Advertisement
Opinion

ಜಗತ್ತಿನಲ್ಲಿ ಹಸಿವಿನಿಂದ ಬಳಲುತ್ತಿರುವವರ ಸಂಖ್ಯೆ ಬರೋಬ್ಬರಿ 800 ಮಿಲಿಯನ್​

Share

ಹಸಿವು(Hungry). ಭೂಮಿ(Earth) ಮೇಲೆ ಇರುವ ಪ್ರತಿ ಜೀವಿಯ(Beings) ಸಹಜ ಕ್ರಿಯೆ. ಜೀವಿ ಭೂಮಿ ಮೇಲೆ ಬದುಕಬೇಕಾದರೆ ತಿನ್ನಲೇ ಬೇಕು. ಕೈಗೆ ಸಿಕ್ಕಿದ್ದನ್ನು ತಿಂದರೆ ಸಾಲದು. ಅದರಲ್ಲೂ ಮನುಷ್ಯರು, ಪ್ರಾಣಿಗಳು ತಿನ್ನುವ ಆಹಾರ(Food) ಪೌಷ್ಠಿಕಯುಕ್ತವಾಗಿ(Nutrient) ಇರಬೇಕು. ಭಾರತ(India) ಮಾತ್ರವಲ್ಲದೆ ವಿಶ್ವದ ಅನೇಕ ದೇಶಗಳಲ್ಲಿ ಆಹಾರದ ಕೊರತೆ ಇದೆ. ಈ ನಿಟ್ಟಿನಲ್ಲಿ ಜಗತ್ತಿನೆಲ್ಲೆಡೆ ಮೇ 28 ಅನ್ನು ವಿಶ್ವ ಹಸಿವಿನ ದಿನವನ್ನಾಗಿ(World Hunger Day) ಆಚರಿಸಲಾಗುತ್ತದೆ. ಈ ಮೂಲಕ ಹಸಿವು ಮತ್ತು ಆಹಾರದ ಮಹತ್ವ ಸಾರಲಾಗುತ್ತಿದೆ. 2011ರಲ್ಲಿ ಈ ದಿನಾಚರಣೆ ಅಸ್ತಿತ್ವಕ್ಕೆ ಬಂತು. ಈ ಮೂಲಕ ಹಸಿವು ಮತ್ತು ಬಡತನ ನಿವಾರಣೆಗೆ(Poverty) ಸುಸ್ಥಿರ ಪರಿಹಾರೋಪಾಯಗಳನ್ನು ಕೈಗೊಳ್ಳಲಾಗುತ್ತಿದೆ. ಆದರೂ ಕೂಡ ಜಗತ್ತಿನಲ್ಲಿ ಇಂದಿಗೂ 800 ಮಿಲಿಯನ್​ ಜನರು ಹೊಟ್ಟೆ ತುಂಬಾ ಊಟ ಸಿಗದೇ ಸಂಕಷ್ಟದಲ್ಲಿದ್ದಾರೆ.

Advertisement
Advertisement

ವಿಶ್ವ ಹಸಿವಿನ ದಿನದ ಧ್ಯೇಯ: ಜಗತ್ತಿನೆಲ್ಲೆಡೆ ಮಹಿಳೆಯರು ಮತ್ತು ಮಕ್ಕಳು ಯುದ್ಧ, ಬರ, ಹವಾಮಾನ ಬದಲಾವಣೆ ಮತ್ತಿತರ ಕಾರಣಗಳಿಂದ ಅಪೌಷ್ಟಿಕತೆ ಎದುರಿಸುತ್ತಿದ್ದಾರೆ. ಸದ್ಯ ಒಂದು ಬಿಲಿಯನ್‌ಗಿಂತಲೂ ಹೆಚ್ಚು ಹದಿಹರೆಯದ ಹುಡುಗಿಯರು ಮತ್ತು ಮಹಿಳೆಯರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಪರಿಣಾಮ, ಅಪೌಷ್ಟಿಕತೆ ತಾಯಿಯಿಂದ ಮಗುವಿಗೆ ಹರಡುತ್ತಿದೆ. ಇದು ಮಕ್ಕಳ ಮೆದುಳಿನ ಬೆಳವಣಿಗೆ ಮತ್ತು ಭವಿಷ್ಯದ ಮೇಲೆ ಪರಿಣಾಮ ಬೀರುತ್ತಿದೆ.

ಜಾಗತಿಕ ಹಸಿವಿನ ಸತ್ಯಾಂಶಗಳು:

  • ಜಗತ್ತು ಭೂಮಿ ಮೇಲಿರುವ 8 ಬಿಲಿಯನ್​ (800 ಕೋಟಿ) ಜನರಿಗಾಗುವಷ್ಟು ಆಹಾರ ತಯಾರಿಸಿದರೂ 828 ಮಿಲಿಯನ್​ ಮಂದಿ ಪ್ರತೀನಿತ್ಯ ಹಸಿವಿನಿಂದ ಬಳಲುತ್ತಿದ್ದಾರೆ.
  • ಶೇ.42ರಷ್ಟು ಜನರಿಗೆ ಒಳ್ಳೆಯ, ಆರೋಗ್ಯಯುತ ಆಹಾರ ಸಿಗುತ್ತಿಲ್ಲ.
  • ಜಾಗತಿಕವಾಗಿ ಒಂದು ಬಿಲಿಯನ್​ ಯುವತಿಯರು ಮತ್ತು ಮಹಿಳೆಯರು ಅಪೌಷ್ಟಿಕತೆ ಹೊಂದಿದ್ದಾರೆ.
  • 5 ವರ್ಷದೊಳಗಿನ 149 ಮಿಲಿಯನ್​ ಮಕ್ಕಳು ಕುಂಠಿತ ಬೆಳವಣಿಗೆ ಹೊಂದಿದ್ದಾರೆ.
  • ಜಾಗತಿಕವಾಗಿ 2.3 ಬಿಲಿಯನ್​ ಜನರು, ಅಂದರೆ ಶೇ.29.6ರಷ್ಟು ಜನರು ಬೇಕಾದಷ್ಟು ಆಹಾರ ಹೊಂದಿಲ್ಲ.
  • ಪ್ರತೀ ವರ್ಷ 9 ಮಿಲಿಯನ್​ ಜನರು ಹಸಿವು ಸಂಬಂಧಿತ ಕಾರಣಗಳಿಂದ ಸಾವನ್ನಪ್ಪುತ್ತಿದ್ದಾರೆ. ಅದರಲ್ಲಿ ಬಹುತೇಕರು 5 ವರ್ಷದೊಳಗಿನವರು ಅನ್ನೋದು ಗಮನಾರ್ಹ.
  • ಐದು ವರ್ಷದೊಳಗಿನ 45 ಮಿಲಿಯನ್​ ಮಕ್ಕಳು ಹಸಿವಿನಿಂದ ಸಂಕಷ್ಟದಲ್ಲಿದ್ದಾರೆ.
  • 2022ರಲ್ಲಿ ಈ ಹಸಿವಿನ ಪ್ರಮಾಣ ಶೇ.25ರಷ್ಟು ಹೆಚ್ಚಾಯಿತು. ಇದಕ್ಕೆ ಕಾರಣ ಉಕ್ರೇನ್​ ಯುದ್ಧ.

ಆಹಾರ ಬಿಕ್ಕಟ್ಟಿನ ಜಾಗತಿಕ ವರದಿ: ಈ ವರದಿಯ ಪ್ರಕಾರ, 2030ರ ವೇಳೆಗೆ ಜಾಗತಿಕ ಹಸಿವು ಕೊನೆಗೊಳಿಸುವ ಗುರಿ ಇದೆ. 2023ರಲ್ಲಿ, ಸುಮಾರು 282 ಮಿಲಿಯನ್ ಜನರು ಅಥವಾ 59 ದೇಶಗಳ ಶೇ.21.5ರಷ್ಟು ಜನರು ಹಸಿವನ್ನು ಹೆಚ್ಚಿನ ತೊಂದರೆ ಎದುರಿಸಿದ್ದಾರೆ. 2022ರಿಂದ 24 ಮಿಲಿಯನ್ ಜನರು ತೀವ್ರ ತುರ್ತು ಆಹಾರ ಮತ್ತು ಜೀವನೋಪಾಯಕ್ಕೆ ಅಗತ್ಯವಿರುವ ಆಹಾರ ಅಭದ್ರತೆ ಎದುರಿಸಿದ್ದರು.

