ಮೊದಲ ಬಾರಿಗೆ 5,000 ಕೋಟಿ ರೂಪಾಯಿ ದಾಟಿದ ತಿರುಪತಿ ದೇವಸ್ಥಾನದ ವಾರ್ಷಿಕ ಬಜೆಟ್ |

January 31, 2024
9:56 PM
ವಿಶ್ವದ ಅತಿ ಶ್ರೀಮಂತ ದೇವಸ್ಥಾನಗಳಲ್ಲಿ ಒಂದಾದ ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನದ ವರ್ಷದ ಬಜೆಟ್‌ ಮಂಡನೆಯಾಗಿದೆ. 5,142 ಕೋಟಿ ರೂ.ಗಳ ಅಂದಾಜು ವೆಚ್ಚದೊಂದಿಗೆ 2024-25ರ ವಾರ್ಷಿಕ ಬಜೆಟ್‌ ಅನುಮೋದಿಸಲಾಗಿದೆ.

ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಟ್ರಸ್ಟ್ ಬೋರ್ಡ್ ಸೋಮವಾರ 2024-2025 ರ ಬಜೆಟ್ ಅಂದಾಜುಗಳಿಗೆ 5,141.74 ಕೋಟಿ ರೂ.ಗಳ  ವಾರ್ಷಿಕ ಬಜೆಟ್‌ ಅನ್ನು ಅನುಮೋದಿಸಲಾಗಿದೆ. ಇದೇ ಮೊದಲ ಬಾರಿಗೆ ವಾರ್ಷಿಕ ಬಜೆಟ್ 5,000 ಕೋಟಿ ಗಡಿ ದಾಟಿದೆ.

ಹುಂಡಿ ಸಂಗ್ರಹಕ್ಕೆ ಬಜೆಟ್ ಅಂದಾಜು 1611 ಕೋಟಿ ರೂಪಾಯಿ ಅಂದಾಜಿಸಲಾಗಿದೆ. ಟ್ರಸ್ಟ್ 14,000 ಕೋಟಿ ರೂ.ಗಿಂತಲೂ ಹೆಚ್ಚು ಸ್ಥಿರ ಠೇವಣಿಗಳನ್ನು ಹೊಂದಿದೆ ಮತ್ತು ಬಡ್ಡಿಯಾಗಿ ರೂ.1,167 ಕೋಟಿ ಗಳಿಸುವ ನಿರೀಕ್ಷೆಯಿದೆ. ಪ್ರಸಾದ ಮಾರಾಟದ ಮೂಲಕ ರೂ.600 ಕೋಟಿ, ದರ್ಶನ ಟಿಕೆಟ್ ಮಾರಾಟದ ಮೂಲಕ ರೂ.338 ಕೋಟಿ, ಉದ್ಯೋಗಿಗಳಿಗೆ ಸಾಲ ಮತ್ತು ಮುಂಗಡಗಳ ಮೂಲಕ ರೂ.246.39 ಕೋಟಿ, ಇಎಂಡಿಗಳು, ಭದ್ರತಾ ಠೇವಣಿ ಇತ್ಯಾದಿಗಳ ಮೂಲಕ ರೂ.129 ಕೋಟಿ, ಇತರ ಬಂಡವಾಳ ರಶೀದಿಗಳ ಮೂಲಕ ರೂ.150 ಕೋಟಿ ಆದಾಯವನ್ನು ಟಿಟಿಡಿ ನಿರೀಕ್ಷಿಸುತ್ತಿದೆ.

ಈ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 51 ವೇದ ಶಿಕ್ಷಕರ ವೇತನವನ್ನು 35,000 ರೂ.ಗಳಿಂದ 54,000 ರೂ.ಗೆ ಹೆಚ್ಚಿಸಲು ಮಂಡಳಿ ನಿರ್ಧರಿಸಿದೆ.ತಿರುಮಲ ತಿರುಪತಿ ದೇವಸ್ಥಾನಗಳು (ಟಿಟಿಡಿ) ರಾಮಮಂದಿರ ಉದ್ಘಾಟನಾ ಸಮಾರಂಭಕ್ಕಾಗಿ ಒಂದು ಲಕ್ಷ ತಿರುಪತಿ ಲಡ್ಡುಗಳನ್ನು ಅಯೋಧ್ಯೆಗೆ ರವಾನಿಸಿದೆ.

Tirumala temple body’s budget crosses whopping Rs 5,000 crore.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ನಗರೀಕರಣದ ನಡುವೆ ಪ್ರಕೃತಿ, ವನ್ಯಜೀವಿಗಳ ಸಮತೋಲನ ಕಾಪಾಡುವುದು ಆದ್ಯತೆಯಾಗಲಿ
October 10, 2026
2:55 PM
by: ದ ರೂರಲ್ ಮಿರರ್.ಕಾಂ
ಕೊರಿಯರ್ ಮೂಲಕ ಮಾದಕ ದ್ರವ್ಯ ಸಾಗಾಟ..! ಮಂಗಳೂರಿನಲ್ಲಿ 1.58 ಕೋಟಿ ರೂ. ಮೌಲ್ಯದ ಎಂಡಿಎಂಎ ವಶ
October 10, 2026
2:51 PM
by: ದ ರೂರಲ್ ಮಿರರ್.ಕಾಂ
ಡಿಸೆಂಬರ್‌ನಲ್ಲಿ ಮತ್ತಷ್ಟು ತೀವ್ರಗೊಳ್ಳಲಿದೆಯೇ ಎಲ್‌ನಿನೋ..? ಬರ, ಪ್ರವಾಹದ ಅಪಾಯದ ಬಗ್ಗೆ ವಿಶ್ವ ಹವಾಮಾನ ಸಂಸ್ಥೆ ಎಚ್ಚರಿಕೆ
October 10, 2026
2:44 PM
by: ದ ರೂರಲ್ ಮಿರರ್.ಕಾಂ
ಉಪ್ಪಿನಂಗಡಿಯ ಮೌಲ್ಯಾಧಾರಿತ ಶಿಕ್ಷಣ ಕ್ರಾಂತಿಯ ಹರಿಕಾರ ಯು.ಜಿ. ರಾಧ ಭಟ್ – ಗ್ರಾಮೀಣ ನೆಲದಲ್ಲಿ ಅರಳಿದ ಶ್ರೀರಾಮ ಶಾಲೆಯ ಯಶೋಗಾಥೆ
October 10, 2026
2:06 PM
by: ಅರುಣ್‌ ಕುಮಾರ್ ಕಾಂಚೋಡು

You cannot copy content of this page - Copyright -The Rural Mirror