ಇಂದು ರಾಷ್ಟ್ರೀಯ ರೈತ ದಿನ | ರಾಷ್ಟ್ರ ನಿರ್ಮಾಣದಲ್ಲಿ ರೈತರ ಪಾತ್ರವೇ ದೊಡ್ಡದು |

December 23, 2024
12:14 PM
ಇಂದು ರಾಷ್ಟ್ರೀಯ ರೈತ ದಿನ. ಈ ದೇಶದಲ್ಲಿ ಕೃಷಿಯ ಪ್ರಾಧಾನ್ಯತೆ ಬಹಳಷ್ಟಿದೆ. ಕೃಷಿಗಾಗಿ , ರೈತರಿಗಾಗಿ ಸರ್ಕಾರವು ಏಕೆ ನೆರವು ನೀಡುತ್ತಿದೆ..? ರೈತ ಈ ದೇಶದಲ್ಲಿ ನೆಮ್ಮದಿಯಾಗಿದ್ದರೆ ಮಾತ್ರವೇ ದೇಶವೂ ನೆಮ್ಮದಿಯಾಗಿರಲು ಸಾಧ್ಯ. ಹೀಗಾಗಿ ರೈತರ ದಿನದಂದು ರೈತರ ಜವಾಬ್ದಾರಿ ಹಾಗೂ ಮಹತ್ವದ ಬಗ್ಗೆ ನೆನಪಿಸಿಕೊಳ್ಳಿ..

ಇಂದು ರಾಷ್ಟ್ರೀಯ ರೈತ ದಿನ. ರೈತರಿಗಾಗಿ ಒಂದು ದಿನ. ಆದರೆ ವಾಸ್ತವದಲ್ಲಿ ರೈತರಿಗೆ ಒಂದು ದಿನವಲ್ಲ, ವರ್ಷವಿಡೀ ರೈತರದ್ದೇ ದಿನ. ರೈತ ಈ ನಾಡಿನಲ್ಲಿ ನೆಮ್ಮದಿಯಾಗಿದ್ದರೆ ದೇಶವೂ ನೆಮ್ಮದಿಯಾಗಿರಲು ಸಾಧ್ಯವಾದೀತು. ಇಂದಿನ ಹವಾಮಾನ ಬದಲಾವಣೆಯ ಕಾರಣದಿಂದ ರೈತ ಅಸ್ಥಿರವಾಗುತ್ತಿದ್ದಾನೆ, ಈ ಕಾರಣದಿಂದ ದೇಶದ ಹಲವು ವ್ಯವಸ್ಥೆಗಳೂ ಅಸ್ಥಿರವಾಗುತ್ತಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ರೈತರಿಗಾಗಿ ವಿವಿಧ ಯೋಜನೆ ರೂಪಿಸಿ ರೈತರನ್ನು ಸಶಕ್ತರನ್ನಾಗಿಸುವ ಕೆಲಸ ನಡೆಸುತ್ತಿದೆ.…..ಮುಂದೆ ಓದಿ….

Advertisement

ರೈತರು, ಈ  ದೇಶದ ಜೀವನಾಡಿ ಮತ್ತು ಅನ್ನದಾತರು ಎಂದು ಪೂಜಿಸಲ್ಪಡುತ್ತಾರೆ. ಅವರು ಭಾರತದ ಸಮೃದ್ಧಿಯ ಅಡಿಪಾಯ. ಅವರ ನಿರಂತರ ಶ್ರಮವು ರಾಷ್ಟ್ರವನ್ನು ಪೋಷಿಸುತ್ತದೆ, ಗ್ರಾಮೀಣ ಆರ್ಥಿಕತೆಯನ್ನು ಉಳಿಸಿಕೊಳ್ಳುತ್ತದೆ ಹಾಗೂ ಬೆಳೆಸುತ್ತದೆ. ರಾಷ್ಟ್ರೀಯ ರೈತರ ದಿನವನ್ನು ಡಿಸೆಂಬರ್ 23 ರಂದು ಆಚರಿಸಲಾಗುತ್ತದೆ, ಅದೇ ದಿನ ಭಾರತದ ಐದನೇ ಪ್ರಧಾನ ಮಂತ್ರಿ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನವಾಗಿಯೂ ಗುರುತಿಸಿಕೊಂಡಿದೆ.

ದೇಶದಲ್ಲಿ ರೈತರ  ಪಾತ್ರವನ್ನು ಗುರುತಿಸಿ, ಭಾರತ ಸರ್ಕಾರವು ರೈತರ ಸಾಮಾಜಿಕ-ಆರ್ಥಿಕ ಉನ್ನತಿಯನ್ನು ಬೆಂಬಲಿಸಲು ಮತ್ತು ಸುಸ್ಥಿರ ಕೃಷಿ ಬೆಳವಣಿಗೆಗಾಗಿ ಹಲವು ಕ್ರಮಗಳನ್ನು ಕೈಗೊಂಡಿದೆ.  ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಕಿಸಾನ್ ಮನ್ಧನ್ ಯೋಜನೆ  ಸೇರಿದಂತೆ ಹಲವು ಕಾರ್ಯಕ್ರಮಗಳು ಆರ್ಥಿಕ ಭದ್ರತೆ, ಕೃಷಿ ಹಾನಿಯ ಪರಿಣಾಮ ತಗ್ಗಿಸುವಿಕೆಯ ಗುರಿಯನ್ನು ಹೊಂದಿವೆ.