ಆಹಾರ ತ್ಯಾಜ್ಯ ಸೂಚ್ಯಂಕ ವರದಿ: ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ ಆಹಾರ ತ್ಯಾಜ್ಯ ಸೂಚ್ಯಂಕ 2024ರ ಪ್ರಕಾರ, 1.05 ಬಿಲಿಯನ್​ ಟನ್​ ಆಹಾರ ವ್ಯರ್ಥವಾಗುತ್ತಿದೆ. ಶೇ.13ರಷ್ಟು ಜನರು ಪೂರೈಕೆ ಸರಪಳಿಯಲ್ಲಿ ಆಹಾರ ನಷ್ಟ ಅನುಭವಿಸುತ್ತಿದ್ದಾರೆ. ಜಗತ್ತಿನ ಬಹುತೇಕ ಆಹಾರ ವ್ಯರ್ಥಗಳು ಮನೆಗಳಲ್ಲಿಯೇ ನಡೆಯುತ್ತಿದೆ. ಒಟ್ಟು 631 ಮಿಲಿಯನ್​ ಟನ್​ ಆಹಾರ ವ್ಯರ್ಥವಾಗುತ್ತಿದೆ. ಆಹಾರ ಸೇವೆ ಮತ್ತು ಚಿಲ್ಲರೆ ವಲಯದಲ್ಲಿ ಕ್ರಮವಾಗಿ 290 ಮತ್ತು 131 ಮಿಲಿಯನ್​ ಟನ್​ ಆಹಾರ ವ್ಯರ್ಥವಾಗುತ್ತಿದೆ. ಸರಾಸರಿ, ವ್ಯಕ್ತಿಯೊಬ್ಬ ವರ್ಷಕ್ಕೆ 79 ಕೆ.ಜಿ ಆಹಾರ ವ್ಯರ್ಥ ಮಾಡುತ್ತಾನೆ. ಇದು ಜಾಗತಿಕವಾಗಿ ಹಸಿವಿನಿಂದ ಬಳಲುತ್ತಿರುವ 1.3 ಮಿಲಿಯನ್​ ಜನರ ಪ್ರತಿನಿತ್ಯದ ಆಹಾರಕ್ಕೆ ಸಮವಾಗಿದೆ.

ಅಧಿಕ ಆದಾಯ, ಮಧ್ಯಮ ಮೇಲ್ವರ್ಗ ಮತ್ತು ಕೆಳ ಮಧ್ಯಮ ಆದಾಯದ ದೇಶಗಳಲ್ಲಿ ಈ ಆಹಾರ ತ್ಯಾಜ್ಯ ಪ್ರಮಾಣದ ಮಟ್ಟ ಮನೆಗಳಲ್ಲಿ ಭಿನ್ನವಾಗಿದ್ದು, ಸರಾಸರಿ 7 ಕೆ.ಜಿ ಇದೆ. ಮಧ್ಯಮ ಆದಾಯದ ದೇಶದಲ್ಲಿ ನಗರಕ್ಕೆ ಹೋಲಿಕೆ ಮಾಡಿದಾಗ ಗ್ರಾಮೀಣ ಪ್ರದೇಶದಲ್ಲಿ ಆಹಾರ ತ್ಯಾಜ್ಯ ಕಡಿಮೆ ಆಗಿದೆ. ಇಲ್ಲಿ ಆಹಾರವನ್ನು ಪ್ರಾಣಿಗಳಿಗೆ, ಮನೆಯಲ್ಲಿ ಮಿಶ್ರ ಗೊಬ್ಬರವಾಗಿ ಪುನರ್​ಬಳಕೆ ಮಾಡಲಾಗುತ್ತದೆ. ಈ ವರದಿಯು ಆಹಾರ ವ್ಯರ್ಥ್ಯವನ್ನು ಕಡಿಮೆಗೊಳಿಸುವ ಗುರಿ ಹೊಂದಿದೆ.

ಭಾರತದ ಹಸಿವಿನ ಪ್ರಮಾಣ: 2023ರಲ್ಲಿ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ 125 ದೇಶಗಳಲ್ಲಿ ಭಾರತ 111ನೇ ಸ್ಥಾನ ಪಡೆದಿತ್ತು. 28.7 ಸ್ಕೋರ್​ ಹೊಂದುವ ಮೂಲಕ ದೇಶದಲ್ಲಿ ಹಸಿವನ ಮಟ್ಟ ಗಂಭೀರವಾಗಿದೆ. ವಿಶ್ವದಲ್ಲೇ ಭಾರತ ಅತೀ ಹೆಚ್ಚು ಮಕ್ಕಳ ವ್ಯರ್ಥ ದರ ಹೊಂದಿದೆ. ಇದು ಅಪೌಷ್ಟಿಕತೆಗೆ ಕಾರಣವಾಗುತ್ತದೆ. ಈ ಸೂಚ್ಯಂಕದ ಪ್ರಕಾರ, ಭಾರತದ ಅಪೌಷ್ಟಿಕತೆ ದರವು ಶೇ.16.6ರಷ್ಟಿದೆ. ಐದು ವರ್ಷದೊಳಗಿನ ಮಕ್ಕಳ ಸಾವಿನ ಸಂಖ್ಯೆ ಶೇ.3.1ರಷ್ಟಿದೆ. 15ರಿಂದ 24 ವರ್ಷದ 58.1ರಷ್ಟು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ.

ಭಾರತದಲ್ಲಿ ಅಕ್ಕಿ, ಗೋಧಿ, ಹಾಲು ಮತ್ತು ಕಬ್ಬು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಕೃಷಿ ಉತ್ಪನ್ನವಾದರೂ, ಲಕ್ಷಾಂತರ ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಜಗತ್ತಿನಲ್ಲಿ 190 ಮಿಲಿಯನ್​ ಜನರು ಹಸಿವಿನಿಂದ ಬಳಲಿದರೆ, ಭಾರತದಲ್ಲಿ 1.4 ಬಿಲಿಯನ್​ ಜನರು ಹಸಿವಿನಿಂದಿದ್ದಾರೆ. ಇದಕ್ಕೆ ಕಾರಣ ಪೂರೈಕೆ ಸರಪಳಿ ನಷ್ಟ. ಭಾರತ ಕಳಪೆ ಮೂಲಸೌಕರ್ಯ ಹೊಂದಿದ್ದು, ಇದರ ಪರಿಣಾಮ ಶೇ 40 ಆಹಾರಗಳ ಕೃಷಿ ಬಳಿಕ ನಷ್ಟವಾಗುತ್ತಿದೆ. ಶೀತಲ ಸಂಗ್ರಹಣೆ ಇಲ್ಲದೇ ತರಕಾರಿ ಮತ್ತು ಹಣ್ಣುಗಳು ಹಾಳಾಗುತ್ತಿದೆ. ನೂರಾರು ಟನ್ ಆಹಾರ ಧಾನ್ಯಗಳು ಗೋದಾಮುಗಳಲ್ಲಿ ಕೊಳೆಯುವ ಅಪಾಯವಿದೆ. ಭಾರತದ ಕಡಿಮೆ ಉತ್ಪಾದಕತೆಗೆ ಅಸಮರ್ಥ ಆಹಾರ ವಿತರಣಾ ವ್ಯವಸ್ಥೆಗಳು, ಅನಿಯಮಿತ ಮತ್ತು ಅಸಾಮಾನ್ಯ ಹವಾಮಾನ, ನಿಯಮಗಳು ಮತ್ತು ರೈತರಿಗೆ ಶಿಕ್ಷಣ ಮತ್ತು ತರಬೇತಿಯ ಕೊರತೆ ಕೂಡ ಪ್ರಮುಖ ಅಂಶವಾಗಿದೆ ಎಂದು ಅಂತಾರಾಷ್ಟ್ರೀಯ ವ್ಯಾಪಾರ ಸಂಸ್ಥೆ ತಿಳಿಸಿದೆ.

