರು ಕೂಡಾ ಹವಾಮಾನಕ್ಕೆ ಸರಿ ಹೊಂದುವ ಬೆಳೆಯ ಕಡೆಗೆ ಗಮನಹರಿಸುವ ಮೂಲಕ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ರೈತರಿಗೆ ಸರಿಯಾದ ಸಮಯದಲ್ಲಿ ಮಳೆ ಸಿಕ್ಕಿದರೆ ಗ್ರಾಮೀಣ ಉದ್ಯೋಗವೂ, ಗ್ರಾಮೀಣ ಬೇಡಿಕೆಯೂ ಈಡೇರುತ್ತದೆ. ಹೀಗಾಗಿ ಮಳೆ, ಹವಾಮಾನವೇ ಪ್ರಮುಖವಾದ ವಿಷಯ ಈಗ.

Data Source: IANS

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 24.11.2024 | ರಾಜ್ಯದಲ್ಲಿ ಒಣಹವೆ ಮುಂದುವರಿಕೆ | ದೂರವಾದ ಮಳೆಯ ಸಾಧ್ಯತೆ
November 24, 2024
12:05 PM
by: ಸಾಯಿಶೇಖರ್ ಕರಿಕಳ
ಅಡಿಕೆಯ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆ ಹೇಗೆ ? | ವಿಜ್ಞಾನಿ ಡಾ.ಭವಿಷ್ಯ ಅವರಿಂದ ಮಾಹಿತಿ |
November 24, 2024
7:50 AM
by: ದ ರೂರಲ್ ಮಿರರ್.ಕಾಂ
ಅಡಿಕೆ ಎಲೆಚುಕ್ಕಿರೋಗ ನಿರ್ವಹಣಾ ವಿಧಾನಗಳು ಹೇಗೆ..?
November 24, 2024
7:09 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 23-11-2024 | ರಾಜ್ಯದಲ್ಲಿ ಒಣಹವೆ ಮುಂದುವರಿಕೆ | ನ.28 ರಿಂದ ಕೆಲವು ಕಡೆ ಮಳೆ ಸಾಧ್ಯತೆ |
November 23, 2024
12:23 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror