ಹಿರಿಯ ನಾಗರಿಕರಿಗೆ ತಿರುಮಲ ವೆಂಕಟೇಶ್ವರ ಸ್ವಾಮಿಯ ದರ್ಶನ ಇನ್ನು ಸುಲಭವಾಗಲಿದೆ. ಹಿರಿಯ ನಾಗರಿಕರಿಗಾಗಿಯೇ ಎರಡು ಸ್ಲಾಟ್‌ಗಳನ್ನು ಟಿಟಿಡಿ ಮೀಸಲಿಟ್ಟಿದೆ. ಪ್ರತಿ ದಿನ ಬೆಳಗ್ಗೆ 10 ಗಂಟೆ, ಮಧ್ಯಾಹ್ನ 3 ಗಂಟೆ ಸ್ಲಾಟ್‌ನಲ್ಲಿ ವಿಶೇಷವಾಗಿ ಹಿರಿಯ ನಾಗರಿಕರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.ಇದಕ್ಕಾಗಿ ವಯಸ್ಸು ನಮೂದಿಸಿರುವ ಪೋಟೋ ಇರುವ ಗುರುತಿನ ಪತ್ರ(ಆಧಾರ್)ವನ್ನು ಕೌಂಟರ್‌ನಲ್ಲಿ ಅವರು ತೋರಿಸಬೇಕಾಗುವುದು ಕಡ್ಡಾಯ.
ದರ್ಶನ ಉಚಿತವಾಗಿದೆ. ಜೊತೆಗೆ ಒಬ್ಬರಿಗೆ ಎರಡು ಲಾಡು ಪ್ರಸಾದಕ್ಕೆ 20 ರೂ. ಹಾಗೂ ಹೆಚ್ಚುವರಿ ಪ್ರತಿ ಲಾಡುಗೆ 25 ರೂ. ನೀಡಬೇಕಾಗುತ್ತದೆ. ಹಿರಿಯ ನಾಗರಿಕರಿಗಾಗಿ ವಿಶೇಷ ಪಥ ನಿರ್ಮಿಸಲಾಗಿದೆ. ಅವರು ಮೆಟ್ಟಿಲು ಹತ್ತಬೇಕಾಗಿಲ್ಲ. ದರ್ಶನದ ವೇಳೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಕಾರ್ ಪಾರ್ಕಿಂಗ್‌ನಿಂದ ದೇಗುಲ ಬಾಗಿಲಿಗೆ ಕರೆತರಲು ಬ್ಯಾಟರಿ ಕಾರ್ ವ್ಯವಸ್ಥೆ ಮಾಡಲಾಗಿದೆ. ಹಿರಿಯ ನಾಗರಿಕರ ಸ್ಲಾಟ್ 30 ನಿಮಿಷಗಳು ಇದ್ದು, ಅಲ್ಲಿಯವರೆಗೆ ಇತರರ ದರ್ಶನ ಸ್ಥಗಿತಗೊಳಿಸಲಾಗುವುದು ಎಂದು ಟಿಟಿಡಿ ತಿಳಿಸಿದೆ.

ಮಿರರ್ ಡೆಸ್ಕ್ – ಮಿರರ್ ನ್ಯೂಸ್ ನೆಟ್ವರ್ಕ್
Be the first to comment on "ಇನ್ನು ಹಿರಿಯ ನಾಗರಿಕರಿಗೆ ತಿರುಮಲ ವೆಂಕಟೇಶ್ವರ ಸ್ವಾಮಿಯ ದರ್ಶನ ಸುಲಭ"