ಭಾರತದ ಹಸಿವಿನ ಹೋರಾಟ- ಪೋಷಣ್​ ಅಭಿಯಾನ: 2018ರಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆರಂಭಿಸಿದ ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಮಕ್ಕಳು ಮತ್ತು ಮಹಿಳೆಯರಲ್ಲಿ ಕುಂಠಿತ ಬೆಳವಣಿಗೆ, ಅಪೌಷ್ಟಿಕಾಂಶತೆ ಮತ್ತು ರಕ್ತ ಹೀನತೆ ಕಡಿಮೆ ಮಾಡುವುದಾಗಿದೆ.

– ಅಂತರ್ಜಾಲ ಮಾಹಿತಿ

ಪ್ರತಿಕ್ರಿಯಿಸಲು....
ಈ ಕೆಳಗಿನ ಲಿಂಕ್‌ ಮೂಲಕ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು…

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

AI, ಡ್ರೋನ್ ಮತ್ತು ಸ್ವಯಂಚಾಲಿತ ಯಂತ್ರಗಳು | ಕಾರ್ಮಿಕ ಕೊರತೆಯ ನಡುವೆ ಕೃಷಿಗೆ ರೋಬೋಟ್ ಪರಿಹಾರ

ಸಣ್ಣ ರೈತರ ಕೃಷಿಯಲ್ಲಿ ಕಾರ್ಮಿಕ ಕೊರತೆ, ವೆಚ್ಚ ಏರಿಕೆ ಸಮಸ್ಯೆ ನಿವಾರಣೆಗೆ ರೋಬೋಟಿಕ್ಸ್,…

5 hours ago

“ಕ್ಯಾನ್ಸರ್ ಮ್ಯಾಪಿಂಗ್” – ರೋಗ ತಡೆಯುವ ಮೊದಲ ಹೆಜ್ಜೆ

ಕ್ಯಾನ್ಸರ್ ವಿರುದ್ಧ ಹೋರಾಟ ಎಂದರೆ ಕೇವಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದು ಮಾತ್ರವಲ್ಲ. ರೋಗ…

5 hours ago

ರಾಜ್ಯದಲ್ಲಿ 3 ವರ್ಷದಲ್ಲಿ 432 ಮಂದಿ ಅಕ್ರಮ ವಿದೇಶಿ ವಲಸಿಗರು ಪತ್ತೆ | ಬೆಂಗಳೂರು ನಗರದಲ್ಲೇ 328 ಪ್ರಕರಣ

ರಾಜ್ಯದಲ್ಲಿ ಅಕ್ರಮ ವಲಸಿಗರು ಹಾಗೂ ಬಾಂಗ್ಲಾ ಅಕ್ರಮ ವಲಸಿಗರ ಬಗ್ಗೆ ಮಾಹಿತಿಯನ್ನು ವಿಧಾನಪರಿಷತ್‌…

5 hours ago

ಮಾಯಾಮೃಗ ಮಾಯಾಮೃಗ….

ಪ್ರಯತ್ನ, ಪರಿಶ್ರಮ, ಛಲ ಇದ್ದರೂ ಸೋಲು ಬೆನ್ನತ್ತಿದರೆ ಕಾರಣವೇನು? ಹಿರಿಯರ ಪಾಪದ ಫಲ,…

6 hours ago

ಬೇಸಿಗೆ ಕುಡಿಯುವ ನೀರು ಸಮಸ್ಯೆ ಎದುರಾಗದಂತೆ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಯಾವುದೇ ರೀತಿ ತೊಂದರೆಯಾಗದಂತೆ  ಅಗತ್ಯ ಕ್ರಮ…

6 hours ago

ಅಂಕಗಳಾಚೆಗೂ ಒಂದು ಲೋಕವಿದೆ : ಇದು ಮಕ್ಕಳಿಗೆ ಬದುಕನ್ನು ಕಲಿಸುವ ಶಿಕ್ಷಣ

ಶಾಲೆಯ ಹಂತದಲ್ಲಿ ಮಕ್ಕಳಿಗೆ ಕಲಿಸಬೇಕಾದ ಶಿಕ್ಷಣ ಏನು..?.  ಈ ಪ್ರಶ್ನೆಗೆ ಹಲವರದು ಹಲವು…

16 hours ago