Advertisement
Opinion

ಇಂದು ಹಿರಿಯ ನಾಗರಿಕರ ದಿನ | ಜೀವನವಿಡೀ ತೆರಿಗೆ ಕಟ್ಟಿದ ವರಿಷ್ಠ ನಾಗರೀಕನಿಗೆ ಸಿಗಲಿ ಸರ್ಕಾರಿ ಸೌಲಭ್ಯ

Share

ಅಂದಾಜು ಇಪ್ಪತ್ತರಿಂದ ಇಪ್ಪತ್ತೈದು ವರುಷ ಆಯುಸ್ಸಿನಲ್ಲಿ ಒಬ್ಬ ಮನುಷ್ಯ ದುಡಿಯಲು ಪ್ರಾರಂಭಿಸುತ್ತಾನೆ . ಅರವತ್ತು ವರುಷಕ್ಕೆ ಅವನಿಗೆ ವರಿಷ್ಠ ನಾಗರಿಕ(Senior Citizens) ಅನ್ನುತ್ತದೆ ಕಾಯದೆ ಮತ್ತು ಸಮಾಜ(Society). ಅಂದರೆ ಆತ ವರಿಷ್ಠ ನಾಗರಿಕ ಆಗುವ ಘಟ್ಟ ತಲುಪುವಾಗ ಮೂವತ್ತೈದರಿಂದ ನಲವತ್ತು ವರುಷ ದುಡಿದಿರುತ್ತಾನೆ. ಆ ದುಡಿಮೆಯನ್ನು(Work) ವಿಧವಿಧವಾಗಿ ಖರ್ಚು ಮಾಡಿರುತ್ತಾನೆ. ಆ ಖರ್ಚುಗಳ ಮೇಲೆ ತೆರಿಗೆ(Tax) ಕೊಟ್ಟಿರುತ್ತಾನೆ. ಆದಾಯ ತೆರಿಗೆ, ಉದ್ಯೋಗ ತೆರಿಗೆ, ಜಿಎಸ್‌ಟಿ, ಮನರಂಜನಾ ತೆರಿಗೆ, ವ್ಯಾಟ್, ಎಕ್ಸೈಸ್, ರಸ್ತೆ ತೆರಿಗೆ, ವಾಹನ ತೆರಿಗೆ, ಆಕ್ಟ್ರಾಯ್, ಹೆದ್ದಾರಿ ಟೋಲ್ ಹೀಗೆ ವಿಧವಿಧವಾದ ತೆರಿಗೆಗಳು. ಬೀಡಿ ಸೇದುವ ಕಾರ್ಮಿಕ ಕೂಡ ಅದರ ಮೇಲೆ ತೆರಿಗೆ ಕೊಟ್ಟಿರುತ್ತಾನೆ. ವಿಮಾನದಲ್ಲಿ ಹಾರಾಡುವ ಉದ್ಯೋಗಪತಿ ಕೂಡ ನೇರವಾಗಿ, ಪರೋಕ್ಷವಾಗಿ ತೆರಿಗೆ ಕೊಟ್ಟೇ ಇರುತ್ತಾನೆ .

Advertisement
Advertisement

ಇಂತಿಪ್ಪ ಈ ತೆರಿಗೆ ಪಾವತಿದಾರ ಜೀವನದ ಅರವತ್ತು ಸಂವತ್ಸರ ದಾಟಿದಾಗ ವರಿಷ್ಠ ನಾಗರಿಕ ಅನಿಸಿಕೊಳ್ಳುತ್ತಾನೆ. ಸಹಜವಾಗಿಯೇ ಆತನ ದುಡಿಯುವ ಶಕ್ತಿ, ತಥಾ ಉತ್ಪನ್ನ ಕಡಿಮೆಯಾಗುತ್ತವೆ. ನೌಕರಿ ಮಾಡುವವರಾದರೆ ನಿವೃತ್ತಿ. ದುಡಿಯುವ ದಿನಗಳಲ್ಲಿ ಎಲ್ಲ ತರಹದ ತೆರಿಗೆ ಪಾವತಿಸಿ ಚೂರು ಪಾರು ಉಳಿಸಿದ್ದರೆ, ಪಿಂಚಣಿ ಬರುವ ನೌಕರಿ ಇದ್ದರೆ ಪಿಂಚಣಿಯಿಂದ ಜೀವನದ ಉಳಿದ ಸಂಧ್ಯಾಕಾಲ ನೂಕಬೇಕು. ಈ ದಿನಗಳಲ್ಲಿ ಆತನಿಗೆ ಕೊಂಚ ಸಹಾಯವಾಗುವುದು ಠೇವಣಿಗಳ ಮೇಲೆ ದೊರೆಯುವ ಅರ್ಧ ಪ್ರತಿಶತ ಬಡ್ಡಿ, ಆದಾಯ ತೆರಿಗೆಯಲ್ಲಿ ದೊರೆಯುವ ವರುಷಕ್ಕೆ ಐವತ್ತು ಸಾವಿರ ಕಡಿತದ ರಿಯಾಯಿತಿ ಮತ್ತು ಪ್ರವಾಸ ಮಾಡುವಾಗ ದೊರೆಯುವ ರಿಯಾಯಿತಿ. ಉಳಿದಂತೆ ಬಾಕೀ ತೆರಿಗೆಗಳಾದ ಆದಾಯ ತೆರಿಗೆ, ಜಿಎಸ್‌ಟಿ, ಟೋಲ್ ಇತ್ಯಾದಿಗಳನ್ನು ಆತ ಕಟ್ಟಲೇಬೇಕು. ಈಗ ಕೇಂದ್ರ ಸರಕಾರ ಈ ರಿಯಾಯಿತಿಗಳಲ್ಲಿ ಒಂದಾದ ರೈಲು ಪ್ರಯಾಣದ ರಿಯಾಯಿತಿ ಸೌಲಭ್ಯವನ್ನು ಕೊನೆಗೊಳಿಸಿದೆ. ಕರೋನ ಕಾಲದಲ್ಲಿ ರದ್ದುಗೊಳಿಸಿದ್ದನ್ನು ಇನ್ನೂ ತನಕ ತಿರುಗಿ ಕೊಟ್ಟಿಲ್ಲ. ಕೊಡುವ ಲಕ್ಷಣಗಳೂ ಇಲ್ಲ.

Advertisement

ದುಬಾರಿ ದುನಿಯಾದಲ್ಲಿ ಇದ್ದ ಕೆಲವೇ ಕೆಲವು ಚಿಕ್ಕ ಪುಟ್ಟ ಸೌಲಭ್ಯಗಳಲ್ಲಿ ಒಂದರಿಂದ ವಂಚಿತನಾಗಿದ್ದಾರೆ ವರಿಷ್ಠ ನಾಗರಿಕರು. ಇನ್ನುಳಿದ ಚೂರುಪಾರು ಸೌಲಭ್ಯಗಳ ಕಡಿತಗಳು ಶೀಘ್ರದಲ್ಲೇ ಬರಬಹುದು. ವರಿಷ್ಠ ನಾಗರಿಕರು ಅದಕ್ಕೆ ಈಗಿನಿಂದಲೇ ಮಾನಸಿಕ ಸಿದ್ಧತೆ ಮಾಡಿಕೊಳ್ಳುವುದು ಉತ್ತಮ. ಮುಗಿಸುವ ಮುನ್ನ. ಈ ಚೂರುಪಾರು ಸೌಲಭ್ಯಗಳು ದಶಕಗಳ ಕಾಲ ತೆರಿಗೆ ಪಾವತಿಸಿದಾತನಿಗೆ ಸಮಾಜ, ಸರಕಾರ ಕೊಡುವ ಗೌರವ ಹೊರತಾಗಿ ಭಿಕ್ಷೆ ಇರಲಿಕ್ಕಿಲ್ಲ ಅಂತ ಅನಿಸಿದರೆ ತಪ್ಪಾ. ಕಡಿತಗಳಿಂದ ಕಡಿಮೆ ಆಗುವುದು ಗೌರವ ಹೊರತು ಭಿಕ್ಷೆಯಲ್ಲ ಅಂತ ಅನಿಸುತ್ತಿರುವದು ನನಗೊಬ್ಬನಿಗೇನಾ ? ನೆನಪಿರಲಿ, ಖರ್ಚುಗಳನ್ನು ಕಡಿಮೆ ಮಾಡಲು ಬೇರಾವ ಕ್ರಮಗಳನ್ನೂ ಸರಕಾರ ಕೈಗೊಂಡಿಲ್ಲ. ಈ ಉಳಿಪೆಟ್ಟು ( ಕೊಡಲಿ ಪೆಟ್ಟು ಅನ್ನುವದು ಬೇಡ ) ವರಿಷ್ಠ ನಾಗರಿಕರಿಗಷ್ಟೇ. ಉಳಿದಂತೆ ಮಂತ್ರಿಗಳ ಕಾರು, ಟೆಲಿಫೋನ್ ಖರ್ಚು ವೆಚ್ಚ, ಸಂಬಳ, ಇತರ ಸೌಕರ್ಯ, ಅವರುಗಳ ಬೆಂಗಾವಲಿನ ವಾಹನಗಳು ಎಲ್ಲ ಮೊದಲಿನಂತೇ ಇವೆ. ದೇಶಕ್ಕಾಗಿ ಕಿಂಚಿತ್ ತ್ಯಾಗ ಮಾಡುವ ಭಾಗ್ಯ ಕಲ್ಪಿಸಿದ ಸರಕಾರಕ್ಕೆ ಎಲ್ಲ ವರಿಷ್ಠ ನಾಗರಿಕರು ಕೃತಜ್ಞತೆ ಸಲ್ಲಿಸೋಣ. ಹಿರಿಯ ನಾಗರಿಕರ ದಿನದ ಶುಭಾಶಯಗಳು .

ಬರಹ :
ಮಾಧವ ಗೋಖಲೆ
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಗ್ರಾಮಗಳಲ್ಲಿ ನೀರಿನ ಹೊಂಡ | ಚಿತ್ರದುರ್ಗ ಜಿಲ್ಲೆಯ 7 ಹಳ್ಳಿಗಳಲ್ಲಿ ವಿಶ್ವಬ್ಯಾಂಕ್ ನೆರವಿನ ಯೋಜನೆ ಅನುಷ್ಟಾನ |

ಚಿತ್ರದುರ್ಗ ಜಿಲ್ಲೆಯ 7 ಹಳ್ಳಿಗಳಲ್ಲಿ 5 ಸಾವಿರದ 171 ಹೆಕ್ಟೇರ್ ಪ್ರದೇಶದಲ್ಲಿ ಯೋಜನೆ…

1 hour ago

ಕಿಸಾನ್‌ ಸಮ್ಮಾನ್‌ ನಿಧಿಯ ಮೂಲಕ ರೈತರಿಗೆ 21,000 ಕೋಟಿ ರೂಪಾಯಿ |

ಕಿಸಾನ್‌ ಸಮ್ಮಾನ್‌ ನಿಧಿಯಿಂದ 9 ಕೋಟಿ 50 ಲಕ್ಷ  ರೈತರಿಗೆ  21 ಸಾವಿರ…

3 hours ago

ತುಮಕೂರು ಜಿಲ್ಲೆಯಲ್ಲಿ ದಾಖಲೆಯ ಹಾಲು ಉತ್ಪಾದನೆ

ತುಮಕೂರು ಜಿಲ್ಲೆಯಲ್ಲಿ 1351 ಹಾಲು ಉತ್ಪಾದಕರ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿನಿತ್ಯ 9.40…

3 hours ago

ಕೋಲಾರದಲ್ಲಿ ಸಾವಿರಕ್ಕೂ ಅಧಿಕ ನಕಲಿ ವೈದ್ಯರ ವಿರುದ್ಧ ಪ್ರಕರಣ |

ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿನ  ಜೈವಿಕ ತ್ಯಾಜ್ಯಗಳನ್ನು ನಗರಸಭೆ ಕಸ ಹಾಗೂ ಜನನಿಬಿಡ ಪ್ರದೇಶಗಳಲ್ಲಿ…

3 hours ago

ಹೊರನಾಡು ದೇವಾಲಯದಲ್ಲಿ ವಸ್ತ್ರ ಸಂಹಿತೆ ಜಾರಿ

ಚಿಕ್ಕಮಗಳೂರು ಜಿಲ್ಲೆಯ ಹೊರನಾಡಿನ ಪ್ರಸಿದ್ದ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ವಸ್ತ್ರ ಸಂಹಿತೆ ಜಾರಿಗೆ ತರಲಾಗಿದೆ…

4 hours ago