ಭಾರತದ ಕೃಷಿ ಕ್ಷೇತ್ರವು ರಾಷ್ಟ್ರದ ಜನಸಂಖ್ಯೆಯ ಅರ್ಧದಷ್ಟು ಜನರಿಗೆ ಉದ್ಯೋಗ ನೀಡುತ್ತಿದೆ. ಇದು ದೇಶದ ಆರ್ಥಿಕತೆಯ ಮೂಲಾಧಾರವಾಗಿದೆ ಮತ್ತು ರಾಷ್ಟ್ರ ನಿರ್ಮಾಣದ ಪ್ರಮುಖ ಶಕ್ತಿಯಾಗಿದೆ. ದೇಶದ 328.7 ಮಿಲಿಯನ್ ಹೆಕ್ಟೇರ್‌ಗಳಲ್ಲಿ ಸರಿಸುಮಾರು 54.8% ರಷ್ಟು ಕೃಷಿ ಭೂಮಿ ಎಂದು ವರ್ಗೀಕರಿಸಲಾಗಿದೆ. ಹೀಗಾಗಿ ರೈತರು ಈ ದೇಶದ ಅಗತ್ಯ ವಲಯದ ತಳಹದಿಯಾಗಿದ್ದಾರೆ. ಅವರ ಪಾತ್ರವು ಕೇವಲ ಕೃಷಿಯಷ್ಟೇ ಅಲ್ಲ, ಅದರಿಂದ ಆಚೆಗೂ ಕೃಷಿಕರ ಪಾತ್ರ ಇದೆ. ಗ್ರಾಮೀಣ ಅಭಿವೃದ್ಧಿ ಮತ್ತು ರಾಷ್ಟ್ರನಿರ್ಮಾಣದಲ್ಲೂ ರೈತರ ಪಾಲು ದೊಡ್ಡದು. ಏಕೆಂದರೆ ಆಹಾರ ಭದ್ರತೆಯನ್ನು ಒದಗಿಸುವುದು ಹಾಗೂ ಲಕ್ಷಾಂತರ ಜನರ ಜೀವನೋಪಾಯವನ್ನೂ ಕೃಷಿ ಕಲ್ಪಿಸಿಕೊಡುತ್ತದೆ.

2023-24 ರಲ್ಲಿ, ದೇಶವು 332.2 ಮಿಲಿಯನ್ ಟನ್‌ಗಳ  ಒಟ್ಟು ಆಹಾರ ಧಾನ್ಯ ಉತ್ಪಾದನೆಯನ್ನು ಸಾಧಿಸಿದೆ. ಹಿಂದಿನ ವರ್ಷ  329.7 ಮಿಲಿಯನ್ ಟನ್‌ ಉತ್ಪಾದನೆಯಾಗಿತ್ತು. ಈ ಗಮನಾರ್ಹ ಬೆಳವಣಿಗೆಯು ರಾಷ್ಟ್ರಕ್ಕೆ ಆಹಾರ ಭದ್ರತೆಯನ್ನು ನೀಡುತ್ತಿದೆ.  ಹೀಗಾಗಿ ಕೃಷಿಕರ  ಪ್ರಯತ್ನಗಳು ಕೇವಲ ಬೆಳೆ-ಕೃಷಿಯ ಮಾತ್ರವಲ್ಲ ಎನ್ನುವುದು ಮತ್ತೆ ಖಚಿತಪಡಿಸುತ್ತವೆ. ಇದಕ್ಕಾಗಿಯೇ ಕೃಷಿ ಎನ್ನುವುದು ಈ ದೇಶದ ಮೊದಲ ಆದ್ಯತೆಯ ಉದ್ಯೋಗ, ಸೇವೆ ಹಾಗೂ ದೇಶದ ಕೆಲಸ.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಸಹಜ ಸಾವನ್ನಪ್ಪುವ ಕಾಡುಪ್ರಾಣಿಗಳನ್ನು ಸುಡುವಂತಿಲ್ಲ | ಪ್ರಕೃತಿ ಚಕ್ರ ಕಾಪಾಡಲು ಸಹಕಾರಿ | ರಾಜ್ಯ ಸರ್ಕಾರದಿಂದ ಸುತ್ತೋಲೆ
May 5, 2025
10:56 PM
by: ದ ರೂರಲ್ ಮಿರರ್.ಕಾಂ
ಬದರೀನಾಥ ಧಾಮ ಯಾತ್ರಾ ಆರಂಭ | ಭಾರೀ ಪ್ರಮಾಣದಲ್ಲಿ ಆಗಮಿಸಿರುವ ಭಕ್ತರು | ಸುರಕ್ಷತೆಗಾಗಿಅರೆಸೇನಾ ಪಡೆ ನಿಯೋಜನೆ
May 5, 2025
12:21 PM
by: The Rural Mirror ಸುದ್ದಿಜಾಲ
ಅರಣ್ಯ ಭೂಮಿ ಕಬಳಿಸಲು ಪ್ರಯತ್ನಿಸುತ್ತಿರುವವರ ವಿರುದ್ಧ ಕಾನೂನು ಕ್ರಮ – ಅರಣ್ಯ ಸಚಿವ ಈಶ್ವರ ಖಂಡ್ರೆ
May 5, 2025
12:02 PM
by: The Rural Mirror ಸುದ್ದಿಜಾಲ
ಅಡಿಕೆ ಧಾರಣೆ ಏರಿಕೆಗೆ ಕಾರಣ ಇದೆ | ಈಗ ಅಡಿಕೆ ಮಾರುಕಟ್ಟೆಗೆ ಅನ್ವಯಿಸುವ ಸಿದ್ಧಾಂತಗಳು ಯಾವುದು..?
May 5, 2025
6:52 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ

You cannot copy content of this page - Copyright -The Rural Mirror

Join Our Group