Advertisement
MIRROR FOCUS

ದೇಶದಲ್ಲಿ ಕೊರೋನಾ ನಿಯಂತ್ರಣಕ್ಕೆ ಪ್ರಧಾನಿಗಳು ಕುಕ್ಕೆ ಸುಬ್ರಹ್ಮಣ್ಯನ ದರ್ಶನ ಮಾಡಬೇಕು…..!! | ಜ್ಯೋತಿಷಿ ಪ್ರಕಾಶ್‌ ಅಮ್ಮಣ್ಣಾಯ ಭವಿಷ್ಯ |

Share
ದೇಶದಲ್ಲಿ  ಕೊರೋನಾ ಎರಡನೇ ಅಲೆ ವ್ಯಾಪಕವಾಗುತ್ತಿದೆ. ಕೊರೋನಾ ನಿಯಂತ್ರಣಕ್ಕೆ ದೇಶದಲ್ಲಿ ಇನ್ನಿಲ್ಲದ ಪ್ರಯತ್ನ ನಡೆಯುತ್ತಿದೆ. ಕೊರೋನಾ ವ್ಯಾಕ್ಸಿನೇಶನ್‌ ಒಂದು ಕಡೆ ನಡೆಯುತ್ತಿದ್ದರೆ ಮತ್ತೊಂದು ಕಡೆ ಮಾಸ್ಕ್ ಧರಿಸುವುದು ,ಸಾಮಾಜಿಕ ಅಂತರ  ಮೊದಲಾದ ಕಟ್ಟುನಿಟ್ಟಿನ ಕ್ರಮಗಳನ್ನು, ದಂಡ ಪ್ರಯೋಗಗಳೂ ನಡೆಯುತ್ತಿದೆ. ಆದರೆ ಆಧ್ಯಾತ್ಮಿಕ ದೇಶ ಭಾರತದಲ್ಲಿ  ಈಗೇನು ಮಾಡಬೇಕು ಎಂಬ ಬಗ್ಗೆ ಚರ್ಚೆ ಆರಂಭವಾಗಿದ್ದು ಜ್ಯೋತಿಷಿ ಪ್ರಕಾಶ್‌ ಅಮ್ಮಣ್ಣಾಯ ಜ್ಯೋತಿರ್ವಿಜ್ಞಾನಂ ಹೇಳುತ್ತಾರೆ, ದೇಶದ ಪ್ರಧಾನ ಮಂತ್ರಿ ಕುಕ್ಕೇ ಸುಬ್ರಹ್ಮಣ್ಯನ ದರ್ಶನ ಮಾಡಬೇಕು ಎಂದು.
ಆಧ್ಯಾತ್ಮಿಕ ದೇಶ ಭಾರತದಲ್ಲಿ  ಪ್ರಧಾನಿಗಳೂ ಪ್ರಮುಖವಾಗುತ್ತಾರೆ. ಈಗಾಗಲೇ ವಿವಿಧ ತೀರ್ಥ ಕ್ಷೇತ್ರಗಳ ದರ್ಶನ ಮಾಡಿರುವ ಪ್ರಧಾನಿಗಳು ಕುಕ್ಕೆ ಸುಬ್ರಹ್ಮಣ್ಯ ದೇವರನ್ನೂ ಭೇಟಿ ಮಾಡಬೇಕಂತೆ. ಕಳೆದ ವರ್ಷವೇ ಈ ಬಗ್ಗೆ ಬಿಜೆಪಿ ಮುಖಂಡರಿಗೆ ಈ ಬಗ್ಗೆ ಹೇಳಿದ್ದರಂತೆ. ಈ ಬಾರಿ ಮತ್ತೆ ನೆನಪಿಸಿದ್ದಾರೆ. ಪೂರ್ವ ಪ್ರತೀತಿ ಆಧಾರದಲ್ಲಿಯೇ ಈ ಮಾಹಿತಿ ನೀಡಿದ್ದಾಗಿ ಹೇಳುವ ಪ್ರಕಾಶ್‌ ಅಮ್ಮಣ್ಣಾಯರು, ರೋಗ ನಿರೋಧಕ ಶಕ್ತಿ ಇರುವುದು ಈ ಸೇನಾನಿಗೆ ಅಂದರೆ ಸುಬ್ರಹ್ಮಣ್ಯನಿಗೆ ಮಾತ್ರವೇ. ಯಾವುದೋ ಲಾಭ,ಕಾಟಾಚಾರಕ್ಕೆ ಅಲ್ಲಿ ಸುಬ್ರಹ್ಮಣ್ಯನ ಸಾನ್ನಿಧ್ಯ ಸೃಷ್ಟಿ ಆಗಲಿಲ್ಲ ಎಂದು ಪ್ರಕಾಶ್‌ ಅಮ್ಮಣ್ಣಾಯ ಹೇಳುತ್ತಾರೆ. ಈ ಬಗ್ಗೆ ತಮ್ಮ ಪೇಸ್‌ ಬುಕ್‌ ನಲ್ಲಿ ಕೂಡಾ ಅವರು ಬರೆದುಕೊಂಡಿದ್ದಾರೆ.
ಕಳೆದ ವರ್ಷವೇ ಈ ಬಗ್ಗೆ ಬಿಜೆಪಿ ಪಕ್ಷದ ಪಕ್ಷದ ವರಿಷ್ಟರಿಗೆ ಆಗಾಗ ಹೇಳಿದ್ದೆ, ದೇಶದ ಪ್ರಧಾನ ಮಂತ್ರಿ ಕುಕ್ಕೇ ಸುಬ್ರಹ್ಮಣ್ಯನ ದರ್ಶನ ಮಾಡಬೇಕು ಎಂದು. ಹಾಗಿದ್ದರೂ ಕಡೆಗಣಿಸಿದರು. ಇವರೆಲ್ಲ ಲಾಬಿ ಮಾಡಲು ಪ್ರಧಾನ ಮಂತ್ರಿಯವರ ಭೇಟಿ ಮಾಡುತ್ತಾರೆಯೇ ವಿನಃ ಇಂತಹ ಭಾವನಾತ್ಮಕ,ಪಾರಮಾರ್ಥಿಕ ವಿಚಾರದಲ್ಲಿ ಭೇಟಿ ಮಾಡುತ್ತಿಲ್ಲ. ದೇಶದ ಸ್ವಾಸ್ಥ್ಯಕ್ಕಾಗಿ ಹೇಳಿದ್ದೆ ಎಂದು ಪ್ರಕಾಶ್‌ ಅಮ್ಮಣ್ಣಾಯ ಹೇಳಿಕೊಂಡಿದ್ದಾರೆ.
ಪ್ರಕಾಶ್‌ ಅಮ್ಮಣ್ಣಾಯ ಅವರು ಈ ಹಿಂದೆ ರಾಜಕೀಯವಾಗಿ ಹಲವು ಭವಿಷ್ಯ ಹೇಳಿದ್ದು ಹೇಳಿದ್ದು ನಿಜವಾಗಿತ್ತು. ಹೀಗಾಗಿ ಇದೀಗ ಅವರು ಹೇಳಿರುವ ಭವಿಷ್ಯದ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಇದೀಗ ಕೊರೋನಾ ಎರಡನೇ ಅಲೆ ಹೆಚ್ಚುತ್ತಿರುವ ಈ ಸಂದರ್ಭ ಪ್ರಧಾನಿಗಳು ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಮಾಡುತ್ತಾರಾ ? ಎಂಬ ಪ್ರಶ್ನೆ ಇದೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 20.09.2026 |ಕರ್ನಾಟಕದಲ್ಲಿ ಸೆ.25ರವರೆಗೆ ಮಳೆಯ ಲಕ್ಷಣ: ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಸಾಧ್ಯತೆ

