ತಿರುಪತಿ ದೇವಾಲಯದಲ್ಲಿ ಅ.25 ಮತ್ತು ನ.8 ರಂದು ಬಾಗಿಲು ತೆರೆಯುವುದಿಲ್ಲ| ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶವಿಲ್ಲ

October 12, 2022
2:54 PM

ತಿರುಮಲ ವೆಂಕಟೇಶ್ವರ ದೇವಸ್ಥಾನ ಅಕ್ಟೋಬರ್​ 25 ಮತ್ತು ನವೆಂಬರ್​ 8 ರಂದು ಮುಂಜಾನೆಯಿಂದ ಸಂಜೆವರೆಗೆ ಬಾಗಿಲು ತೆರೆಯುವುದಿಲ್ಲ. ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂದು ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನಂ) ಅಧಿಕಾರಿ ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.

Advertisement
Advertisement

ಈ ಎರಡೂ ದಿನ ಗ್ರಹಣ ಇರುವ ಕಾರಣಕ್ಕೆ ದೇವಸ್ಥಾನದಲ್ಲಿ ಬೆಳಗ್ಗೆಯಿಂದ ದೇವರ ದರ್ಶನ, ಪೂಜೆಗೆ ಅವಕಾಶ ಇಲ್ಲ. ಅಕ್ಟೋಬರ್​ 25ರಂದು ಸೂರ್ಯಗ್ರಹಣ ಇರುವ ಹಿನ್ನೆಲೆ ಬೆಳಗ್ಗೆ 8.11ರಿಂದ ಸಂಜೆ 7.30ರವರೆಗೆ ದೇಗುಲದ ಬಾಗಿಲು ಮುಚ್ಚಿರುತ್ತದೆ. 7.30ರ ನಂತರ ಭಕ್ತರು ಪ್ರಾರ್ಥನೆ ಸಲ್ಲಿಸಲು ದೇವಾಲಯಕ್ಕೆ ಬರಬಹುದಾಗಿದೆ.

Advertisement
Advertisement

ಹಾಗೇ, ನವೆಂಬರ್​ 8ರಂದು ಚಂದ್ರಗ್ರಹಣ ಇರುವ ಕಾರಣ ಬೆಳಗ್ಗೆ 8.40ರಿಂದ ಸಂಜೆ 7.20ರವರೆಗೆ ತಿರುಪತಿ ದೇವಸ್ಥಾನದ ಬಾಗಿಲು ಮುಚ್ಚಿರುತ್ತದೆ.

300 ರೂಪಾಯಿಯ ವಿಶೇಷ ಪ್ರವೇಶ ದರ್ಶನಂ, ಅರ್ಜಿತಾ ಸೇವೆ, ಬ್ರಹ್ಮೋತ್ಸವ, ಕಲ್ಯಾಣೋತ್ಸವ, ಸಹಸ್ರ ದೀಪಾಲಂಕಾರ, ಉಂಜಲ್​ ಸೇವೆ ಸೇರಿ ಯಾವುದೇ ರೀತಿಯ ಪೂಜೆ, ಸೇವೆಗಳೂ ನಡೆಯುವುದಿಲ್ಲ ಎಂದೂ ಅಧಿಕಾರಿ ಹೇಳಿದ್ದಾಗಿ ವರದಿಯಾಗಿದೆ.

Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

Weather Mirror | 08-12-2023 | ಕೆಲವು ಕಡೆ ತುಂತುರು ಮಳೆ ಸಾಧ್ಯತೆ |
December 8, 2023
10:54 AM
by: ಸಾಯಿಶೇಖರ್ ಕರಿಕಳ
ಅಡಿಕೆ ಧಾರಣೆ ಹಾಗೂ ಕಳ್ಳತನ | ಅಡಿಕೆ ಕಳ್ಳತನಕ್ಕೆ ಮರವನ್ನೇ ಕಡಿದ ಕಳ್ಳರು…!
December 7, 2023
8:58 PM
by: ದ ರೂರಲ್ ಮಿರರ್.ಕಾಂ
ದೇಶದಲ್ಲಿ ಬೆಲೆ ಏರಿಕೆ ನಿಯಂತ್ರಿಸಲು ಸರ್ಕಾರದಿಂದ ಹೊಸ ಪ್ಲಾನ್‌ | ಮ್ಯಾನ್ಮಾರ್‌ನಿಂದ ಉದ್ದು, ತೊಗರಿ ಆಮದು ಮಾಡಿಕೊಳ್ಳಲು ನಿರ್ಧಾರ |
December 7, 2023
1:20 PM
by: The Rural Mirror ಸುದ್ದಿಜಾಲ
ಹವಾಮಾನ ಮತ್ತು ಆರೋಗ್ಯ ಕುರಿತಾದ COP28 ಘೋಷಣೆಗೆ ಸಹಿ ಹಾಕದ ಭಾರತ | ಇದರ ಹಿಂದಿನ ಭಾರತದ ಅಜೆಂಡಾ ಏನು..? |
December 7, 2023
12:52 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror