ಮಾಹಿತಿ

ನಮ್ಮಪರಿಸರ | ಇಂದು ವಿಶ್ವ ಪ್ಯಾಂಗೋಲಿಯನ್ ದಿನ | ಅಳಿವಿನಂಚಿನಲ್ಲಿವೆ ಚಿಪ್ಪು ಹಂದಿ ಸಂತತಿ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ವಿಶ್ವ ಪ್ಯಾಂಗೋಲಿನ್ ದಿನವನ್ನು  ಪ್ರತಿವರ್ಷ ಫೆಬ್ರವರಿ ಮೂರನೇ ಶನಿವಾರ ಆಚರಿಸಲಾಗುತ್ತದೆ. ವಿಶ್ವದಲ್ಲಿ ಅತೀ ಹೆಚ್ಚು ಕಳ್ಳಸಾಗಣೆಗೆ ಬಲಿಯಾಗಿ ವಿನಾಶವಾಗುವ ಹಂತ ತಲುಪಿದ ಪ್ಯಾಂಗೋಲಿನ್ಗಳ ಬಗೆಗೆ ಅರಿವು ಹಾಗು ನಿಸರ್ಗದಲ್ಲಿ ಅವುಗಳ ಪಾತ್ರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ 2012 ರಿಂದ ವಿಶ್ವ ಪ್ಯಾಂಗೋಲಿನ್ ದಿನವನ್ನು ಆಚರಿಸಲಾಗುತ್ತದೆ.

Advertisement

ಪ್ಯಾಂಗೋಲಿನ್ ಅಥವಾ ಚಿಪ್ಪುಹಂದಿ ಬಗೆಗೆ ಕೆಲವು ಕುತೂಹಲಕರ ಮಾಹಿತಿ ಇಲ್ಲಿವೆ:  ಚಿಪ್ಪು ಹಂದಿಗಳು ಆಫ್ರಿಕಾ ಹಾಗು ಏಷಿಯಾ ಈ ಎರಡು ಖಂಡಗಳಿಗೆ ಸೀಮಿತವಾಗಿದ್ದು ಇವುಗಳಲ್ಲಿ ಒಂದೇ ಕುಟುಂಬಕ್ಕೆ ಸೇರಿದ ಎಂಟು ಜಾತಿಗಳಿದ್ದು ನಾಲ್ಕು ಆಫ್ರಿಕಾದಲ್ಲಿದ್ದರೆ ಉಳಿದ ನಾಲ್ಕು ಏಷಿಯಾದಲ್ಲಿವೆ. ಇವು ವಿಕಾಸದಲ್ಲಿ ಅಷ್ಟಾಗಿ ಮುಂದುವರಿಯದ ಹಳೆ ಜಗತ್ತಿನ ಪ್ರಾಣಿಗಳು, ಇವುಗಳ ಬಾಯಲ್ಲಿ ಹಲ್ಲುಗಳಿಲ್ಲ, ಕಿವಿಗಳು ವಿಶೇಷವಾಗಿ ಬೆಳೆದಿಲ್ಲ ಹಾಗು ಚಿಕ್ಕ ಕಣ್ಣುಗಳಿವೆ, ನಾಲಿಗೆ ದೇಹಕ್ಕಿಂತ ಉದ್ದವಾಗಿದೆ.

ಚಿಪ್ಪುಗಳ ಹೊದಿಕೆ ಇರುವ ಪ್ರಪಂಚದ ಏಕಮಾತ್ರ ಸಸ್ತನಿಗಳು ಇವು, ಏಷಿಯಾದ ಪ್ಯಾಂಗೋಲಿನ್ಗಳ ಮೈಮೇಲೆ ವಿರಳ ಕೂದಲುಗಳು ಇವೆ, ಕೂದಲುಗಳ ಇರುವಿಕೆ ಸಸ್ತನಿಗಳ ಮುಖ್ಯ ಲಕ್ಷಣಗಳಾಗಿವೆ. ಭಾರತದಲ್ಲಿ ಚೈನೀಸ್ ಪ್ಯಾಂಗೋಲಿನ್ ಹಾಗು ಇಂಡಿಯನ್ ಪ್ಯಾಂಗೋಲಿನ್ ಈ ಎರಡು ಜಾತಿಗಳಿವೆ.  ಪ್ಯಾಂಗೋಲಿನ್ ಗಳಿಗೆ ಮಲಯ ಭಾಷೆಯಲ್ಲಿ ಗುಂಡಾಗಿ ಉರುಳು ಎಂಬ ಅರ್ಥವಿದೆ.

ಇವುಗಳ ಮುಖ್ಯ ಆಹಾರ, ಗೆದ್ದಲು ಇರುವೆ ಹಾಗು ಕೆಲವು ಹುಳುಗಳು(Maggot) ದಿನಕ್ಕೆ ಹತ್ತರಿಂದ ಇಪ್ಪತ್ತು ಸಾವಿರ ಇರುವೆ ಗೆದ್ದಲನ್ನು ತಿನ್ನಬಲ್ಲವು.  ಮರಿಗಳನ್ನ ಬಾಲದ ಮೇಲೆ ಕೂರಿಸಿಕೊಂಡು ಸವಾರಿ ಮಾಡುತ್ತವೆ.  ಕಾಂಕ್ರೀಟಿನಷ್ಟು ಗಟ್ಟಿಯಾದ ನೆಲವನ್ನು ಸುಲಭವಾಗಿ ಅಗೆಯುತ್ತವೆ, ಕಾಡಿನಲ್ಲಿ ದೊಡ್ಡ ಹಾಗು ಆಳವಾದ ಬಿಲಗಳನ್ನು ಕೊರೆವ ಶಕ್ತಿ ಚಿಪ್ಪು ಹಂದಿಗಳಿಗೆ ಮಾತ್ರ ಇದೆ, ಈ ಬಿಲಗಳಲ್ಲಿ ಮುಳ್ಳುಹಂದಿಗಳು ಹೆಬ್ಬಾವು ವಾಸಿಸುತ್ತವೆ.

ನಮ್ಮ ರಾಜ್ಯದಲ್ಲಿ ಇಂಡಿಯನ್ ಪ್ಯಾಂಗೋಲಿನ್ ಮಾತ್ರ ಕಾಣಿಸುತ್ತದೆ.  ರಾತ್ರಿ ಸಂಚಾರಿಗಳು ಹಾಗು ನಿಧಾನವಾಗಿ ಚಲಿಸುತ್ತವೆ. ಚಿಪ್ಪುಗಳು ನಮ್ಮ ಬೆರಳಿನ ಉಗುರುಗಳಂತೆ ಕೆರಾಟಿನ್ ಎಂಬ ಪದಾರ್ಥರಿಂದ ರಚನೆಯಾಗಿದ್ದು  ಇವು ಯಾವುದೇ ಔಷಧಿಯ ಗುಣ ಹೊಂದಿಲ್ಲ.

ಮಾಂಸಕ್ಕಾಗಿ ಮಾತ್ರ ಬೇಟೆ ನಡೆಯುತ್ತಿದ್ದಾಗ ಇವುಗಳ ಸಂಖ್ಯೆ ಸ್ವಲ್ಪ ಸಮಾಧಾನಕರವಾಗಿತ್ತು, ಯಾವಾಗ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇವುಗಳ ಚಿಪ್ಪು, ಮಾಂಸಕ್ಕೆ ಬೇಡಿಕೆ ಹೆಚ್ಚಾಯಿತೋ ಅಂದಿನಿಂದ ಇವುಗಳ ಬೇಟೆ ಹಾಗು ಜೀವಂತ ಸೆರೆ ಹಿಡಿಯುವಿಕೆ ಹೆಚ್ಚತೊಡಗಿತು. ಹಾರೆ ಗುದ್ದಲಿಯೊಂದಿಗೆ ಕಾಡಿಗೆ ನುಗ್ಗಿ ಚಿಪ್ಪುಹಂದಿಗಳ ಬಿಲಗಳನ್ನು ಅಗೆದು ಹಿಡಿಯತೊಡಗಿದರು.

ಕಳೆದೊಂದು ದಶಕದಲ್ಲಿ  ಸುಮಾರು 10 ಲಕ್ಷಕ್ಕೂ ಅಧಿಕ ಪ್ಯಾಂಗೋಲಿನ್ ಗಳ ಮಾರಣ ಹೋಮ ಮಾಡಲಾಗಿದೆ. ಚೀನಾ ಹಾಗು ವಿಯೆಟ್ನಾಂ ದೇಶಗಳಲ್ಲಿ ಚಿಪ್ಪುಹಂದಿ ಅಂಗಾಂಗಳಿಂದ  ಸಾಂಪ್ರದಾಯಕ ಔಷಧಿ ತಯಾರಿಸುತ್ತಾರೆ ವೇಗವಾಗಿ ಅಳಿಯುತ್ತಿರುವ ಇವುಗಳನ್ನು ಸಂರಕ್ಷಣೆ ಮಾಡದ್ದಿದ್ದರೆ ಮುಂದಿನ ದಿನಗಳಲ್ಲಿ ಇವುಗಳನ್ನು ಚಿತ್ರಗಳಲ್ಲಿ ಮಾತ್ರ ನೋಡಲು ಸಾಧ್ಯವಿದೆ.1972 ರ ವನ್ಯಜೀವಿ ಕಾಯ್ದೆಯ ಶೆಡ್ಯೂಲ್ 1 ರಲ್ಲಿ ಸಂರಕ್ಷಣೆಗೊಳಪಟ್ಟಿವೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಒತ್ತುವರಿಯಾಗಿರುವ  ಕೆರೆಗಳನ್ನು ಮುಲಾಜಿಲ್ಲದೆ ತೆರವುಗೊಳಿಸಲು ಮುಖ್ಯಮಂತ್ರಿ ಸೂಚನೆ

ಖಾಸಗಿಯವರಿಂದ ಒತ್ತುವರಿಯಾಗಿರುವ  ಪ್ರದೇಶವನ್ನು ಯಾವುದೇ ಮುಲಾಜಿಲ್ಲದೆ ತೆರವುಗೊಳಿಸಲು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮುಖ್ಯಮಂತ್ರಿ…

3 hours ago

ಭಾರತದಿಂದ ಅಫ್ಘಾನಿಸ್ತಾನಕ್ಕೆ 4.8 ಟನ್ ಜೀವರಕ್ಷಕ ಲಸಿಕೆ ರವಾನೆ

ಭಾರತವು 4.8 ಟನ್ ಲಸಿಕೆಗಳನ್ನು ಅಫ್ಘಾನಿಸ್ತಾನಕ್ಕೆಕಳುಹಿಸುವ ಮೂಲಕ ಮಾನವೀಯ ನೆರವು ನೀಡಿದೆ. ಇದರಲ್ಲಿ…

3 hours ago

ಭ್ರಷ್ಟಾಚಾರದ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ  | ಉಪಲೋಕಾಯುಕ್ತ ಬಿ. ವೀರಪ್ಪ ಎಚ್ಚರಿಕೆ

ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದು, ಭ್ರಷ್ಟಾಚಾರದ ವಿರುದ್ಧ…

3 hours ago

ಶುಕ್ರ ಮತ್ತು ರಾಹು ಮೀನ ರಾಶಿಯಲ್ಲಿ ಸಂಯೋಗ | 5 ರಾಶಿಚಕ್ರಗಳಲ್ಲಿ ವಿಶೇಷ ಪ್ರಭಾವ |

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

3 hours ago

ಸಂಜೀವಿನಿ ಸ್ವ ಸಹಾಯ ಸಂಘಗಳ ಸದಸ್ಯರ ಉತ್ಪನ್ನಗಳ ಪ್ರದರ್ಶನ ಮಾರಾಟ ಮೇಳ | ಜಿಲ್ಲೆಯ ಅತ್ಯುತ್ತಮ ಕೃಷಿ ಸಖಿ ಪ್ರಶಸ್ತಿ ಸಂಪಾಜೆ ಮೋಹಿನಿ ವಿಶ್ವನಾಥ್ ಅವರಿಗೆ

ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ಕರ್ನಾಟಕ…

13 hours ago

ಹವಾಮಾನ ವರದಿ | 24-04-2025 | ಎ.26 ರಿಂದ ರಾಜ್ಯದ ವಿವಿದೆಡೆ ಮಳೆ ಪ್ರಮಾಣ ಹೆಚ್ಚಳ |

ಈಗಿನಂತೆ ಎಪ್ರಿಲ್ 26ರಿಂದ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆ ಆರಂಭವಾಗುವ ನಿರೀಕ್ಷೆ ಇದೆ.

14 hours ago