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಉ ತ್ತಮ ಮಳೆಯ…

15 hours ago

ಕರ್ನಾಟಕದಲ್ಲಿ ಮತ್ತೆ ಮಳೆ ಅಬ್ಬರ: ಸೆ.22ರಿಂದ ಇನ್ನಷ್ಟು ಚುರುಕು, 7 ದಿನಗಳ ಎಚ್ಚರಿಕೆ

ಕರ್ನಾಟಕದಲ್ಲಿ ಮಳೆಯ ಚಟುವಟಿಕೆ ಮತ್ತೆ ಹೆಚ್ಚಾಗುವ ಸೂಚನೆ ದೊರೆತಿದ್ದು, ಮುಂದಿನ ಏಳು ದಿನಗಳ…

20 hours ago

ತೆಂಗಿನಕಾಯಿ ರಫ್ತಿನಲ್ಲಿ ಭಾರತ ಶೇ.62ರಷ್ಟು ಏರಿಕೆ

ಭಾರತದ ತೆಂಗಿನಕಾಯಿ ರಫ್ತು ಮೌಲ್ಯ ಒಂದೇ ವರ್ಷದಲ್ಲಿ ಶೇ.62ರಷ್ಟು ಏರಿಕೆಯಾಗಿ ₹7,038 ಕೋಟಿಗೆ…

2 days ago

ಸಮುದ್ರ ಮಾರ್ಗದಲ್ಲಿ ಅಡಿಕೆ ಸಾಗಾಟ : ಒಡಿಶಾದ ಬಾಲಸೋರ್‌ನಲ್ಲಿ ₹2 ಕೋಟಿಗೂ ಅಧಿಕ ಅಡಿಕೆ ವಶ- ಅಡಿಕೆ ಜಾಲದ ಹಿಂದೆ ಬಿದ್ದಿರುವ ಪೊಲೀಸರು

ಒಡಿಶಾದ ಬಾಲಸೋರ್‌ನಲ್ಲಿ ಸಮುದ್ರ ಮಾರ್ಗದ ಮೂಲಕ ಅಡಿಕೆ ಸಾಗಾಟದ ಹಲವು ಪ್ರಕರಣಗಳು ಪತ್ತೆಯಾಗಿದ್ದು,…

2 days ago

ಹವಾಮಾನ ವರದಿ | 19-09-2026 | ಸೆ.22 ರಿಂದ ಮಳೆ ಹೆಚ್ಚಳದ ಸೂಚನೆ – ಬಂಗಾಳಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ

ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಮುಂದುವರಿಯುವ ಸೂಚನೆ ಇದ್ದು, ಸೆ.22ರಿಂದ ಕರಾವಳಿ–ಮಲೆನಾಡಿನಲ್ಲಿ ಮಳೆ…

2 days ago

ಗೋಮಯದಿಂದ ಗಣೇಶನ ಮೂರ್ತಿ – ದೇಶದಾದ್ಯಂತ ಸಾವಿರಾರು ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ವಿತರಣೆ

ತಂದೆಯ ನೆನಪಿಗಾಗಿ ಇಂದೋರ್‌ನ ವ್ಯಕ್ತಿಯೊಬ್ಬರು ಗೋಮಯದಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ತಯಾರಿಸಿ…

2 days ago