ತಿರುಪತಿಯಲ್ಲಿ ಭೀಕರ ಮಳೆ | ತಿರುಮಲ ಘಾಟ್‌ ರಸ್ತೆ ಬಂದ್ | ನೀರಿನಲ್ಲಿ ಕೊಚ್ಚಿ ಹೋದ ವಾಹನಗಳು..! |

November 18, 2021
11:47 PM

ವಾಯುಭಾರ ಕುಸಿತದ ಕಾರಣದಿಂದ ಭಾರೀ ಮಳೆಯ ಪ್ರಭಾವ ಆಂಧ್ರ ಪ್ರದೇಶದ ಮೇಲೂ ಬೀರಿದ್ದು ತಿರುಪತಿ ಹಾಗೂ ನೆಲ್ಲೂರು ನಗರದಲ್ಲಿ ವಿಪರೀತ ಮಳೆಯಾಗಿದೆ. ಭಾರೀ ಮಳೆಯ ಕಾರಣದಿಂದ ಭಾರೀ ಮಳೆಯಿಂದಾಗಿ ತಿರುಮಲ ಬೆಟ್ಟ ಘಾಟಿ ರಸ್ತೆ ಬಂದ್ ಮಾಡಲಾಗಿದೆ. 

 

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ತಿರುಪತಿ ಮತ್ತು ಚಿತ್ತೂರಿನಲ್ಲಿ ಭಾರೀ ಮಳೆಯಾಗಿದೆ. ತಿರುಪತಿ-ಕಡಪ ಹೆದ್ದಾರಿಯಲ್ಲಿ ವ್ಯಕ್ತಿಯೊಬ್ಬರು ಪ್ರವಾಹದಲ್ಲಿ ಕೊಚ್ಚಿಹೋಗುತ್ತಿದ್ದ ದೃಶ್ಯ ಇದೀಗ ಕಂಡುಬಂದಿದೆ.  ಈ ನಡುವೆ ತಿರುಪತಿ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ನೀರು ಉಕ್ಕಿ ಹರಿದು  ವಾಹನಗಳು, ಹಸುಗಳು ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ದೃಶ್ಯ ಕಂಡುಬಂದಿದೆ. ಬಹುತೇಕ ಎಲ್ಲ ಪ್ರದೇಶಗಳು ಜಲಾವೃತವಾಗಿರುವುದಷ್ಟೇ ಅಲ್ಲದೆ, ನಗರದ ರಸ್ತೆಗಳಲ್ಲಿ ಕೃತಕ ಹೊಳೆಗಳು ಸೃಷ್ಟಿಯಾಗಿವೆ.

ಆಂಧ್ರ ಪ್ರದೇಶದದ ಕರಾವಳಿ ಹಾಗೂ ಇತರ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಸುತ್ತ ಮುತ್ತಲ ಜಿಲ್ಲೆಗಳಲ್ಲೂ ಮಳೆ ಆರ್ಭಟ ಜೋರಾಗಿಯೇ ಇದೆ.  ತಿರುಪತಿ ಭಾಗಶಃ ಮುಳುಗಿದೆ.ತಿರುಪತಿಯಲ್ಲಿ ವಾಸಿಸುತ್ತಿದ್ದ ಜನರು 1996 ರಿಂದ ಈ ದೊಡ್ಡ ಪ್ರವಾಹವನ್ನು ನೋಡಿಲ್ಲ ಎಂದು ಹೇಳಿಕೊಂಡಿದ್ದಾರೆ.  ಅಕ್ಷರಶಃ ನಗರದ ಪ್ರತಿಯೊಂದು ರಸ್ತೆಗಳು ಜಲಾವೃತವಾಗಿವೆ. ಇಂದು ರಾತ್ರಿ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ, ಈಗಾಗಲೇ ಹಲವು ಕಡೆ ಭೂಕುಸಿತ ಕೂಡಾ ಸಂಭವಿಸಿದೆ.

 

ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ತಿರುಪತಿ ಸಮೀಪದ ತಿರುಮಲದಲ್ಲಿರುವ ಪುರಾತನ ವೆಂಕಟೇಶ್ವರ ದೇಗುಲಕ್ಕೆ ಹೋಗುವ ಘಾಟ್ ರಸ್ತೆಗಳನ್ನು ಗುರುವಾರ ಸಂಜೆಯಿಂದ ಅನಿರ್ದಿಷ್ಟಾವಧಿಗೆ ವಾಹನ ಸಂಚಾರಕ್ಕೆ ಮುಚ್ಚಲಾಗಿದೆ ಹಾಗೂ ಬೆಟ್ಟ-ದೇವಾಲಯಕ್ಕೆ ಹೋಗುವ ಮೆಟ್ಟಿಲನ್ನು ಸಹ ಮುಚ್ಚಲಾಗಿದೆ ಎಂದು ದೇಗುಲದ ಅಧಿಕಾರಿ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಜೂನ್‌ನಲ್ಲಿ 40% ಮಳೆ ಕೊರತೆ – ಜುಲೈನಲ್ಲಿ ಮುಂಗಾರು ಭರ್ಜರಿ..! ದೇಶಾದ್ಯಂತ ಮಳೆ ಚುರುಕು
July 6, 2026
9:10 PM
by: ದ ರೂರಲ್ ಮಿರರ್.ಕಾಂ
ರಾಜ್ಯದ 9 ಜಿಲ್ಲೆಗಳಲ್ಲಿ ಜುಲೈ 9 ರಿಂದ 11ರವರೆಗೆ ಭಾರೀ ಮಳೆ ಸಾಧ್ಯತೆ – IMD ಯೆಲ್ಲೋ ಅಲರ್ಟ್
July 6, 2026
8:41 PM
by: ದ ರೂರಲ್ ಮಿರರ್.ಕಾಂ
E20 ಪೆಟ್ರೋಲ್‌ನಿಂದ ಮೈಲೇಜ್ ಕಡಿಮೆಯಾಗುತ್ತದೆಯೇ? ಹಳೆಯ ವಾಹನಗಳಿಗೆ ಅಪಾಯ ಇದೆಯೇ?
July 6, 2026
3:59 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 06-07-2026 | ಕರ್ನಾಟಕದಲ್ಲಿ ಮಳೆ ಮತ್ತಷ್ಟು ಕಡಿಮೆಯಾಗುವ ಸೂಚನೆ | ಜುಲೈ 10ರಿಂದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣ ಸಾಧ್ಯತೆ
July 6, 2026
3:08 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror