ಕೃಷಿ ಸಮುದಾಯದ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿ ಸುಧಾರಣೆಯ ಉದ್ದೇಶದಿಂದ ನಾಗಾಲ್ಯಾಂಡ್ ಲೋಟ್ಸು ಗ್ರಾಮದಲ್ಲಿ ಅಡಿಕೆ ಗಿಡಗಳನ್ನು ವಿತರಿಸಲಾಗಿದೆ. ಕೃಷಿ ವಿಜ್ಞಾನ ಕೇಂದ್ರ , ನಾಗಾಲ್ಯಾಂಡ್ ವಿಶ್ವವಿದ್ಯಾನಿಲಯ ಈ ಕಾರ್ಯಕ್ರಮ ಆಯೋಜನೆ ಮಾಡಿತ್ತು.
ರೈತ ಸಮುದಾಯಗಳ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ನಡೆಸಲಾಯಿತು.
ಇದೇ ವೇಳೆ ರೈತರಿಗೆ ಕೋಳಿ ಉತ್ಪಾದನೆ ಮತ್ತು ನಿರ್ವಹಣೆಯ ಕುರಿತು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಮಾಹಿತಿ ನೀಡಿದರು. ಮುಖ್ಯ ತಾಂತ್ರಿಕ ಅಧಿಕಾರಿ ಅವರಿಂದ ಅಡಿಕೆ ಮತ್ತು ಇತರ ಪ್ರಮುಖ ಬೆಳೆಗಳನ್ನು ಬಾಧಿಸುವ ವಿವಿಧ ರೀತಿಯ ಕೀಟಗಳು, ಅಡಿಕೆ ಕೃಷಿ ಮತ್ತು ನಿರ್ವಹಣೆ ಕುರಿತು ರೈತರಿಗೆ ತರಬೇತಿ ನೀಡಲಾಯಿತು. ಒಟ್ಟು 140 ರೈತರಿಗೆ ಅಡಿಕೆ ಗಿಡ ವಿತರಿಸಲಾಗಿದೆ.
ಅಡಿಕೆ ಬೆಳೆ ವಿಸ್ತರಣೆಯ ಆತಂಕದ ನಡುವೆ ಕೂಡಾ ನಾಗಾಲ್ಯಾಂಡ್ ಅಂತಹ ಪ್ರದೇಶದಲ್ಲಿಯೂ ಅಡಿಕೆ ಬೆಳೆ ವಿಸ್ತರಣೆಗೆ ಇಲಾಖೆಗಳು ರೈತರ ಆರ್ಥಿಕ ಸ್ಥಿತಿಗತಿ ಸುಧಾರಣೆಗೆಂದು ಅಡಿಕೆ ಬೆಳೆಗೆ ಪ್ರೋತ್ಸಾಹ ನೀಡುತ್ತಿರುವುದು ಕುತೂಹಲ ಮೂಡಿಸಿದೆ.