ಉಪ್ಪಿನಕಾಯಿ ಶಬ್ದ ಕಿವಿಗೆ ಬೀಳ್ಳುತ್ತಿದ್ದಂತೆ ಬಾಯೆಲ್ಲಾ ನೀರಾಗುತ್ತೆ. ಏನಿಲ್ಲ ಅಂದ್ರು ಪರವಾಗಿಲ್ಲ. ಉಪ್ಪಿನಕಾಯಿ ಇದ್ರೆ ಮಲೆನಾಡು ಮಂದಿಯ ಕುಚಲಕ್ಕಿ ಊಟ ಸೊಗಸಾಗುತ್ತದೆ. ಕೇವಲ ಕುಚಲಕ್ಕಿ ಉಣ್ಣುವವರಿಗೆ ಮಾತ್ರವಲ್ಲ ಉಪ್ಪಿನಕಾಯಿ ನಮ್ಮ ದೇಶಾದ್ಯಂತ ಊಟದ ಜೊತೆಗೆ ಉಪಯೋಗಿಸುವವರು ಹೆಚ್ಚು. ಈಚೆಗೆ ಈ ಉದ್ಯಮವೂ ವಿಸ್ತಾರವಾಗಿ ಬೆಳೆದಿದೆ.
ದೇಶದಲ್ಲಿ ವಿವಿಧ ಬಗೆಯ ಉಪ್ಪಿನಕಾಯಿಗಳನ್ನು ತಯಾರು ಮಾಡಲಾಗುತ್ತದೆ. ಒಂದೊಂದು ಕಡೆ ಒಂದೊಂದು ವಗೆಯ ಉಪ್ಪಿನಕಾಯಿ ರುಚಿ. ಅಪ್ಪೆ ಮಿಡಿಯಿಂದ ತೊಡಗಿ ವಿವಿಧ ಮಾವಿನ ಮಿಡಿ ಉಪ್ಪಿನಕಾಯಿ ಭಾರೀ ಪೇಮಸ್ಸು. ಅದಾದ ನಂತರ ಇನ್ನೂ ಹಲವು ಬಗೆಯ ಉಪ್ಪಿನಕಾಯಿಗೆ ಅದರದ್ದೇ ಆದ ಸ್ಥಾನ ಇದೆ. ಬಾಯಿಗೂ ರುಚಿಯಾದ, ಉದ್ಯಮಕ್ಕೂ ಸುಲಭವಾಗಿರುವ ಉಪ್ಪಿನಕಾಯಿ ಸಂರಕ್ಷಣೆಯೇ ದೊಡ್ಡ ತಲೆನೋವು. ಮಾವಿನಕಾಯಿ ಉಪ್ಪಿನಕಾಯಿ ಕೆಡದಂತೆ ತುಂಬಾ ದಿನಗಳ ಕಾಲ ರುಚಿಯಾಗಿರಬೇಕೆಂದರೆ ಕೆಲವೊಂದು ವಿಧಾನಗಳನ್ನು ಅನುಸರಿಸಬೇಕು.ಅದರಲ್ಲಿ ಕೆಲವೊಂದು ವಿಧಾನ ಇಲ್ಲಿದೆ…
ಉಪ್ಪಿನಕಾಯಿ ಮಾಡಲು ಸರಿಯಾದ ಹಸಿ,ಎಳೆ ಮಾವಿನಕಾಯಿಗಳನ್ನು ಆರಿಸುವುದು ಬಹಳ ಮುಖ್ಯ. ಕಾಯಿ ಮಾವಿನಿಂದ ಮಾಡಿದ ಉಪ್ಪಿನಕಾಯಿ ತುಂಬಾ ರುಚಿಕರವಾಗಿರುತ್ತದೆ. ಮಾವು ಸಂಪೂರ್ಣವಾಗಿ ಗಟ್ಟಿಯಾಗಿರಬೇಕು ಮತ್ತು ಬಲಿಯದಂತಿರಬೇಕು. ಮಾವಿನಕಾಯಿ ಸ್ವಲ್ಪ ಮಾಗಿದ್ದರೂ ಉಪ್ಪಿನಕಾಯಿಗೆ ಬಳಸಬಾರದು. ಮಾವಿನ ಉಪ್ಪಿನಕಾಯಿ ಅನ್ನು ಶೇಖರಿಸಿಡಲು ಗಾಜಿನ ಜಾರ್ ಅಥವಾ ಪಿಂಗಾಡಿ ಜಾರ್ ಬಳಸಿ. ಅನೇಕರು ಉಪ್ಪಿನಕಾಯಿಯನ್ನು ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಹಾಕುತ್ತಾರೆ, ಆದರೆ ಇದರಿಂದ ಹಾಳಾಗುವ ಅಪಾಯವು ಹೆಚ್ಚು.
ಗಾಜಿನ ಜಾಡಿಗಳಲ್ಲಿ ಉಪ್ಪಿನಕಾಯಿ ದೀರ್ಘಕಾಲದವರೆಗೆ ಚೆನ್ನಾಗಿರುತ್ತದೆ. ಮಾವಿನ ಉಪ್ಪಿನಕಾಯಿ ಹಾಕುವ ಪಾತ್ರೆ ಅಥವಾ ಜಾರ್ ಸಂಪೂರ್ಣವಾಗಿ ಬ್ಯಾಕ್ಟೀರಿಯಾ ಮುಕ್ತವಾಗಿರಬೇಕು. ಇದಕ್ಕಾಗಿ ಜಾರ್ ಅನ್ನು ಸರಿಯಾಗಿ ಸ್ವಚ್ಛಗೊಳಿಸಬೇಕು. ಜಾರ್ ಅನ್ನು ಬಿಸಿಲಿನಲ್ಲಿ ಒಣಗಿಸಿ ಬಳಸಿ. ನೀವು ಮಾವಿನ ಉಪ್ಪಿನಕಾಯಿಯನ್ನು ದೀರ್ಘಕಾಲದವರೆಗೆ ಚೆನ್ನಾಗಿರಬೇಕು. ಅದರ ರುಚಿ ಕೆಡಬಾರದು ಎಂದರೆ ಯಾವಾಗಲೂ ಸಾಸಿವೆ ಎಣ್ಣೆಯನ್ನು ಬಳಸಬೇಕು ಎಂಬುವುದನ್ನು ನೆನಪಿನಲ್ಲಿಡಿ.
ಹಲವೆಡೆ ಸಾಸಿವೆ ಎಣ್ಣೆಯ ಹೊರತಾಗಿ ಇತರ ಎಣ್ಣೆಗಳಲ್ಲಿ ಉಪ್ಪಿನಕಾಯಿ ಹಾಕಲಾಗುತ್ತದೆ, ಆದರೆ ಸಾಸಿವೆ ಎಣ್ಣೆಯಲ್ಲಿ ಉಪ್ಪಿನಕಾಯಿ ದೀರ್ಘಕಾಲ ಉಳಿಯುತ್ತದೆ. ಉಪ್ಪಿನಕಾಯಿಯನ್ನು ಯಾವಾಗಲೂ ಗಾಳಿಯಾಡದ ಬಾಕ್ಸ್ ಅಥವಾ ಜಾರ್ ನಲ್ಲಿ ಇರಿಸಿ. ನೀವು ಉಪ್ಪಿನಕಾಯಿಯನ್ನು ತೆಗೆಯಲು ಬಯಸಿದಾಗ ಶುದ್ಧವಾದ ಸ್ಟೀಲ್ ಚಮಚವನ್ನು ಮಾತ್ರ ಬಳಸಿ.