ಇಂದು ರಾಷ್ಟ್ರೀಯ ರೈತ ದಿನ. ರೈತರಿಗಾಗಿ ಒಂದು ದಿನ. ಆದರೆ ವಾಸ್ತವದಲ್ಲಿ ರೈತರಿಗೆ ಒಂದು ದಿನವಲ್ಲ, ವರ್ಷವಿಡೀ ರೈತರದ್ದೇ ದಿನ. ರೈತ ಈ ನಾಡಿನಲ್ಲಿ ನೆಮ್ಮದಿಯಾಗಿದ್ದರೆ ದೇಶವೂ ನೆಮ್ಮದಿಯಾಗಿರಲು ಸಾಧ್ಯವಾದೀತು. ಇಂದಿನ ಹವಾಮಾನ ಬದಲಾವಣೆಯ ಕಾರಣದಿಂದ ರೈತ ಅಸ್ಥಿರವಾಗುತ್ತಿದ್ದಾನೆ, ಈ ಕಾರಣದಿಂದ ದೇಶದ ಹಲವು ವ್ಯವಸ್ಥೆಗಳೂ ಅಸ್ಥಿರವಾಗುತ್ತಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ರೈತರಿಗಾಗಿ ವಿವಿಧ ಯೋಜನೆ ರೂಪಿಸಿ ರೈತರನ್ನು ಸಶಕ್ತರನ್ನಾಗಿಸುವ ಕೆಲಸ ನಡೆಸುತ್ತಿದೆ.…..ಮುಂದೆ ಓದಿ….
ರೈತರು, ಈ ದೇಶದ ಜೀವನಾಡಿ ಮತ್ತು ಅನ್ನದಾತರು ಎಂದು ಪೂಜಿಸಲ್ಪಡುತ್ತಾರೆ. ಅವರು ಭಾರತದ ಸಮೃದ್ಧಿಯ ಅಡಿಪಾಯ. ಅವರ ನಿರಂತರ ಶ್ರಮವು ರಾಷ್ಟ್ರವನ್ನು ಪೋಷಿಸುತ್ತದೆ, ಗ್ರಾಮೀಣ ಆರ್ಥಿಕತೆಯನ್ನು ಉಳಿಸಿಕೊಳ್ಳುತ್ತದೆ ಹಾಗೂ ಬೆಳೆಸುತ್ತದೆ. ರಾಷ್ಟ್ರೀಯ ರೈತರ ದಿನವನ್ನು ಡಿಸೆಂಬರ್ 23 ರಂದು ಆಚರಿಸಲಾಗುತ್ತದೆ, ಅದೇ ದಿನ ಭಾರತದ ಐದನೇ ಪ್ರಧಾನ ಮಂತ್ರಿ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನವಾಗಿಯೂ ಗುರುತಿಸಿಕೊಂಡಿದೆ.
ದೇಶದಲ್ಲಿ ರೈತರ ಪಾತ್ರವನ್ನು ಗುರುತಿಸಿ, ಭಾರತ ಸರ್ಕಾರವು ರೈತರ ಸಾಮಾಜಿಕ-ಆರ್ಥಿಕ ಉನ್ನತಿಯನ್ನು ಬೆಂಬಲಿಸಲು ಮತ್ತು ಸುಸ್ಥಿರ ಕೃಷಿ ಬೆಳವಣಿಗೆಗಾಗಿ ಹಲವು ಕ್ರಮಗಳನ್ನು ಕೈಗೊಂಡಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಕಿಸಾನ್ ಮನ್ಧನ್ ಯೋಜನೆ ಸೇರಿದಂತೆ ಹಲವು ಕಾರ್ಯಕ್ರಮಗಳು ಆರ್ಥಿಕ ಭದ್ರತೆ, ಕೃಷಿ ಹಾನಿಯ ಪರಿಣಾಮ ತಗ್ಗಿಸುವಿಕೆಯ ಗುರಿಯನ್ನು ಹೊಂದಿವೆ.
ಭಾರತದ ಕೃಷಿ ಕ್ಷೇತ್ರವು ರಾಷ್ಟ್ರದ ಜನಸಂಖ್ಯೆಯ ಅರ್ಧದಷ್ಟು ಜನರಿಗೆ ಉದ್ಯೋಗ ನೀಡುತ್ತಿದೆ. ಇದು ದೇಶದ ಆರ್ಥಿಕತೆಯ ಮೂಲಾಧಾರವಾಗಿದೆ ಮತ್ತು ರಾಷ್ಟ್ರ ನಿರ್ಮಾಣದ ಪ್ರಮುಖ ಶಕ್ತಿಯಾಗಿದೆ. ದೇಶದ 328.7 ಮಿಲಿಯನ್ ಹೆಕ್ಟೇರ್‌ಗಳಲ್ಲಿ ಸರಿಸುಮಾರು 54.8% ರಷ್ಟು ಕೃಷಿ ಭೂಮಿ ಎಂದು ವರ್ಗೀಕರಿಸಲಾಗಿದೆ. ಹೀಗಾಗಿ ರೈತರು ಈ ದೇಶದ ಅಗತ್ಯ ವಲಯದ ತಳಹದಿಯಾಗಿದ್ದಾರೆ. ಅವರ ಪಾತ್ರವು ಕೇವಲ ಕೃಷಿಯಷ್ಟೇ ಅಲ್ಲ, ಅದರಿಂದ ಆಚೆಗೂ ಕೃಷಿಕರ ಪಾತ್ರ ಇದೆ. ಗ್ರಾಮೀಣ ಅಭಿವೃದ್ಧಿ ಮತ್ತು ರಾಷ್ಟ್ರನಿರ್ಮಾಣದಲ್ಲೂ ರೈತರ ಪಾಲು ದೊಡ್ಡದು. ಏಕೆಂದರೆ ಆಹಾರ ಭದ್ರತೆಯನ್ನು ಒದಗಿಸುವುದು ಹಾಗೂ ಲಕ್ಷಾಂತರ ಜನರ ಜೀವನೋಪಾಯವನ್ನೂ ಕೃಷಿ ಕಲ್ಪಿಸಿಕೊಡುತ್ತದೆ.
2023-24 ರಲ್ಲಿ, ದೇಶವು 332.2 ಮಿಲಿಯನ್ ಟನ್‌ಗಳ ಒಟ್ಟು ಆಹಾರ ಧಾನ್ಯ ಉತ್ಪಾದನೆಯನ್ನು ಸಾಧಿಸಿದೆ. ಹಿಂದಿನ ವರ್ಷ 329.7 ಮಿಲಿಯನ್ ಟನ್ ಉತ್ಪಾದನೆಯಾಗಿತ್ತು. ಈ ಗಮನಾರ್ಹ ಬೆಳವಣಿಗೆಯು ರಾಷ್ಟ್ರಕ್ಕೆ ಆಹಾರ ಭದ್ರತೆಯನ್ನು ನೀಡುತ್ತಿದೆ. ಹೀಗಾಗಿ ಕೃಷಿಕರ ಪ್ರಯತ್ನಗಳು ಕೇವಲ ಬೆಳೆ-ಕೃಷಿಯ ಮಾತ್ರವಲ್ಲ ಎನ್ನುವುದು ಮತ್ತೆ ಖಚಿತಪಡಿಸುತ್ತವೆ. ಇದಕ್ಕಾಗಿಯೇ ಕೃಷಿ ಎನ್ನುವುದು ಈ ದೇಶದ ಮೊದಲ ಆದ್ಯತೆಯ ಉದ್ಯೋಗ, ಸೇವೆ ಹಾಗೂ ದೇಶದ ಕೆಲಸ.
ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಡಿ.26 ರಂದು ತಮಿಳುನಾಡು ಕರಾವಳಿಯ ಬಳಿ ಶಿಥಿಲಗೊಳ್ಳುತ್ತಿದ್ದಂತೆಯೇ ಹಿಂಗಾರು…
ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಕಮಿಲ ಶಾಲಾ ವಠಾರದಲ್ಲಿ ಪಾವಂಜೆ ಶ್ರೀ ಜ್ಞಾನಶಕ್ತಿ…
23.12.24ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
22.12.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು, ದಕ್ಷಿಣ…
ಒಡಿಶಾ ರಾಜ್ಯ ಸರ್ಕಾರವು ಕೃಷಿಯಲ್ಲಿ ಹೊಸವಿಧಾನಗಳ, ಪರ್ಯಾಯ ಕೃಷಿಯ ಪಾತ್ರವನ್ನು ಪರೋಕ್ಷವಾಗಿ ಕೃಷಿಕರಿಗೆ…
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್…